ಚಡಚಣ: ರಾಧಾಕೃಷ್ಣನ್ ಅವರ ಹುಟ್ಟುಹಬ್ಬದ ಪ್ರಯುಕ್ತ 5/09/2023 ರಂದು ಶಿಕ್ಷಕರ ದಿನಾಚರಣೆಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಬರಡೋಲ್ ದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಎಲ್ಲಾ ವಿದ್ಯಾರ್ಥಿಗಳಿಂದ ಸಂವಿಧಾನದ ಪೀಠಿಕೆಯನ್ನು ಓದಿಸಿದರು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಸುರೇಶ್ ನಾರಾಯಣಕರ ಇವರು ವಹಿಸಿಕೊಂಡು ಮಾತನಾಡಿದರು.
ಶಿಕ್ಷಣ ವಿಶ್ವದಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿದೆ ಎಂದು ಇಸ್ರೋ ವಿಜ್ಞಾನಿಗಳು ಚಂದ್ರಯಾನ -3 ಮತ್ತು ಆದಿತ್ಯ L-1 ಅನ್ನು ಯಶಸ್ವಿ ಆಗಿದೆ ಏಕೆಂದರೆ ನಾಲ್ಕು ಗೋಡೆಗಳ ಮಧ್ಯೆ ನೀಡುವ ಶಿಕ್ಷಣ ಜಗತ್ತಿಗೆ ವಿಸ್ತಾರವಾಗಿದೆ ಮತ್ತು ಮಾದರಿಯಾಗಿದೆ. ಈ ಶಕ್ತಿಯನ್ನು ವಿದ್ಯಾರ್ಥಿಗಳು ಅನುಸರಿಸಿ ಜಗತ್ತು ತಮ್ಮೆಲ್ಲರ ಹಿಂದೆ ಇರುವಂತೆ ಮುಂದುವರೆಯಲು ಶುಭಾಶಗಳು ಕೋರಿದರು.
ಏಕೆಂದರೆ ಪಾಶ್ಚತ್ಯ ರಾಷ್ಟ್ರಗಳಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಮತ್ತು ಮನ್ನಣೆ ನಮ್ಮಲ್ಲಿಯೂ ಕೂಡ ಸಿಗಬೇಕು ನಮ್ಮಲ್ಲಿ ಅಂಬುಲೆನ್ಸ್ ವಾಹನ ಎಲ್ಲಿಯೂ ನಿಲ್ಲದಂತೆ ಮುನ್ನಡೆಯಲು ಚಾಲನೆ ನೀಡುತ್ತೇವೆ
ಪಾಶ್ಚತ್ಯ ದೇಶದಲ್ಲಿ ಶಿಕ್ಷಕರ ವಾಹನ ಸ್ಕೂಲಿಗೆ ತಡವಾಗುತ್ತದೆಂದು ಎಲ್ಲಿಯೂ ನಿಲ್ಲದಂತೆ ಮುನ್ನಡೆಸಲು ಗೌರವಿಸುತ್ತಾರೆ.
ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಆಸ್ಪತ್ರೆ ರಂಗಮಂದಿರ ಕಲಾಮಂದಿರ ರೈಲ್ವೆ ಸ್ಟೇಷನ್ ಬಸ್ ನಿಲ್ದಾಣ ಕಿರಣ ಅಂಗಡಿಗಳಲ್ಲಿಯೂ ಪ್ರತ್ಯೇಕವಾದ ಕಲೆ ಇರುತ್ತದೆ ಇಂತಹ ಗೌರವ ನಮ್ಮಲ್ಲೂ ಬರಬೇಕೆಂದು ಹೇಳುತ್ತಾ ಹದಿಹರೆಯರಲ್ಲಿ ಮೊಬೈಲ್ ಹೆಚ್ಚು ಬಳಕೆಯಾಗುತ್ತದೆ ಆದಷ್ಟು ಮೊಬೈಲ್ ಬಳಕೆಯನ್ನು ಒಳ್ಳೆಯದಕ್ಕೆ ಹೆಚ್ಚು ಬಳಕೆಯಾಗಲಿ ಎಂದು ಹೇಳುತ್ತಾ ಅದರ ಜೊತೆಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಸಂಸ್ಥೆಗಳಿಗೆ ತಂದೆ ತಾಯಿಗೆ ಒಳ್ಳೆಯ ಹೆಸರು ತರಲೆಂದು ಆಶಿಸುತ್ತಾ ಮತ್ತೊಮ್ಮೆ ಶುಭಾಶಯ ಕೋರಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಎಮ್ ಕೆ ಹಿಪ್ಪರಗಿ, ಮತ್ತು ಎಸ್ ಆರ್ ಹಂಜಗಿ , ಮಾತನಾಡಿದರು. ಅತಿಥಿಗಳಾದ ಶ್ರೀ ಮುದ್ದೇಬಿಹಾಳ, ಶ್ರೀಮತಿ ದಾನಮ್ಮ , ಮತ್ತು ಲಕ್ಷ್ಮಿ ಬಿರಾದಾರ್, ಮಂಜುನಾಥ್, ಅರವಿಂದ್ ಕಾಂಬಳೆ , ಈರಣ್ಣ ತೇಲಿ, ನಾಗರಾಜ್, ಅನಿಲ್ ಕದಂ, ಎಲ್ಲರು ಉಪಸ್ಥಿತರಿದ್ದರು
ವರದಿ. ಅರವಿಂದ್ ಕಾಂಬಳೆ