ಚಾಮರಾಜನಗರ :
ಹನೂರು ತಾಲ್ಲೂಕಿನ ಸಂದನಪಾಳ್ಯದ ಸೇಂಟ್ ಆನ್ಸ್ ಚರ್ಚ್ ಉದ್ಘಾಟನೆಯು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಬಿಷಪ್ ಬರ್ನಾರ್ಡ್ ಮೋರಸ್ ಮೈಸೂರು ಧರ್ಮಪ್ರಾಂತ್ಯದ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಮತ್ತು ಊಟಿ ಬಿಷಪ್ ಅಮಲರಾಜ್ ಮತ್ತು ಮೈಸೂರಿನ ನಿವೃತ್ತ ಬಿಷಪ್ ಥಾಮಸ್ ಆಂಟನಿ ಸೇರಿದಂತೆ ಇನ್ನಿತರರು ಚರ್ಚ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಮ್.ಆರ್.ಮಂಜುನಾಥ್ ಹಾಗೂ ಸಂದನಪಾಳ್ಯ ವಿಚಾರಣೆಯ ಗುರುಗಳಾದ ಫಾದರ್ ಫ್ರಾನ್ಸಿಸ್ ಸೇರಿದಂತೆ ಎಲ್ಲಾ ಗುರುಗಳು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್