ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವಿವಿಧ ಸಭೆಗಳಿಗೆ ಶಿಕ್ಷಣ ಸಚಿವರು ಹಾಗೂ
ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀಯುತ ಎಸ್.ಮಧು ಬಂಗಾರಪ್ಪನವರು ಸೆ.12 ರ ಬೆಳಿಗ್ಗೆ 9ಗಂಟೆಗೆ ಸೊರಬ ತಾಲೂಕು ಜಡೆ ಗ್ರಾಮದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟನೆ,ಬೆಳಿಗ್ಗೆ 10ಗಂಟೆಗೆ ಇವರ ಹುಟ್ಟೂರಾದ ಕುಬಟೂರು ಕೆರೆ ಬಾಗಿನ ಸಮರ್ಪಣೆ ಕಾರ್ಯಕ್ರಮ ಸಂಜೆ 4ಗಂಟೆ ಗೆ ಶಿವಮೊಗ್ಗ ಎಸ್ ಪಿ ಯೊಂದಿಗೆ ಗಣೇಶ್ ಚತುರ್ಥಿಗೆ ಸಂಬಂಧಿಸಿದಂತೆ ಸೌಹಾರ್ದ ಸಭೆಯಲ್ಲಿ ಪಾಲ್ಗೊಳ್ಳುವರು ನಂತರ ಸೊರಬದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಸೆ.13ರ ಬೆಳಿಗ್ಗೆ 10ಕ್ಕೆ ಸೊರಬ ತಾಲೂಕಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಸಲಿದ್ದಾರೆ.
ವರದಿ-ಶರತ್ ಗೌಡ
