ಯಾದಗಿರಿ:ಶಹಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ನೂತನ ಜಿಲ್ಲಾ ಪದಾಧಿಕಾರಿಗಳು ನೇಮಕ ಮಾಡಲಾಯಿತು.
ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಖಾಸಿಂ ಸಾಬ ನಡಿಗೇರಿ, ಜಿಲ್ಲಾ ಉಪಾಧ್ಯಕ್ಷರಾಗಿ ಎಂ.ಡಿ.ಲಾಲ್ ಸಾಬ ಪೂಜಾರಿ,ಜಿಲ್ಲಾ ಕಾರ್ಯದರ್ಶಿಯಾಗಿ ಸಂಗಮೇಶ ಕುಂಬಾರ,ಆಯ್ಕೆ ಮಾಡಲಾಯಿತು ರೈತ ಸಂಘಟನೆ ರಾಜ್ಯ ಅಧ್ಯಕ್ಷರಾದ ಶರಣಪ್ಪ ದೊಡ್ಡಮನಿ,ಯುವ ಘಟಕ ರಾಜ್ಯ ಅಧ್ಯಕ್ಷರಾದ ಫಯಾಜ್ ಮೈಸೂರ್, ಇವರ ನೇತೃತ್ವದಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಇದೇ ಸಂದರ್ಭದಲ್ಲಿ ಅಂಗವಿಕಲರ ಸಂಘಟನೆ ರಾಜ್ಯ ಅಧ್ಯಕ್ಷರಾದ ಸುಭಾಷ್ ಹೋತಪೇಟ, ಶ್ರೀಶೈಲ ಮಲ್ಲಿಕಾರ್ಜುನ ಅನಾಥ ಆಶ್ರಮ ಅಧ್ಯಕ್ಷರಾದ ಸೋಮು ಹುಗ್ಗಿ,ಕಾರ್ಯಮಿಕರ ಸಂಘಟನೆ ಅಧ್ಯಕ್ಷರಾದ ಹೈಯಾಳಪ್ಪ ಚಿಕ್ಕೆರಿ, ಸಮಾಜ ಸೇವಕ ಬಸ್ಸು ನಾಟೆಕಾರ್, ಮಲ್ಲಿಕಾರ್ಜುನ ಹಲಕಟ್ಟಿ,ಖಾಸಿಂ ಸಬಾ ಬೇವಿನಹಳ್ಳಿ,ಮೈನುದ್ದಿನ,ಸೋಪಿ ಸಾಬ್,ಚಂದ ಸಾಬ್,ಮಹಮ್ಮದ್ ರಫಿ,ಹಾಜಿ ಸಾಬ್, ಮಹಮ್ಮದ್ ಗಾಜಿ ಬಾಬಾ ನಿಂಗದ ಗುಡಿ,ಒಡ್ಡರ ಸಮಾಜದ ತಾಲ್ಲೂಕ ಅಧ್ಯಕ್ಷ ಪರಸುರಾಮ ಒಡ್ಡರ, ಶೇಖಪ್ಪ ದೊಡ್ಡಮನಿ ಹಳಿಸಗರ ಹಾಗೂ ಅನೇಕ ರೈತ ಮುಖಂಡರು ಈ ಕಾರ್ಯಕ್ರಮ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
