ರಾಯಚೂರು:ಸಿಂಧನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ಆಚರಿಸಲು ಪೂರ್ವಭಾವಿ ಸಭೆ ನಡೆಯಿತು ಈ ಸಭೆಯಲ್ಲಿ ಚರ್ಚಿಸಿದ ವಿಷಯಗಳು
1) ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಕಾಳಿಕಾದೇವಿಗೆ ಪೂಜೆ ಮತ್ತು ವಿಶ್ವಕರ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಯಿತು.
2) ಸಮಾಜದಲ್ಲಿ ಸಾಲ ತೆಗೆದುಕೊಂಡವರಿಂದ ಮರುಪಾವತಿ ಮಾಡಿಕೊಳ್ಳಲಾಯಿತು ಇನ್ನೂ ಪಾವತಿ ಮಾಡುವವರು ಆದಷ್ಟೂ ಶೀಘ್ರವಾಗಿ ತಲುಪಿಸುವಂತೆ ಸೂಚಿಸಲಾಯಿತು.
3) ಪ್ರತಿ ಹೋಬಳಿ ಮಟ್ಟದಲ್ಲಿ ಸಂಘಟನೆ ಬಲಪಡಿಸಿ ಪ್ರತಿಯೊಬ್ಬರೂ ಸಮಾಜದ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಲಾಯಿತು.
4) ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮೌನೇಶ ತಿಡಿಗೋಳ ಅಧ್ಯಕ್ಷರು,ಶಂಕ್ರಪ್ಪ ಸಾಹುಕಾರ,ನಿಡಿಗೋಳ ಹಿರಿಯ ಮುಖಂಡರು,ತಿರುಮಲ ಆಚಾರಿ ಉಪಾಧ್ಯಕ್ಷರು, ಅಂಬಣ್ಣ ಪತ್ತಾರ ಗೊರೆಬಾಳ ಉಪಾಧ್ಯಕ್ಷರು, ದರ್ಮಣ್ಣ ಗುಂಜಳ್ಳಿ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿ ಚನ್ನಪ್ಪ ಕೆ.ಹೊಸಹಳ್ಳಿ,ಖಜಾಂಚಿ ಗಣೇಶ ಪತ್ತಾರ ಸುಕಲಪೇಟೆ,ಮಂಜುನಾಥ ಕೊಟ್ನೆಕಲ್ ಅಧ್ಯಕ್ಷರು ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್,ಕಾರ್ಯದರ್ಶಿ ಬಸವರಾಜ ಕಮತಗಿ,ಬಸವರಾಜ ಪತ್ತಾರ (LIC),ಮುತ್ತಣ್ಣ ಪತ್ತಾರ ಸಂಘಟನಾ ಕಾರ್ಯದರ್ಶಿ,ಮಂಜುನಾಥ ಉಪ್ಪದೊಡ್ಡಿ, ಜೀವಣ್ಣ ನಾಗನಕಲ್ಲು,ನರಸಪ್ಪ ಪೂಜಾರಿ,ಶಶಿಕಾಂತ ಮುದಗಲ್ಲು,ರಾಜು ಬಳಗಾನೂರ,ಪ್ರಕಾಶ ಮುಳ್ಳೂರು,ಷಣ್ಮುಖಪ್ಪ ಪತ್ತಾರ,ರವಿ ಪತ್ತಾರ,ಅಶೋಕ ಬಡಿಗೇರ,ಮೌನೇಶ ಪೇಂಟರ್ ಉಂಚಾಳ ಇನ್ನೂ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.