ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿಯ ಹುಲಿಕಲ್ ಗ್ರಾಮದಲ್ಲಿ ಕರ್ನಾಟಕ ಭೀಮ್ ಆರ್ಮಿ (ರಿ.) ರಾಮನಗರ ಜಿಲ್ಲಾ ಘಟಕದ ವತಯಿಂದ ಹುಲಿಕಲ್ ಕರ್ನಾಟಕ ಭೀಮ್ ಆಮಿ೯ ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು.
ಕಾಯ೯ಕ್ರಮದ ಉಧ್ಘಾಟನೆಯನ್ನು ಭೀಮ್ ಆಮಿ೯ ಜಿಲ್ಲಾಧ್ಯಕ್ಷರಾದ ಪರಮೇಶ್ ಗೌತಮ್ ಮತ್ತು ಜಿಲ್ಲಾ ಕಾಮಿ೯ಕ ಘಟಕದ ಅಧ್ಯಕ್ಷರಾದ ಮುನಿರಾಜು ಮತ್ತು ಹಾಪ್ ಕಾಮ್ ಮಾಜಿ ನಿರ್ದೇಶಕರು ಮಂಜೇಶ್ ಕುಮಾರ್ ರವರು ದೀಪ ಹಚ್ಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಡಾ.ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಉಧ್ಘಾಟನೆ ಮಾಡಿದರು .
ಕಾಯ೯ಕ್ರಮದ ನಿರೂಪಣೆಯನ್ನು ಉಮೇಶ್ ರವರು ಮಾಡಿದರು .
ಕರ್ನಾಟಕ ಭೀಮ್ ಆರ್ಮಿ ಹುಲಿಕಲ್ ಗ್ರಾಮ ಘಟಕ ದ ನಾಮಫಲಕವನ್ನು ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ರಾದ ಪರಮೇಶ್ ಗೌತಮ್ ರವರು ಸ್ಕ್ರೀನ್ ತೆಗೆಯುವ ಮೂಲಕ ಉದ್ಘಾಟಿಸಿದರು.
ಮಂಜೇಶ್ ಕುಮಾರ್ ಮಾತನಾಡಿ ಸಂಘಟನೆಯ ಉದ್ದೇಶ ಮತ್ತು ಬಾಬಾ ಸಾಹೇಬರ ತತ್ವ ಸಿದ್ಧಾಂತಗಳನ್ನು ಕುರಿತು ಮಾತನಾಡಿದರು.
ಪರಮೇಶ್ ಗೌತಮ್ ಮಾತನಾಡಿ ಸಂಘಟನೆಯು ಸಂವಿಧಾನವನ್ನು ರಕ್ಷಣೆ ಮಾಡಬೇಕು ಸಂವಿಧಾನವನ್ನು ನಾವು ರಕ್ಷಣೆ ಮಾಡಿದರೆ ಸಂವಿಧಾನವು ನಮ್ಮನು ರಕ್ಷಣೆ ಮಾಡುತ್ತದೆ . ಬಾಬಾ ಸಾಹೇಬರು ಹೇಳಿದಂತೆ ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ ಅದನ್ನು ಕುಡಿದವನು ಘಜಿ೯ಸಲೇಬೇಕು ಆದ್ದರಿಂದ ಎಲ್ಲರೂ ಶಿಕ್ಷಣವನ್ನು ಪಡೆದು ವಿದ್ಯಾವಂತರಾಗಬೇಕು ಶಿಕ್ಷಣವು ಜಗತ್ತನ್ನು ಆಳುತ್ತದೆ ಕರ್ನಾಟಕ ಭೀಮ್ ಆರ್ಮಿ ಸಂಘಟನೆ ಯನ್ನು ಕುರಿತು ಮಾತನಾಡಿದರು.
ಮುನಿರಾಜು ಮಾತನಾಡಿ ಜಾತಿಯ ಬಗ್ಗೆ ಮಾತನಾಡಿದರೆ ಪುನಃ ಭೀಮ್ ಕೊರೆಗಾಂವ್ ಯುದ್ದ ಮಾಡುತ್ತೇವೆ.
ಬಾಬಾ ಸಹೇಬರು ಇಡೀ ಜೀವನ ಪೂರ್ತಿ ನಮ್ಮ ಜನಾಂಗದವರಿಗೋಸ್ಕರ ತ್ಯಾಗ ಮಾಡಿ ಸವಿಂಧಾನದ ಮೂಲಕ ಶಿಕ್ಷಣದ ಹಕ್ಕು ಸಮಾನತೆಯ ಹಕ್ಕು ಆಸ್ತಿ ಹಕ್ಕು ಇನ್ನೂ ಮುಂತಾದ ಮೂಲಭೂತ ಹಕ್ಕುಗಳನ್ನು ಕೊಟ್ಟಿದ್ದಾರೆ.
ಕಾರ್ಯಕ್ರಮದ ಲ್ಲಿ ಭೀಮ್ ಆರ್ಮಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಕಾಂತರಾಜು,ಜಿಲ್ಲಾ ಸಂಚಾಲಕ ರು ಕಿರಣ್ ರಾಮನಗರ ತಾಲೂಕ್ ಘಟಕ ಅಧ್ಯಕ್ಷರು ವೆಂಕಟೇಶ್,ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಉಮೇಶ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸಮಾಜ ಕಲ್ಯಾಣ ಅಧಿಕಾರಿ ಮುನಿಶೆಟ್ಟರ್ ಮಾಗಡಿ ಯುವ ಘಟಕದ ಅಧ್ಯಕ್ಷರಾದ ಅಭಿಷೇಕ್ ಪ್ರಧಾನ ಕಾಯ೯ದಶಿ೯ ಶಿವಯ್ಯ,ಹುಲಿಕಲ್ ಗ್ರಾಮ ಅಧ್ಯಕ್ಷರಾದ ಸುರೇಶ್ ಗೌರವ ಅಧ್ಯಕ್ಷರಾದ ರಾಜಣ್ಣ ಉಪಾಧ್ಯಕ್ಷರಾದ ಶ್ರೀನಿವಾಸ್,ಕುಮಾರ್,ಪ್ರಧಾನ ಕಾಯ೯ದಶಿ೯ ರಂಗನಾಥ್,ಮನು,ವೆಂಕಟೇಶ್ ರುದ್ರೇಶ್,ಕೆಂಪರಾಜು,ಲಕ್ಮಯ್ಯ,ಸಂಪತ್ತು,ದೊರೆ ಸ್ವಾಮಿ,ರತ್ನಾಕರ,ಮಂಜುನಾಥ್,ಶಿವಕುಮಾರ,ಭರತ್,ಗಂಗರಾಜು,ವೆಂಕಟೇಶ್,ರಂಗನಾಥ್ ಮೋಹನ್ ಹಾಗೂ ಊರಿನ ಗ್ರಾಮಸ್ಥರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.