
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಡಗಲಿ ವೇಣಪ್ಪನ ತಾಂಡಾದಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯದ ಹದಗೆಟ್ಟ ಸಿ.ಸಿ ರಸ್ತೆಯ ಕೆಲಸದಿಂದಾಗಿ ಮಳೆನೀರು,ನಳದ ನೀರು,ಚರಂಡಿ ನೀರೆಲ್ಲಾ ಶೇಖರಣೆಯಾಗಿ ಒಂದು ಕಡೆ ಹೋಗಲು ವ್ಯವಸ್ಥೆ ಮಾಡದೆ ಇರುವುದರಿಂದ ಎಲ್ಲಾ ನೀರು ಕೊಳಚೆಯಾಗಿ ಹರಿಯುತ್ತಿದ್ದು ಊರಿನ ಜನರಿಗೂ ಹಾಗೂ ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು ಸೊಳ್ಳೆ,ಕ್ರಿಮಿ ಕೀಟಗಳು ಹೆಚ್ಚಾಗಿ ಅನೇಕ ರೋಗ ರುಜಿನಗಳು ಹರಡುತ್ತಿವೆ ಹಾಗಾಗಿ ಆದಷ್ಟು ಬೇಗ ಈ ಸಮಸ್ಯೆ ಕುರಿತು ಗಮನ ಹರಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆದಷ್ಟು ಬೇಗ ಸರಿಪಡಿಸಬೇಕೆಂದು ಗ್ರಾಮಸ್ಥರು “ಕರುನಾಡ ಕಂದ ಪತ್ರಿಕೆ” ಮೂಲಕ ಆಗ್ರಹಿಸಿದ್ದಾರೆ.
ವರದಿ-ಶಂಕರ ರಾಠೋಡ
