ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಿರೂರ ಗ್ರಾಮದಲ್ಲಿ ಶ್ರೀ ಭೋಗೇಶ್ವರ ದೇವರ ಜಾತ್ರಾ ಮಹೋತ್ಸವವನ್ನು ನೂತನ ರಥ ಎಳೆಯುವದರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು ಕಳಸಾರೋಹಣ ರುದ್ರಾಭಿಷೇಕ ಮತ್ತು ಹೂವಿನ ಅಲಂಕಾರೋಹಣ ಹಾಗೂ ದಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.ಪ್ರತಿ ವರ್ಷದಂತೆ ಈ ವರ್ಷವೂ ದಿ-10-9-2023 ರವಿವಾರದಿಂದ ದಿ 11- 9-2023 ಸೋಮವಾರದವರೆಗೆ ಶ್ರೀ ಭೋಗೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು.
ದಿವ್ಯ ಸಾನಿಧ್ಯ ಶತಾಯುಷಿ ಶ್ರೀ ಷ.ಬ್ರ..ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೂರ
ಅಧ್ಯಕ್ಷತೆ ಶ್ರೀ ಷ.ಬ್ರ.ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೂರ ಇವರುಗಳು ವಹಿಸಿದ್ದರು.
ದಿನಾಂಕ 10.9.2023 ರವಿವಾರದಂದು ರಾತ್ರಿ 9.30ಕ್ಕೆ ಶ್ರೀ ಭೋಗೇಶ್ವರ ಭಜನಾ ಸಂಘ ಹಿರೂರ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘ ಸಿಂದಗಿ ಇವರಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.ದಿ-11.9.2023 ಸೋಮವಾರದಂದು ಮುಂಜಾನೆ 8 00.ಘಂಟೆಗೆ ಹುಲುಬಾವಿಯಿಂದ ಶ್ರೀ ಭೋಗೇಶ್ವರ ದೇವಸ್ಥಾನದವರೆಗೆ ಗಂಗಾ ಸ್ಥಳದಿಂದ
ಊರಿನ ಪ್ರಮುಖ ಬೀದಿಗಳಲ್ಲಿ ಕುಂಭ,ಕಳಸ ವಾದ್ಯ ವೈಭವದೊಂದಿಗೆ ನಡೆಸಲಾಯಿತು.
11 ಘಂಟೆಗೆ ಶ್ರೀಭೋಗೇಶ್ವರ ದೇವಸ್ಥಾನದಿಂದ ಡೋಣಿ ಭೋಗೇಶ್ವರದವರೆಗೆ ಪಲ್ಲಕ್ಕಿ ಉತ್ಸವ ನೆರವೇರಿತು.
ನಂತರ ಆರ್ಚಕರಾದ ಶ್ರೀ ಜಗನ್ನಾಥ ಅನಂತರಾವ, ಜೋಶಿ ಹಾಗೂ ಶ್ರೀ ವೆಂಕಟೇಶ್,ಗುಂಡಾಚಾರ್ಯ, ಜೋಶಿ ಇವರಿಂದ ಭೋಗೇಶ್ವರ ಕರ್ತೃ ಗದ್ದುಗೆಗೆ ಪೂಜೆ ನಡೆಯಿತು.
ಸಮಸ್ತ ಗ್ರಾಮಸ್ಥರು ಹಾಗೂ ಊರಿನ ಎಲ್ಲಾ ಗುರುಹಿಯರು ಮಹಿಳೆಯರು ಯುವಕರು ಹಾಗೂ ಹಿರೂರ,ಚೋಕಾವಿ,ತಮದಡ್ಡಿ,ಬಳಗಾನೂರ ಹಾಗೂ ಸುತ್ತ ಮುತ್ತಲಿನ ಗ್ರಾಮದವರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ವರದಿ-ಉಸ್ಮಾನ ಬಾಗವಾನ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.