ಚಿಕ್ಕಮಗಳೂರು:ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ ನೈಋತ್ಯ ಚಿತ್ರದ ಮುಹೂರ್ತ ಇತ್ತೀಚೆಗೆ ಭಕ್ತರಹಳ್ಳಿ ದುರ್ಗಮ್ಮ ಮತ್ತು ಸಿಡಿಬಿನಮ್ಮ ದೇವಸ್ಥಾನದಲ್ಲಿ ನಡೆಯಿತು.
ದರೋಡೆಕಾರರ ಸಮುದಾಯದ ಶೋಷಣೆಯ ಬಗೆಗಿನ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದ ನಾಯಕರಾಗಿ ತೇಜಸ್ ಅಭಿನಯಿಸುತ್ತಿದ್ದಾರೆ ಉಳಿದಂತೆ ರಾಜೇಶ್,ನಂದನ್,ಲುಕಾಸ್, ರಾಘವೇಂದ್ರ,ಪೃಥ್ವಿ,ರಮ್ಯ,ಮನು ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಜೀವ ಕ್ರಿಯೇಷನ್ ಮತ್ತು ಸ್ವೀಟ್ ಲೈಫ್ ಲಾಂಛನದಲ್ಲಿ ಕುಮಾರಿ ಸಂಗೀತ ರಂಗನಾಥ್ ಮತ್ತು ಅಶ್ವಿನಿ ಸುಧೀಂದ್ರ ಅವರು ನಿರ್ಮಿಸುತ್ತಿದ್ದು ನೈಋತ್ಯ ಚಿತ್ರಕ್ಕೆ ಹಲವು ಚಿತ್ರಕ್ಕೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅನುಭವವಿರುವ ನಿರಂಜನ್ ರಂಗನಾಥ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ,ಈ ಚಿತ್ರದ ಮಹೂರ್ತ ಸಮಾರಂಭದಲ್ಲಿ ಪ್ರಥಮ ಸನ್ನಿವೇಶಕ್ಕೆ ಕುಮಾರಿ ಸಂಗೀತ ರಂಗನಾಥ್ ಆರಂಭ ಫಲಕ ತೋರಿಸಿದರೆ ಶ್ರಿ ಸುಧೀಂದ್ರ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು ಐದು ಹಾಡುಗಳಿರುವ ಈ ಚಿತ್ರಕ್ಕೆ ಶಿರಸ್ ಸಂಗೀತ ನೀಡಿದ್ದಾರೆ ಅಮಿತ್ ಅವರು ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಚಿಕ್ಕಮಗಳೂರು,ಮೈಸೂರು,ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯುತ್ತಿದೆ.
