ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕು ಎಂದರೆ ನೆನಪಾಗುವುದು ಸಾಕ್ಷಾತ್ ಶ್ರೀ ಮನ್ನಾರಾಯಣ ಸ್ವರೂಪಿ ಸಾಕ್ಷಾತ್ ಶ್ರೀರಾಮಚಂದ್ರನು ವನವಾಸದ ಸನ್ನಿವೇಶದಲ್ಲಿ ಯಡ್ರಾಮಿ ತಾಲೂಕಿಗೆ ಬಂದು ಲಿಂಗ ಪ್ರತಿಷ್ಠಾಪನೆ ಮಾಡಿ ಪುಣ್ಯ ತೀರ್ಥದಲ್ಲೀ ಸ್ನಾನ ಮಾಡಿ ಪಾವನವಾದ ಕ್ಷೇತ್ರವೇ ಯಡ್ರಾಮಿ ತಾಲೂಕು ಎಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ ಅದೇ ರೀತಿಯಾಗಿ ಕಡಕೋಳದ ತ್ರಿಕಾಲ ಜ್ಞಾನಿ ಮಹಾಂತ ಮಡಿವಾಳೇಶ್ವರರ ಕರ್ಮ ಭೂಮಿ ಅದೇ ರೀತಿ ಹೈದರಾಬಾದ್ ಕರ್ನಾಟಕದ ವಿಮೋಚನ ಸ್ವಾತಂತ್ರ ಹೋರಾಟಗಾರ ಕೆಚ್ಚೆದೆಯ ಹೋರಾಟದ ಹುಲಿ ದುಮ್ಮದ್ರಿಯ ಸರ್ದಾರ್ ಶರಣಗೌಡ ಹಾಗೂ ಹೋರಾಟಗಾರ ಕುಳಗೇರಿ ಚೆನ್ನಬಸಪ್ಪನವರ ತ್ಯಾಗ ಭೂಮಿಯೆ ಈ ಯಡ್ರಾಮಿ ತಾಲೂಕು ಈ ನಮ್ಮ ತಾಲೂಕಿನಲ್ಲಿ ಸಂತರು ಸೈಯದ್ರು ಶರಣರು ಮಹಾತ್ಮರು ಅವದೂತರು ಯೋಗಿಗಳು ದೇವತೆಗಳು ಅವತರಿಸಿದ ಪಾವನ ಭೂಮಿಯೇ ಯಡ್ರಾಮಿ ತಾಲೂಕು ಈ ನಮ್ಮ ತಾಲೂಕಿನ ಕುರಿತು ಬರೆಯುತ್ತಾ ಹೋದರೆ ಒಂದು ಮಹಾನ್ ಗ್ರಂಥವೇ ಆಗಬಹುದು ಆದರೆ ಹೆಸರಿಗೆ ಮಾತ್ರ ಅವಳಿ ತಾಲೂಕು ಈ ನಮ್ಮ ಯಡ್ರಾಮಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (ಸಿ ಡಿ ಪಿ ಓ)ಕಚೇರಿ ಇಲ್ಲದಿರುವುದು ಬಹಳ ದುರ್ದೈವದ ಸಂಗತಿ ಸರ್ಕಾರಿ ಆದೇಶ ಬಂದು ಮೂರು ವರ್ಷವಾದರೂ ತಿರುಗಿ ನೋಡದ ಬೆಂಗಳೂರಿನ ಶಾಸಕರು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೋಸ್ಕರ ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ ಪ್ರತಿಯೊಂದು ಮಗು ಪೌಷ್ಟಿಕ ಆಹಾರ ಸೇವಿಸಿ ಸದೃಢರನ್ನಾಗಿ ಮಾಡುವುದಕೊಸ್ಕರ ಮಕ್ಕಳ ಉತ್ತಮ ಭವಿಷ್ಯ ಕೊಸ್ಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರ ಜಾರಿಗೆ ತಂದಿದೆ ಆದರೆ ಈ ನಮ್ಮ ಯಡ್ರಾಮಿ ತಾಲೂಕು ಘೋಷಣೆಯಾಗಿ ಹಲವಾರು ವರ್ಷಗಳಾದರೂ ನಮ್ಮ ಯಡ್ರಾಮಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಏಕೆ ಇಲ್ಲ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಕಾರ್ಯಕರ್ತರ ವೇದಿಕೆ ಯಡ್ರಾಮಿ ತಾಲೂಕಿನ್ ಉಪಾಧ್ಯಕ್ಷರಾದ ಶಂಕರ್ ಗೌಡ ಕನ್ನೋಳಿ ಮು.