ಉತ್ತರ ಕರ್ನಾಟಕದ ಜೋಳದ ರೊಟ್ಟಿ,ಚವಳಿ ಕಾಯಿ,ಬದನೆಕಾಯಿ,ಮಿರ್ಚಿ,ಅನ್ನ,ಸಾರು,ಶೇಂಗಾ ,ಗುರೆಳ್ಳು,ಅಗಸಿ ಚಟ್ನಿ ಸಮೇತ ಊಟ ಮಾಡಿದವರು ಅದರ ಸವಿರುಚಿ ಮರೆಯಲು ಸಾಧ್ಯವಿಲ್ಲ.
ಉದ್ಯೋಗ,ಅನ್ನ ಹುಡುಕಿಕೊಂಡು ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಜನರಿಗೆ ತಮ್ಮ ಮನೆಯ ಸಾಂಪ್ರದಾಯಿಕ ಆಹಾರ ಸದಾ ಒಂದು ಧ್ಯಾನವೇ ಸರಿ.ಅಂತಹ ಜನರ ಬಾಯಿರುಚಿ ತಣಿಸಲು KA 37 ಗವಿಶ್ರೀ ಹೋಟೆಲ್ ಹೆಸರಿನ ಪುಟ್ಟ ಫಾಸ್ಟ್ ಖಾನಾವಳಿಯೊಂದು ಬೆಂಗಳೂರಿನಲ್ಲಿದೆ.ಈ ಮಹಾನಗರಿಯಲ್ಲಿ KA 37 ಗವಿಶ್ರೀ ಹೆಸರು ಕಂಡೊಡನೆ ಉತ್ಸಾಹ ಇಮ್ಮಡಿಯಾಯಿತು.ಕೂಕನಪಳ್ಳಿ ಗ್ರಾಮದ ಲಿಂಗರಾಜ ಹೊಸಮನಿ ತಮ್ಮ ತಾಯಿಯವರೊಂದಿಗೆ ಈ ಹೋಟೆಲ್ ನಡೆಸುತ್ತಿದ್ದು,ಶುಚಿ-ರುಚಿ,ಸರಳ,ಸುಲಭ ದರದಲ್ಲಿ ಊಟ ಬಡಿಸುತ್ತಿದ್ದಾರೆ..
ಹೋಟೆಲ್ ಎಲ್ಲಿದೆ?
ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಕಡೆ ಹೋಗುವ ಮಾರ್ಗದ ರಿಂಗ್ ರಸ್ತೆಯಲ್ಲಿ ಭದ್ರಪ್ಪ ಲೇಔಟಿನ ಬಸ್ ಸ್ಟಾಪಿನ ಬಳಿಯ ಫ್ಲೈ ಓವರ್ ಪಕ್ಕದಲ್ಲಿಯೇ ಇರುವ ಈ ಹೋಟೇಲಿಗೆ ನೀವೂ ಒಮ್ಮೆ ಭೇಟಿ ನೀಡಿ.
ಲಿಂಗರಾಜ ಹೊಸಮನಿ ಅವರ ಸಂಪರ್ಕ ಸಂಖ್ಯೆ
9535126999.