ಉತ್ತರ ಕನ್ನಡ:ಮುಂಡಗೋಡ ತಾಲೂಕು ಜಲಾಶಯ (ಕೆರೆ)ಗಳ ತವರು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುಮಾರು 20 ಕೆರೆಗಳು ಮುಂಡಗೋಡ ತಾಲೂಕಿನಲ್ಲಿವೆ ಇವುಗಳಲ್ಲಿ ಮಳಗಿಯ ಧರ್ಮ ಜಲಾಶಯಕ್ಕೆ ಮಾತ್ರ ಸೂಕ್ತ ಭದ್ರತಾ ವ್ಯವಸ್ಥೆ ಇದ್ದು,ಇನ್ನೂ ಬಾಕಿ ಉಳಿದ ಬಾಚನಕಿ ಜಲಾಶಯ,ನ್ಯಾಸರ್ಗಿ ಜಲಾಶಯ,ಅರಿಷಿನಗೆರಿ ಜಲಾಶಯ ಹಾಗೂ ಇನ್ನೂ ಅನೇಕ ಪ್ರಮುಖ ಕೆರೆಗಳಿಗೆ ಭದ್ರತಾ ಕಾವಲುಗಾರನ ವ್ಯವಸ್ಥೆ ಇಲ್ಲದೆ ಸಾಕಷ್ಟು ಭಾರಿ ಅನಾಹುತ ಗಳಾಗಿದ್ದು ಭವಿಷ್ಯದಲ್ಲಿ ಇದನ್ನು ತಪ್ಪಿಸಬೇಕಿದೆ.
ಸಾವಿನ ಮನೆಯಾಗಿರುವ ಬಾಚಣಕಿ ಜಲಾಶಯ
ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಬಾಚಣಕಿ ಜಲಾಶಯ (ಕೆರೆ) ಇತ್ತೀಚಿನ ಸುಮಾರು 7 ರಿಂದ 8 ವರ್ಷಗಳಿಂದ ಸಾವಿನ ಮನೆಯಾದಂತಿದೆ ವರ್ಷಕ್ಕೆ ಸುಮಾರು 4 ರಿಂದ 5 ಸಾವುಗಳು ಆತ್ಮಹತ್ಯೆ, ಅಸಹಜ ಸಾವಿನ ರೂಪದಲ್ಲಿ ಸಂಭವಿಸುತ್ತಿದ್ದು ಅನೇಕ ಭಾರಿ ದೂರದ ಹುಬ್ಬಳ್ಳಿಯಂತಹ ಊರುಗಳಿಂದ ಬಂದು ಈ ಬಾಚಣಕಿ ಜಲಾಶಯ ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಜಲಾಶಯ ಹತ್ತಿರ ಮಧ್ಯ ಪಾನ ಮಾಡಿ ಪಾರ್ಟಿ ಮಾಡುವುದರಿಂದ ಕೆಲವೊಮ್ಮೆ ಕುಡಿದ ನಶೆಯಲ್ಲಿ ದುರ್ಘಟನೆಗಳು ಇಲ್ಲಿ ಸಂಭವಿಸಿವೆ ಇದರಿಂದ ಈ ಭಾಗದ ಘಟನೆಗಳ ಬಗ್ಗೆ ಗ್ರಾಮಸ್ಥರು ರೋಸಿ ಹೋಗಿದ್ದಾರೆ,ಇಷ್ಟಕ್ಕೆಲ್ಲಾ ಕಾರಣ ಜಲಾಶಯಕ್ಕೆ ಸೂಕ್ತ ಭದ್ರತಾ ಕಾವಲುಗಾರನ ವ್ಯವಸ್ಥೆ ಇಲ್ಲದಿರುವುದು ಹಾಗೆಯೇ
ನ್ಯಾಸರ್ಗಿ ಜಲಾಶಯ (ಕೆರೆ)ಯಲ್ಲೂ ಇದೆ ಸಮಸ್ಯೆ ಇದೆ.
ಈ ಹಿಂದೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮುಂಡಗೋಡ ಪೊಲೀಸ್ ಠಾಣೆ ಪಿ ಎಸ್ ಐ ಅವರು ಭದ್ರತೆ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಿ ಎಂದು ಪತ್ರ ಕೂಡಾ ಬರೆದಿದ್ದರು ಆದರೂ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ ಅಮಾಯಕ ಜನರ ಜೀವಹಾನಿಗೆ ಕಾರಣವಾಗಿದೆ, ಕೂಡಲೇ ತಾಲೂಕ ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಜಲಾಶಯಗಳಿಗೆ (ಕೆರೆ) 24 ಗಂಟೆ ಭದ್ರತಾ ಕಾವಲುಗಾರನ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
