ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಫರ್ಸ್ಟ್ ಇಂಡಿಯನ್ ಲೇಡಿ ಟೀಚರ್


೧೯ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಪ್ರಮುಖ
ಪಾತ್ರವಾಗಿರುವ ಸಾವಿತ್ರಿಬಾಯಿ ಪುಲೆ ಭಾರತೀಯ ಸಮಾಜ ಸುಧಾರಕಿ,ಶಿಕ್ಷಣ ತಜ್ಞ,ಸಾಮಾಜಿಕ
ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ,ಆಧುನಿಕ ಶಿಕ್ಷಣದ
ತಾಯಿ,ಅಕ್ಷರದವ್ವ ಮತ್ತು ಸಾಮಾನ್ಯವಾಗಿ ಭಾರತೀಯ ಸ್ತ್ರೀವಾದದ ತಾಯಿ ಎಂದೇ
ಗುರುತಿಸಲಾಗುತ್ತದೆ.ಮಹಿಳಾ ಶಿಕ್ಷಣ ಮತ್ತು ವಿಮೋಚನೆಗೆ ಅವರ ಕೊಡುಗೆಗಳು
ಶ್ಲಾಘನೀಯವಾಗಿದ್ದು ಇಂದಿಗೂ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ.ಸಾವಿತ್ರಿಬಾಯಿ ಫುಲೆ ೩ ಜನೇವರಿ ೧ ೮೩೧ ರಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಜನಿಸಿದರು.ತಮ್ಮ ಒಂಬತ್ತನೇ ವಯಸ್ಸಿನಲ್ಲಿ ೧೩ ವರ್ಷದ ಜ್ಯೋತಿರಾವ್ ಫುಲೆಯವರನ್ನು
ವಿವಾಹವಾದರು ತಮ್ಮ ಮನೆಯಲ್ಲಿಯೇ ಜ್ಯೋತಿರಾವ್ ಪುಲೆಯವರು ತಮ್ಮ ಪತ್ನಿಗೆ ಶಿಕ್ಷಣ
ನೀಡಿದರು.ತಮ್ಮ ಶಿಕ್ಷಣದ ನಂತರ ಸುತ್ತಮತ್ತಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸದರು.
ಶಿಕ್ಷಣದ ಮೂಲಕ ಮಾತ್ರ ಹೆಣ್ಣು ಮಕ್ಕಳ ಜೀವನ ಉದ್ಧಾರವಾಗಬಹುದು ಎಂದು ನಂಬಿದ್ದರು.
ಸಾವಿತ್ರಿಬಾಯಿ ಪುಲೆ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ
ಶಿಕ್ಷಕಿಯಾದರು ಆ ಕಾಲದಲ್ಲಿ ಸ್ರ‍್ರೀಯೊಬ್ಬಳು ಶಿಕ್ಷಕಿಯಾಗುವುದು ಸಮಾಜಕ್ಕೆ ದ್ರೋಹ
ಬಗೆದಂತೆ ಎಂದು ಅವರನ್ನು ಪಾಠಶಾಲೆಗೆ ಹೊರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು,ಸಗಣಿ ಎರಚಿ,ಕಲ್ಲನ್ನು ತೂರುತ್ತಿದ್ದರು.ಇದರಿಂದ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು.ದಾರಿಯಲ್ಲಿ ಕೆಸರು,
ಸಗಣಿ ಎರಚಿಸಿಕೊಂಡಾಗ,ಬೇಸರಗೊಳ್ಳದೆ ನಮ್ಮ ಮೇಲೆ ಎರಚುವ ಸಗಣಿ,ತೂರುವ ಕಲ್ಲುಗಳನ್ನು
ಹೂಗಳೆಂದು ಭಾವಿಸಿ,ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ
ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು.ಆ ಸಮಯದಲ್ಲಿ ಕ್ರಾಂತಿಕಾರಿ
ಸ್ತ್ರೀವಾದಿಗಳಲ್ಲಿ ಒಬ್ಬರಾಗಿದ್ದ ಸಗುನ್ಬಾಯಿ ಅವರೊಂದಿಗೆ ಪುಣೆಯ ಮರಾಠವಾಡದಲ್ಲಿ ಬಾಲಕಿಯರ ಶಾಲೆಯಲ್ಲಿ ಕಲಿಸಲು ಪ್ರಾರಂಭಿಸಿದರು.೧೮೫೧ ರ ಹೊತ್ತಿಗೆ, ಸಾವಿತ್ರಿಬಾಯಿ ಫುಲೆ ಮತ್ತು ಜೋತಿಬಾ
ಪುಲೆಯವರು ಪುಣೆಯಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ಮೂರು ವಿಭಿನ್ನ ಶಾಲೆಗಳನ್ನು ನಡೆಸುತ್ತಿದ್ದರು.
ಮೂರು ಶಾಲೆಗಳು ಸೇರಿ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದಾಖಲಾಗಿದ್ದರು.
