ಕಲಬುರಗಿ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನದ ಕಲಂ 371 (ಜೆ) ಅನ್ವಯ ವಿಶೇಷ ಮೀಸಲಾತಿ ನೀಡಬೇಕು ಎಂಬ ಹೋರಾಟವನ್ನು ಹಳ್ಳಿ ಹಳ್ಳಿಗೂ ಕೊಂಡೊಯ್ದವರಲ್ಲಿ ಹೋರಾಟಗಾರ,ಮಾಜಿ ಶಾಸಕ ವೈಜನಾಥ ಪಾಟೀಲರ ಪ್ರಮುಖ ಪಾತ್ರವಾಗಿತ್ತು
ಹೀಗಿರುವಾಗ ಸರಕಾರವು ಮಾಜಿ ಶಾಸಕ ವೈಜನಾಥ ಪಾಟೀಲರನ್ನು ಮರೆತಿರುವ ಸರಕಾರದ ನಡೆಯನ್ನು ಕರವೇ(ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಶೇಕ ಬಾಲಾಜಿ ಅವರು ತೀವ್ರವಾಗಿ ಖಂಡಿಸಿದ್ದರು.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಹೋರಾಟದ ತೀವ್ರತೆ,ಕಾವಿಗಂಜಿಯೇ ಕೇಂದ್ರದಲ್ಲಿದ ಯುಪಿಎ ಆಡಳಿತ 2013 ರಲ್ಲಿ ಕಲಂ 371(ಜೆ) ತಿದ್ದುಪಡಿ ಮಾಡಿ ಜಾರಿಗೊಳಿಸಿತ್ತು.ಕಲಂ 371(ಜೆ) ಅನುಚ್ಛೇದದ ತಿದ್ದುಪಡಿಗೊಂಡು ಬರೋಬ್ಬರಿ 1ದ ಸಂವತ್ಸರ ತುಂಬಿರುವ ಸುಸಮಯವಿದು.ಹೀಗಾಗಿ ಕಲಂ 371 (ಜೆ) ಜಾರಿಗೊಂಡ ದಶಮಾನೋತ್ಸವ ಆಚರಣೆಗೂ ಜಿಲ್ಲಾಡಳಿತ ಕರೆ ಕೊಟ್ಟಿದ್ದರಿಂದಾಗಿ ಜಿಲ್ಲೆಯಲ್ಲಿ ಅನೇಕ ಸಮಾರಂಭಗಳನ್ನು ಆಯೋಜಿಸಲಾಗಿತ್ತರಾದರೂ ಯಾವೊಂದು ಸಮಾರಂಭದಲ್ಲಿಯೂ ಹೋರಾಟದ ರೂವಾರಿ ಈ ಬಗ್ಗೆ ಜನಮತ ಮೂಡಿಸಿದ್ದ ವೈಜನಾಥ ಪಾಟೀಲರ ಸ್ಮರಣೆ ಕಾಣಲೇ ಇಲ್ಲ ಇನ್ನೂ ಅಮೃತ ಮಹೋತ್ಸವ ಹಾಗೂ ದಶಮಾನೋತ್ಸವಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಕೂಡಾ ಅವರ ಭಾಷಣದಲ್ಲಿ ಕಲಂ 371(ಜೆ) ತಿದ್ದುಪಡಿಗಾಗಿ ಡಾ.ಖರ್ಗೆ ಹಾಗೂ ಧರ್ಮಸಿಂಗ ಕಾರಣರೆಂದು ಹೇಳಿದರು.ಆದರೆ ಈ ಭಾಗಕ್ಕೆ ಕಲಂ 371 (ಜೆ) ಜಾರಿಗಾಗಿ ಹೋರಾಡಿದ ಮಾಜಿ ಶಾಸಕ ವೈಜನಾಥ ಪಾಟೀಲರನ್ನು ಸ್ಮರಿಸದೇ ಅವರನ್ನು ಮಾಡಿ ಮರೆತಿರುವ ಸರಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.