ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ಜಾತಿ,ಮತ,ಪಂಥವಿಲ್ಲದ ಪವಿತ್ರ ಸ್ಥಾನವೆಂದರೆ ಶಾಲಾ-ಕಾಲೇಜುಗಳು”-ಪ.ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳು,ಅಥಣಿ

ಬೀದರ್:ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ,
ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ ೧೨-೦೯-೨೦೨೩ ರಂದು ಗುರುವಿನ ಸ್ಥಾನವನ್ನು ಪಡೆಯಬೇಕಾದರೆ ವ್ಯಕ್ತಿಯು ಆತ್ಮಸಾಕ್ಷಾತ್ಕಾರವನ್ನು ಹೊಂದಬೇಕು. ಆತ್ಮಜ್ಞಾನವು ಹೊಂದುವುದು ನಿಜಜ್ಞಾನಿಯ ಲಕ್ಷಣ ಶರಣರ ವಚನಗಳಲ್ಲಿ ಗುರುವಿನ ಮಹಿಮೆಯನ್ನು ಕಾಣಬಹದು ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ. ಜಾತಿ,ಮತ,ಪಂಥವಿಲ್ಲದ ಪವಿತ್ರ ಸ್ಥಾನವೆಂದರೆ ಶಾಲಾ-ಕಾಲೇಜುಗಳು.ಹೈ.ಕ.ಶಿ.ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ,ಬೀದರನ ವತಿಯಿಂದ ದಿನಾಂಕ ೧೧-೦೯-೨೩ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಪ.ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಜಿಗಳು ಅಥಣಿ ಅವರು ಮಾತನಾಡಿದರು ಜ್ಞಾನವು ಅತ್ಯಂತ ಶ್ರೇಷ್ಠವಾದುದು ಅದನ್ನು ಪರಿಶ್ರಮದಿಂದ ಮಾತ್ರ ಸಾಧಿಸಬಹುದು ಜೊತೆಗೆ ಅದಕ್ಕೆ ಸಮಯಕ್ಕೆ ಸರಿಯಾಗಿ ಮಹತ್ವಕೊಟ್ಟು ಅದನ್ನು ಪಡೆಯಲು ಶ್ರಮಿಸಬೇಕು. ವಿದ್ಯೆ ಮತ್ತು ಅವಿದ್ಯೆಯ ವ್ಯತ್ಯಾಸವನ್ನು ತಿಳಿಸುತ್ತಾ ವಿದ್ಯೆಯ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಆಗಮಿಸಿದ ಶ್ರೀ ಸಂಜುಕುಮಾರ ಮಾನೂರೆ, ವಿಷಯ ಪರಿವೀಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೀದರ ಅವರು ಮಾತನಾಡಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯ ಮೇಲೆ ಬೆಳಕು ಚೆಲ್ಲಿದರು. ಗುರುತರವಾದ ಜವಾಬ್ದಾರಿಯ ವೃತ್ತಿಯೆಂದರೆ ಶಿಕ್ಷಕರ ವೃತ್ತಿಯದಾಗಿದೆ.“Teaching Profession should be by choice but not by chance” ಬದುಕಿನಲ್ಲಿ ಗುರಿಯ ಮಹತ್ವವನ್ನು ತಿಳಿಸಿದರು. ಹಣದ ಶ್ರೀಮಂತಿಕೆಗಿAತ ಮಾನಸಿಕ ಶ್ರೀಮಂತಿಕೆಯು ಶ್ರೇಷ್ಠವಾದುದು. ಪ್ರತಿಯೊಬ್ಬರು ದೊಡ್ಡ ಗುರಿಯ ಜೊತೆಗೆ ಶ್ರೇಷ್ಠ ಕನಸನ್ನು ಕಾಣಲು ಸೂಚಿಸಿದರು.ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಸಿ.ಕನಕಟ್ಟೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಎಲ್ಲಾ ವೃತ್ತಿಗಳಲ್ಲಿಯೇ ಶ್ರೇಷ್ಠತರವಾದ ವೃತ್ತಿಯೆಂದರೆ ಅದು ಶಿಕ್ಷಕ ವೃತ್ತಿಯಾಗಿದೆ ವೃತ್ತಿಯ ಜೊತೆಗೆ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಂಡು ವೃತ್ತಿಯ ಬೆಳವಣಿಗೆಯನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ಯುವಪೀಳಿಗೆ ಮಾದರಿಯಾಗಿ ದೇಶ ಕಟ್ಟುವ ಕೆಲಸಮಾಡಬೇಕು ಎಂದು ತಿಳಿಸಿದರು ನಿವೃತ್ತ ಉಪನ್ಯಾಸಕರಾದ ಉಮಾಕಾಂತ ಮೀಸೆ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಉಪನ್ಯಾಕಸರಾದ ಸಂತೋಷಕುಮಾರ ಸಜ್ಜನ್,ವೀಣಾ ಜಲಾದೆ, ಪಾಂಡುರಂಗ ಕುಂಬಾರ,ವೈಜಿನಾಥ ಬಿರಾದಾರ, ಸಂಗೀತಾ ಪಾಟೀಲ,ಅಶೋಕ ರೇವಣಿ ಸುವರ್ಣಾ ಪಾಟೀಲ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಪ್ರಶಿಕ್ಷಣಾರ್ಥಿಗಳಾದ ಶಾಂತಕುಮಾರ,ಸುಜಾತಾ ನಿರೂಪಿಸಿದರು,ಪ್ರಿಯಾಂಕಾ ಸ್ವಾಗತಿಸಿದರು, ತನುಜಾ ವಂದಿಸಿದರು.
ವರದಿ:ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