ಸಾವಿತ್ರಿಬಾಯಿ ಪುಲೆಯವರು ನಂತರದ ದಿನಗಳಲ್ಲಿ ೧೪ ಶಾಲೆಗಳನ್ನು ತೆರೆದು ವಿವಿಧ
ಜಾತಿಗಳ ಮಕ್ಕಳಿಗೆ ಶಿಕ್ಷಣವನ್ನು ಕಲಿಸಲು ಪ್ರಾರಂಭಿಸಿ ಸಾವಿತ್ರಿಬಾಯಿ ಮತ್ತು ಫಾತಿಮಾ
ಶೇಖ್ ಅವರು ಮಹಿಳೆಯರಿಗೆ ಮತ್ತು ದೀನದಲಿತ ಜಾತಿಗಳ ಇತರ ಜನರಿಗೆ ಕಲಿಸಲು
ಪ್ರಾರಂಭಿಸಿದರು. ದಲಿತರ ಶಿಕ್ಷಣದ ವಿರುದ್ಧ ವಿಶೇಷವಾಗಿ ಪುಣೆಯ ಮೇಲ್ಜಾತಿಯವರು ಇದನ್ನು
ವಿರೋಧಿಸಿದರು ಅಂತವರ ಮದ್ಯನೇ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ
ಮಾಡುವಲ್ಲಿ,ಮತ್ತು ಕೆಳ‌ ವರ್ಗದ ಜನರಿಗೆ ಸಮಾನ ಹಕ್ಕುಗಳನ್ನು ಗಳಿಸುವಲ್ಲಿ ಸಾವಿತ್ರಿಬಾಯಿ
ಫಾತಿಮಾ ಶೇಖ್ ಮತ್ತು ಸಗುಣಾ ಬಾಯಿ ಸೇರಿಕೊಂಡರು, ಅವರು ಅಂತಿಮವಾಗಿ ಶಿಕ್ಷಣ ಚಳವಳಿಯಲ್ಲಿ
ನಾಯಕರಾದರು. 
ಸಾವಿತ್ರಿಬಾಯಿ ಅವರು ಸ್ಪೂರ್ತಿದಾಯಕ, ಅಪ್ರತಿಮ,ಪರಿಪೂರ್ಣ ಜೀವನವನ್ನು ನಡೆಸಿದರು.
ಇಂದು ಅವರು ಸ್ತ್ರೀವಾದಿ ಮತ್ತು ಜಾತಿ ವಿರೋಧಿ ಐಕಾನ್ ಆಗಿದ್ದಾರೆ.ಪ್ರತಿ ವರ್ಷ ಅವರ
ಜನ್ಮದಿನದಂದು,ಜನವರಿ ೩ ರಂದು,ಹೆಣ್ಣು ಮಗು ಮತ್ತು ಅವಳ ಶಿಕ್ಷಣದ ಹಕ್ಕನ್ನು
ಗೌರವಿಸುವ “ಬಾಲಿಕಾ ದಿವಸ್” ಅನ್ನು ಆಚರಿಸಲಾಗುತ್ತದೆ. ಅನೇಕ ಸರ್ಕಾರಿ ಸಂಸ್ಥೆಗಳು ಅವರನ್ನು ಗೌರವಿಸುತ್ತವೆ ಪುಣೆ ಸಿಟಿ ಕಾರ್ಪೋರೇಷನ್ ೧೯೮೩ ರಲ್ಲಿ ಅವಳಿಗಾಗಿ ಒಂದು ಸ್ಮಾರಕವನ್ನು ರಚಿಸಿತು.
೧೦, ಮಾರ್ಚ್ ,೧೯೯೮ ರಂದು ಇಂಡಿಯಾ ಪೋಸ್ಟ್ ಅವಳ ಸ್ಮರಣಾರ್ತ ಅಂಚೆ ಚೀಟಿಯನ್ನು ಬಿಡುಗಡೆ
ಮಾಡಿತು.ಪುಣೆ ವಿಶ್ವವಿದ್ಯಾಲಯವನ್ನು ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ.ಅವರ ಸ್ಪೂರ್ತಿದಾಯಕ ಜೀವನವನ್ನು ಅನೇಕ ಟಿವಿ ನಾಟಕಗಳು,
ಜೀವನಚರಿತ್ರೆಗಳು ಮತ್ತು ಪುಸ್ತಕಗಳಲ್ಲಿ ಚಿತ್ರಿಸಲಾಗಿದೆ. ಅವರು ನೋಡಬಹುದಾದ ಅತ್ಯಂತ
ಸ್ಪೂರ್ತಿದಾಯಕ ಭಾರತೀಯ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ
ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ,
ಸತಿಸಹಗಮನ ಪದ್ದತಿ, ಕೇಶ ಮುಂಡನ ವಿರುದ್ದ ಹೋರಾಟ ಮಾಡಿ,ಮಹಿಳೆಯರಿಗೋಸ್ಕರ
ಪ್ರ-ಪ್ರಥಮವಾಗಿ ಶಾಲೆಗಳು,ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಇವರು ಒಟ್ಟು ೧೪
ಶಾಲೆಗಳನ್ನು ಸ್ಥಾಪನೆ ಮಾಡುತ್ತಾರೆ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡಾ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ
ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ-ಕಾರ‍್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