ಶಮಂತಕೊಪಾಖ್ಯಾನ…(ಗಣೇಶ ಚತುರ್ಥಿ ದಿನ ಎಲ್ಲರೂ ತಪ್ಪದೆ…ಕೇಳಬೇಕಾದ.. ಓದಬೇಕಾದ ಕಥೆ )
ಸೂರ್ಯನಲ್ಲಿ ಉಗ್ರ ತಪಸ್ಸು ಆಚರಿಸಿ…ಒಂದು ದಿವ್ಯವಾದ ಮಣಿ ವರವಾಗಿ ಪಡೆದಿದ್ದ…ಸತ್ರಾರ್ಜಿತ ಮಹಾರಾಜ..ಆ ಮಣಿಯ ವಿಶೇಷತೆ..ಏನೆಂದರೆ..ನಿತ್ಯ 80 kg ಗಳಷ್ಟು ಬಂಗಾರವನ್ನು ಕೊಡುವ ದಿವ್ಯವಾದ ಶಮಂತಕ ಮಣಿಯದು…ಆ ಮಣಿಯನ್ನು ಇಟ್ಟ್ಕೊಂಡ ಮನುಷ್ಯ…ಸದಾ ದಾನ ಧರ್ಮಾಧಿಗಳನ್ನ ಮಾಡ್ತಿರ್ಬೇಕು…ಮೈಲಿಗೆಯಲ್ಲಿ ಇರತಕ್ಕದಲ್ಲ..ಹೀಗೆ ಆ ಮಣಿಯ..ನಿಯಮ…ಅದನ್ನು ಪಡೆದ ರಾಜ..ಪ್ರತಿಷ್ಠೆಯಾಗಿ ರಾಜ ಸಭೆಯಲ್ಲಿ ಎಲ್ಲರಿಗೂ ತೋರಿಸುತ್ತಾನೆ…ಇದನೆಲ್ಲ ಗಮನಿಸಿದ ಶ್ರೀಕೃಷ್ಣ ಮಾತಿಗೆ.. ಮಹಾರಾಜ ಈ ಮಣಿಯನ್ನ.. ಕೆಲ ದಿನಗಳ ಮಟ್ಟಿಗ್ಗೆ ನನಗೆ ಕೊಡುವೆಯಾ…ನನ್ನ ಪ್ರಜೆಗಳಿಗೆ ಇದರ ಅವಶ್ಯಕತೆ..ಎಂದು ಕೇಳಿದಾಗ…ನಿರಾಕರಿಸಿದ ಮಹಾರಾಜ…ಶ್ರೀಕೃಷ್ಣ ಮರು ಮಾತಾಡದೆ… ಸರಿ ಅಯ್ತು ಎಂದು ತನ್ನ ಊರು ದ್ವಾರಕೆಯ ಕಡೆ ನಡೆದ…ಮರು ದಿನ ಗಣೇಶ ಚತುರ್ಥಿ…ವ್ರತ ಶ್ರೀಕೃಷ್ಣನ ಅರಮನೆಯಲ್ಲಿ ವಿಜೃಂಭಣೆಯಿಂದ ಪೂಜೆಯಾಗಿ…ವಿಶ್ರಾಂತಿಯ ಕೋಣೆಯ ಕಿಟಕಿಯ ಬಳಿ ಕೃಷ್ಣ ಕುಳಿತುಕೊಂಡಾಗ…ರುಕ್ಮಿಣಿ ಹಾಲು ಹಿಡಿದು ಬರ್ತಾಳೆ…ಆ ಹಾಲಿನಲ್ಲಿ ಚಂದ್ರ ಬಿಂಬ ಕಂಡ.. ಶ್ರೀಕೃಷ್ಣ…ಮನಸ್ಸಲ್ಲಿ ಏನೋ ಯೋಚಿಸುತ್ತ ಹಾಗೆ ಮಲಗಿ…ನಾಳೆ ಮತ್ತೆ..ಸತ್ರಾರ್ಜಿತ ಅರಮನೆಯ ಕಡೆ ಹೋದಾಗ.. ಅಲ್ಲಿ ಒಂದು ಆಘಾತ…ಬೇಟೆಗೆಂದು ಶಮಂತಕಮಣಿ ಧರಿಸಿ ಹೋಗಿದ್ದ…ಮಹಾರಾಜನ ಸಹೋದರ ಪ್ರಸೇನ..2 ದಿನದಿಂದ.. ನಾಪತ್ತೆಯಗಿರ್ತಾನೆ..ಶ್ರೀಕೃಷ್ಣನ ಮೇಲೆ ಅನುಮಾನಗೊಂಡ ರಾಜ… ಕೃಷ್ಣ ಮಣಿಗಾಗಿ… ನೀನೇ ಯಾಕೆ ಈ ತರದ ನಾಟಕವಾಡಿರಬಾರದು… ಮೊದಲೇ ನೀನು..ನವನೀತಾ ಚೂರ ಎಂದು ಹಾಗೆ ಹೀಗೆ… ಮಾತಾಡಿದಾಗ…ಕೋಪಗೊಂಡ ಕೃಷ್ಣ…ಪ್ರಸೇನನ..ಜಾಡು ಹಿಡಿದು..ತಾನೇ ಕಾಡಿಗೆ ಹೋಗ್ತಾನೆ ಹುಡುಕಲು…ಕಾಡಲ್ಲಿ ಸ್ವಲ್ಪ ಮುಂದೆ ಹೋಗ್ತಾ…ಪ್ರಸೇನನ ಶವ ಬಿದ್ದಿರತ್ತೆ..