ಕಲಬುರಗಿ:ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಏಕೈಕ ದೇಶ.ವಿವಿಧ ಸಂಸ್ಕೃತಿ,ಭಾಷೆ, ವೇಷ ಭೂಷನದಿಂದಾಗಿ ಭಾರತ ವಿಶ್ವದಲ್ಲೇ ವಿಶಿಷ್ಟ ದೇಶ ಎಂದು ಶ್ರೀ ಕೃಷ್ಣ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ.ಬಾಲಾಜಿ ಏಕನಾಥರಾವ ಕೋಣಳೆ ಹೇಳಿದರು ಅವರು ಶನಿವಾರ ನಗರದ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಭಾಗದಿಂದ ಏರ್ಪಡಿಸಲಾದ ರಾಜಭಾಷಾ ಹಿಂದಿ ದಿವಸದ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಹಿಂದಿ ಭಾಷೆಯ ಬೆಳವಣಿಗೆಯಲ್ಲಿ ದಕ್ಷಿಣ ಭಾರತದ ಸಾಹಿತಿಗಳ,ಶಿಕ್ಷಣ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಪಾತ್ರ ಕುರಿತು ಮಾತನಾಡುತ್ತಾ,ಭಾರತದಲ್ಲಿ 120 ಕ್ಕೂ ಹೆಚ್ಚು ಭಾಷೆಗಳಿದ್ದು 500 ಕ್ಕೂ ಹೆಚ್ಚು ಉಪಭಾಷೆಗಳಿವೆ. ಹಿಂದಿ ಭಾಷೆ ಪುರಾತನ ಭಾಷೆಯಾಗಿದ್ದು ಸ್ವತಂತ್ರ ಸಂಗ್ರಾಮದಲ್ಲೂ ಈ ಭಾಷೆಯನ್ನು ವ್ಯಾಪಕವಾಗಿ ಬಳಸಲಾಗಿದೆ ಉತ್ತರ ಭಾರತದಲ್ಲಿ ಹಿಂದಿ ಭಾಷೆಯೇ ಪ್ರಧಾನವಾಗಿದೆ ಎಂದರು.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಬಳಕೆ ಕಡಿಮೆಯಿದ್ದರೂ ಸೀತಾರಾಮ,ನಾಗೇಂದ್ರ ಪುರುಷೋತ್ತಮ,ನಾಗೇಶ್ವರರಾವ,ಬಾಲಕೃಷ್ಣರಾವ, ಸುಮಿತ್ರಾ ನಂದನಪಂತ,ಡಾ ರೆಡ್ಡಿ,ರಾಮನಾಯ್ಡು, ಡಾ ಭೀಮಸೇನ್,ನರಸಿಂಹರಾವ ಮುಂತಾದ ಸಾಹಿತಿಗಳು ಹಿಂದಿ ಭಾಷೆಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಭಾಷಾ,ಕಲಾ, ಮಾನವೀಕತೆ,ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯದ ಡೀನ್ ಡಾ.ನಿಶಾತ ಆರೀಫ್ ಹುಸೇನಿ, ಇವರು ಭಾಷೆಗಳ ಮಹತ್ವ ಕುರಿತು ಮಾತನಾಡಿದರು ಭಾಷೆಗಳಿಲ್ಲದೆ ಮನುಷ್ಯನ ಪ್ರಗತಿ ಇಲ್ಲ. ಭಾಷೆಯಿಂದಾನೆ ಮನುಷ್ಯನ ಅಸ್ತಿತ್ವ ಇದೆ ಹಿಂದಿ ವಿಭಾಗದ ಚಟುವಟಿಕೆಗಳನ್ನು ಶ್ಲಾಘಿಸಿದರು.ಹಿಂದಿ ದಿವಸದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕೆ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಷಣ,ನಿಬಂಧ ಮತ್ತು ಚರ್ಚೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು ಶಿಕ್ಷಕರಿಗೂ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿ ಫಯಾಜ್ ಪ್ರಾರ್ಥಿಸಿದರೆ,ವಿದ್ಯಾರ್ಥಿನಿ ಬರೀರಾ ಸ್ವಾಗತಿಸಿದರು.ಡಾ.ಆಫಷನ್ ದೇಶಮುಖ ಪ್ರಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಉಮರ್,ಜೋಯಾ ಇವರು ಹಿಂದಿ ಭಾಷೆಯ ಮಹತ್ವ ಕುರಿತು ಭಾಷಣ ಮಾಡಿದರು ಅಫಿಯಾ ಕವಿತಾ ಕವನ ವಾಚಿಸಿದರು.
ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಧ್ಯಾಪಕ ಡಾ.ಮುಜೀಬ ಬಹುಮಾನ ವಿತರಣಾ ಸಮಾರಂಭ ನಡೆಸಿಕೊಟ್ಟರು ಡಾ ಮಿಲನ್ ಬಿಷನೋಯ್ ವಂದಿಸಿದರು ವಿದ್ಯಾರ್ಥಿನಿಯರಾದ ತಯ್ಯಬಾ ಮತ್ತು ಸುಮಯ್ಯ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಕೆಬಿಎನ್ ವಿವಿಯ ಬಿ ಎ,ಬಿ ಕಾಮ್,ಬಿ ಎಸ್ಎಸ್ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.
ವರದಿ:ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.