ಬೆಂಗಳೂರು:ಕರ್ನಾಟಕ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಿಂದಾಗಿ ಖಾಸಗಿ ವಾಹನ ಚಾಲನೆ ಮಾಡುವ ಚಾಲಕರಿಗೆ ತುಂಬಲಾರದ ನಷ್ಟವಾಗಿದೆ ಕೂಡಲೆ ಸರ್ಕಾರ ಖಾಸಗಿ ವಾಹನ ಚಾಲಕರಿಗೆ ಆದ ಪರಿಹಾರದ ನಷ್ಟವನ್ನು ತುಂಬಿಕೊಡಬೇಕು ಅದೇ ರೀತಿಯಾಗಿ ದಿನಾಂಕ 11/9/2023 ರಂದು ಸೋಮವಾರ ದಿವಸ 32 ಸಂಘಟನೆಗಳ ಒಕ್ಕೂಟದೊಂದಿಗೆ ಬೆಂಗಳೂರು ಬಂದ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ನಗರ ಸಾರಥಿ ಸೇನೆಯ (ರಿ.) ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ ಟಿ ಎಂ ಕೇಶವ ಅವರು ಕರೆ ಕೊಟ್ಟಿದ್ದಾರೆ ಹೋರಾಟದ ಪ್ರಮುಖ ಬೇಡಿಕೆಗಳು.1.ಅನಧಿಕೃತ ಟ್ಯಾಕ್ಸಿ ಬಂದಾಗಬೇಕು.
2.ಲೈಫ್ ಟೈಮ್ ಟ್ಯಾಕ್ಸ್ ಪಡೆಯಬೇಕು.
3.ಆನ್ಲೈನ್/ಆಫ್ ಲೈನ್ ಕಾರುಗಳಿಗೆ ಒನ್ ಸಿಟಿ ಒನ್ ರೇಟ್ ಮಾಡಬೇಕು
4.ಖಾಸಗಿ ಬಸ್ಸುಗಳನ್ನು ಶಕ್ತಿ ಯೋಜನೆಗೆ ಸೇರ್ಪಡೆಗೊಳಿಸಬೇಕು
5.ಗೂಡ್ಸ್ ವಾಹನಗಳಿಗೆ ಆನ್ಲೈನ್ ಸಂಸ್ಥೆಗಳಿಂದ ಆಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು.
6.ಶಕ್ತಿ ಯೋಜನೆಯಿಂದ ವಾಣಿಜ್ಯ ಬಳಕೆಯ ಚಾಲಕರಿಗೆ ಆಗುತ್ತಿರುವ ನಷ್ಟವನ್ನು ತುಂಬಿಕೊಡಬೇಕು
7.ಓಲಾ ಉಬರ್ ಪೋರ್ಟರ್ ಸಂಸ್ಥೆಗಳಿಂದ ಚಾಲಕರ ಬ್ಲಾಕ್ ಲಿಸ್ಟ್ ತೆರವುಗೊಳಿಸಬೇಕು
8.ಖಾಸಗಿ ಶಾಲಾ ವಾಹನಗಳಿಗೆ ಪರ್ಮಿಷನ್ ನೀಡಬೇಕು.
ಎಲ್ಲಾ ನಿರ್ದಿಷ್ಟ ರೂಪರೇಶೆಗಳನ್ನೂ ಹಾಕಿಕೊಂಡೆ ಬೆಂಗಳೂರು ಬಂದ್ ಗೆ ಕರೆ ಕೊಡಲಾಗಿದೆ ಎಂದು ಬೆಂಗಳೂರು ಸಾರಥಿ ಸೇನೆ (ರಿ.) ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ ಟಿ ಎಂ ಕೇಶವ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.