ಆತನನ್ನ ಸಿಂಹವೊಂದು ಕೊಂದು ಹೋಗಿರತ್ತೆ…ಕೊರಳಲ್ಲಿ ಮಣಿ ಇರುವದಿಲ್ಲ…ಸಿಂಹದ ಹೆಜ್ಜೆ ಗುರುತು ಹಿಡಿದು ಹೋದ ಕೃಷ್ಣ..ಮುಂದೆ ಅದೇ ಸಿಂಹ ಸತ್ತು ಬಿದ್ದೀರತ್ತೆ… ಮತ್ತೆ ಮುಂದೆ ಗುಹೆಯಲ್ಲಿ ಹೊರಟ ಕೃಷ್ಣನಿಗೆ… ಸುಂದರ ಯುವತಿಯೊಬ್ಬಳು… ಶಮಂತಕಮಣಿಯನ್ನು ಧರಿಸಿ ಕೂತಿರ್ತಾಳೆ…ಕಂಡ ಕೃಷ್ಣ.. ವಿಚಾಸರಿಸುತ್ತಿರುವಾಗ…ಜಾoಬುವಂತನ ಆಗಮವಾಗಿ…ಮಣಿಯ ಬಗ್ಗೆ ವಿಚಾರಿಸಿದಾಗ… ಅವನು ಮಣಿಯನ್ನು ಕೊಡಲು ನಿರಾಕರಿಸುತ್ತಾನೆ… ಮಾತಿನ ಚಕಮಕಿಯಾಗಿ…ಅವರಿಬ್ಬರ ಮಧ್ಯ ಘೋರ 18 ದಿನ ಯುದ್ಧವಾಗಿ… ಕೊನೆಗೆ ಜಾOಬವಂತ..ಸುಸ್ತಾಗಿ…ಯಾರಯ್ಯ ನೀನು ಮಹಾನುಭಾವ…ಎಂದು ಕೇಳಿದಾಗ…ಕೃಷ್ಣ ತನ್ನ ಹಿಂದಿನ..ರಾಮ ರೂಪ ದರ್ಶನ ಮಾಡಿಸುತ್ತಾನೆ… ರಾಮಾವತಾರದಲ್ಲಿ ಜಾoಬುವಂತ..ರಾಮನಲ್ಲಿ ನಾನು ನಿನ್ನ ಜೊತೆ ಮಲ್ಲ ಯುದ್ಧವಾಡಬೇಕು ಎಂದು ವರ ಕೇಳಿದಾಗ…ರಾಮ ಸಮಯ ಬರಲಿ ಎಂದು ಹೇಳಿದ್ದನಂತೆ…ಆ ಸಮಯ ದ್ವಾಪರದಲ್ಲಿ ಬಂತೆಂದು… ಜಾoಬುವಂತ…ನೆನೆಯುತ್ತಾನೆ ಇತ್ತ..ಕೃಷ್ಣನ ಕಾಲಿಗೆ ಬಿದ್ದು..ತನ್ನ ಆರಾಧ್ಯ ದೈವ ರಾಮರೂಪಿ ಕೃಷ್ಣನನ್ನ ಕ್ಷಮೆಯಾಚಿಸಿ ಮಣಿಯನ್ನು ಕೊಟ್ಟು…ಮಗಳನ್ನು ಕೊಟ್ಟು…ಕಳುಹಿಸುತ್ತಾನೆ…ಜಾOಬುವತಿಯನ್ನ ಮದುವೆಯಾಗಿ…ದ್ವಾರಕೆಗೆ ಬಂದ ಕೃಷ್ಣ…ರಾಜನಿಗೆ ನಡೆದಿದ್ದೆಲ್ಲ ವಿವರಿಸಿ…ಆ ಮಣಿಯನ್ನ ಆತನ ಕೈಗೆ ಇಟ್ಟಾಗ…ಸತ್ರಾರ್ಜಿತ…ಶ್ರೀಕೃಷ್ಣನಲ್ಲಿ ಕ್ಷಮೆ ಕೇಳಿ… ಕಾಲು ತೊಳೆದು ತನ್ನ ಮಗಳಾದ ಸತ್ಯಭಾಮೆಯನ್ನ ಕೊಟ್ಟು ವಿವಾಹ ಮಾಡ್ತಾನೆ…ಜೊತೆಗೆ ವರದಕ್ಷಿಣೆಯಾಗಿ..ಶಮಂತಕ ಮಣಿಯನ್ನು ಸಹ ಕೊಡ್ತಾನೆ….( ಭಾದ್ರಪದ ವಿನಾಯಕ ಚೌತಿಯ ಚಂದ್ರ ದರ್ಶನದಿಂದ ಸ್ವತಃ ಶ್ರೀಕೃಷ್ಣನಿಗೆ ಅಪವಾದ ತಪ್ಪಲಿಲ್ಲ ಎಂಬುವದಕ್ಕೆ ಈ ಕಥೆ ಸಾಕ್ಷಿ ) ಓಂ ನಮೋ ಸಿದ್ದಿ ವಿನಾಯಕಾಯ ನಮಃ
ಬರಹ:ಈ ಶಿವರಾಜ್ ಅರಸು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.