ಸುಂಬುಡ್ ಅವರು ಸಂಬಂಧಪಟ್ಟ ಇಲಾಖೆಯವರಿಗೆ ಹಾಗೂ ಶಾಸಕರಿಗೆ ಪ್ರಶ್ನೆ ಮಾಡಿದ್ದಾರೆ ಯಾಕೆಂದರೆ ಯಡ್ರಾಮಿ ತಾಲೂಕು ಹೆಸರಿಗೆ ಮಾತ್ರ ಯಡ್ರಾಮಿ ತಾಲೂಕಿನಲ್ಲಿ ಪತ್ರಿಕಾ ಭವನವಾಗಲಿ,ಶಾಸಕರ ಭವನವಾಗಲಿ,ತಾಲೂಕ ಪಂಚಾಯತಿ ಕಚೇರಿಯಾಗಲಿ,ತಹಶೀಲ್ದಾರ್ ಕಚೇರಿಯಾಗಲಿ,ಪದವಿ ಮಹಾವಿದ್ಯಾಲಯವಾಗಲಿ,ಮೆಡಿಕಲ್ ಕಾಲೇಜುಗಳಾಗಲಿ ಯಾವ ರೀತಿಯಿಂದ ಅಭಿವೃದ್ಧಿ ಮಾಡಿದ್ದಾರೆ ತಿಳಿಸಬೇಕು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ ಯಡ್ರಾಮಿ ತಾಲೂಕಿನಲ್ಲಿ ಬಂದು ಜೇವರ್ಗಿ ಪ್ರತಿನಿಧಿ ಬಂದು ಗ್ರಾಮಗಳ ಸುಧಾರಣೆ ಆಗಿದೆಯೇ? ಪ್ರತಿಯೊಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಲಂಚ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆಯೇ ?ಅದೇ ರೀತಿಯಾಗಿ ಪ್ರತಿಯೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕಗಳಾಗಬೇಕು ಪ್ರತಿಯೊಂದು ಹಳ್ಳಿಗಳಲ್ಲಿ ಸಾರ್ವಜನಿಕ ಶೌಚಾಲಯಗಳಾಗಬೇಕು ಪ್ರತಿಯೊಂದು ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗದಿದ್ದರೂ ಸರಾಯಿ ಮಾತ್ರ ಪಕ್ಕ ಸಿಗುತ್ತದೆ ಇದರಿಂದ ಎಷ್ಟೋ ಕುಟುಂಬಗಳು ಬೀದಿ ಪಾಲಾಗುತ್ತಿವೆ ಸಂಬಂಧಪಟ್ಟ ಅಬಕಾರಿ ಇಲಾಖೆಯವರು ಏನು ಮಾಡುತ್ತಿದ್ದಾರೆ ಇವತ್ತು ಯಡ್ರಾಮಿ ತಾಲೂಕಿನ ಕೆಲವೊಂದು ಇಲಾಖೆಗಳಲ್ಲಿ ದಕ್ಷಿಣೆ ಇಲ್ಲದೆ ಅಧಿಕಾರಿಗಳು ಕೆಲಸ ಮಾಡುವುದಿಲ್ಲ ಅದು ಮುಂದಿನ ಪತ್ರಿಕೆಯಲ್ಲಿ ತಿಳಿಸುತ್ತೇವೆ ಆದಷ್ಟು ಶೀಘ್ರದಲ್ಲಿ ಯಡ್ರಾಮಿ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಸ್ಥಾಪನೆ ಆಗಲೇಬೇಕು ಒಂದು ವೇಳೆ ನಿರ್ಲಕ್ಷ ವಹಿಸಿದ್ದಲ್ಲಿ ಹೋರಾಟದ ಮುಖಾಂತರ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಕಾರ್ಯಕರ್ತರ ವೇದಿಕೆ ಯಡ್ರಾಮಿ ತಾಲೂಕಿನ ಉಪಾಧ್ಯಕ್ಷರಾದ ಶಂಕರ್ ಗೌಡ ಕನ್ನೊಳ್ಳಿ (ಸುಂಬಡ್)ಅವರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.