ಬೀದರ್ /ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮಾತೆ ವೆರೋನಿಕರವರ ದ್ವಿ ಶತಮಾನೋತ್ಸವದ ಸಂದರ್ಭದಲ್ಲಿ ಮರಿಯ ನಿಲಯ ಮತ್ತು ಕಾರ್ಮೆಲ್ ನಿಕೇತನದ ಸಹೋದರಿಯರು ಬ್ರಿಮ್ಸ್ ಆಸ್ಪತ್ರೆ ಬೀದರ್ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದಾರೆ ಭಾನುವಾರ ಅಕ್ಟೋಬರ್ 1.2023 ರಂದು ಮಧ್ಯಾಹ್ನ 12 ಗಂಟೆಯಿಂದ 4 ರವರೆಗೆ.
ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಬೀದರ್.
ವಯಸ್ಸು:18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ರಕ್ತದಾನ ಮಾಡಲು ಅರ್ಹರು.
ವಿಶೇಷ ಸೂಚನೆ:ದಾನಿಗಳು ಸ್ಥಳಕ್ಕೆ ಬರುವ ಮೊದಲು ಉಪಹಾರ ಸೇವಿಸುವಂಥದ್ದು.
ಆಯೋಜಕರು ಸಿಸ್ಟರ್ ಕ್ರಿಸ್ಟಿನ್ ಮಿಸ್ಕಿತ್ ಎಸಿ ಕಾರ್ಮೆಲ್ ನಿಕೇತನ ಜಮಗೀ ಕಾಲೋನಿ ಬೀದರ್. ದೂರವಾಣಿ: 9663128952
ಸಿಸ್ಟರ್ ರಿತಿಕಾ ಎಸಿ,ಮರಿಯ ನಿಲಯ ಶಾಪುರ್ ಗೇಟ್,ಬೀದರ್.
ದೂರವಾಣಿ: 9632925294
ಸ್ತುತಿ ಸಲಹೆಗಾರರು ಬ್ರಿಮ್ಸ್ ಆಸ್ಪತ್ರೆ ಬೀದರ್.
ದೂರವಾಣಿ: 9620551395
ಈ ಒಂದು ಕಾರ್ಯಕ್ರಮವು ಎಷ್ಟೋ ರೋಗಿಗಳ ಪಾಲಿಗೆ ಒಂದು ವರದಾನವಾಗಲಿದೆ ನಮ್ಮ ವರದಿಗಾರರು ಈ ಕಾರ್ಯಕ್ರಮದ ಆಯೋಜಕರಲ್ಲಿ ಕೇಳಿದಾಗ ದೇವರು ಹರ್ಷ ಚಿತ್ತದಿಂದ ಕೊಡುವವರನ್ನು ಪ್ರೀತಿಸುತ್ತಾನೆ ಎಂದು ಆಯೋಜಕರು ಹೇಳಿದರು ಇಡೀ ಬೀದರ್ ಜಿಲ್ಲೆಯ ಎಲ್ಲಾ ದಾನಿಗಳು ಹೆಚ್ಚಿನ ಸಂಖ್ಯೆ ಬಂದು ರಕ್ತದಾನ ಮಾಡಿ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಸಹಾಯ ಮಾಡಿ ಎಂದು ವಿನಂತಿಸಿಕೊಂಡರು. ಇದೇ ಸಂದರ್ಭದಲ್ಲಿ ಬೀದರ್ ಬ್ರಿಮ್ಸ್ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದವನ್ನು ಹೇಳಿದರು ನಿಜಕ್ಕೂ ಇಂತಹ ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರ ನೆರವು ಅತಿ ಅವಶ್ಯಕ ಬೀದರ್ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮದ ಆಯೋಜಕರಾದ ಸಿಸ್ಟರ್ ಕ್ರಿಸ್ಟಿನ್ ಮಿಸ್ಕಿತ್ ಹಾಗೂ ಸಿಸ್ಟರಿ ರಿತಿಕಾರವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಲು ವಿನಂತಿಸಿದರು.
ನೀವು ರಕ್ತದಾನ ಮಾಡಲು ಬರುವಾಗ ದಯವಿಟ್ಟು ನಿಮ್ಮ ಸ್ನೇಹಿತರನ್ನು ಕರೆತನ್ನಿ.
ವರದಿ-ಮಹಾನ್ ಕೋಟೆ
