ಮುಂಡಗೋಡ : ನಗರದ ಎಲ್ ವಿ ಕೆ ಸಭಾಂಗಣದಲ್ಲಿ ಇಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಿತು. ಮೊದಲಿಗೆ ಗಣ್ಯರೆಲ್ಲ ಸೇರಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಹಾಗೂ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ನಂತರ ಬಿಇಒ ಜಕಣಾಚಾರಿ ಅತಿಥಿಗಳನ್ನು ಸ್ವಾಗತಿಸಿದರು, ಅಧ್ಯಕ್ಷೀಯ ಭಾಷಣ ನಡೆಸಿದ ತಹಶೀಲ್ದಾರ್ ಶಂಕರ್ ಗೌಡಿ ಭಾರತೀಯ ಶಿಕ್ಷಣ ಪದ್ಧತಿ ಹಂತಗಳ ಬಗ್ಗೆ ವಿವರಿಸಿದರು ಹಾಗೂ ಶಿಕ್ಷಕರ ಕೊಡುಗೆಗಳನ್ನು ಹಾಗೂ ಇತಿಹಾಸದ ಗುರು ಶಿಷ್ಯ ಪರಂಪರೆ ಬಗ್ಗೆ ವಿವರಿಸಿದರು.ತದನಂತರ ಮಾತನಾಡಿದ ಮಾಜಿ ಶಾಸಕ ವಿ ಎಸ್ ಪಾಟೀಲ್ ಆದರ್ಶ ಸಮಾಜ ಮತ್ತು ಸಂಸ್ಕೃತಿ ಯನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು ಹಾಗೂ ಇದನ್ನು ಶಿಕ್ಷಕರು ಮಾತ್ರ ಮಾಡಬಲ್ಲರು ಎಂದು ಶಿಕ್ಷಕ ವೃಂದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತದನಂತರ ತಾಲೂಕ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು. ಹಾಗೂ ನಿವೃತ್ತಿ ಪಡೆದ ಶಿಕ್ಷಕರನ್ನು ಬೀಳ್ಕೊಡಲಾಯಿತು. ಕಾರ್ಯಕ್ರಮಕ್ಕೆ ತಡವಾಗಿ ಬಂದ ಶಾಸಕ ಶಿವರಾಮ್ ಹೆಬ್ಬಾರ್ ಉತ್ತರ ಕನ್ನಡದ ಶಿಕ್ಷಕರ ಬಗ್ಗೆ ಹೆಮ್ಮೆಯಿಂದ ವ್ಯಾಖ್ಯಾನಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಂಕರ್ ಗೌಡಿ ಮತ್ತು ಶಾಸಕರಾದ ಶಿವರಾಮ್ ಹೆಬ್ಬಾರ್, ಮಾಜಿ ಶಾಸಕರಾದ ವಿ ಎಸ್ ಪಾಟೀಲ್ ,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಲ್ ಟಿ ಪಾಟೀಲ್ ಬಿಇಒ ಜಕಣಾಚಾರಿ, ಸಿಪಿಐ ಬೀ ಎಸ್ ಲೋಕಾಪುರ ಹಾಗೂ ಶಿಕ್ಷಕ ಸಂಘದ ಕಾರ್ಯಾಧ್ಯಕ್ಷ ರು ಹಾಗೂ ತಾಲೂಕಿನ ಎಲ್ಲ ಕ್ಲಸ್ಟರ್ ಮಟ್ಟದ ಫ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.