ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಗತ್ತಿಗೆ ಶಿಲ್ಪಕಲೆಗಳ ಕೊಡುಗೆ ನೀಡಿದವರು ವಿಶ್ವಕರ್ಮರು:ವೀರೇಶ ಯಾದವ್ ಮಾಜಿ ಸೈನಿಕರು

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಹೋಮ,ಹವನ,ಶ್ರೀ ಕಾಳಿಕಾದೇವಿ ಮೂರ್ತಿಗೆ ಕ್ಷೀರಾಭಿಷೇಕ,ಪುಷ್ಪಾಲಂಕಾರ,ನೈವೇದ್ಯ ನೆರವೇರಿತು.ಶ್ರೀ ಭಗವಾನ್ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗಣ್ಯಾತೀಗಣ್ಯರ ಸಮ್ಮುಖದಲ್ಲಿ ವಿಶ್ವಕರ್ಮ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.ಗಂಗಾವತಿ ರಸ್ತೆಯಲ್ಲಿರುವ ಶ್ರೀ ವಿಶ್ವಕರ್ಮ ವೃತ್ತಕ್ಕೆ ಮತ್ತು ಜಕಣಾಚಾರಿ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ ಗಣ್ಯರಿಂದ ಪುಷ್ಪಾರ್ಚನೆ ಸಲ್ಲಿಸಲಾಯಿತು ನಂತರ ಧಾರ್ಮಿಕ ಸಭೆ ನಡೆಯಿತು.ಧ್ವಜಾರೋಹಣ ನೆರವೇರಿಸಿದ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ ಮಾತನಾಡಿ ವಿಶ್ವಕರ್ಮ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಆರ್ಥಿಕವಾಗಿ,ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ.ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ನಾವುಗಳೆಲ್ಲರೂ ಒಗ್ಗಟ್ಟಾಗಬೇಕು,ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು,ರಾಜ್ಯದಲ್ಲಿ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ನಾವುಗಳೆಲ್ಲರೂ ಒಗ್ಗೂಡಿ ಹೋರಾಟದ ಫಲವಾಗಿ ಇಂದು ವಿಶ್ವಕರ್ಮ ಜಯಂತಿ ಆಚರಿಸುತ್ತಿದ್ದೇವೆ.ಸಮಾಜ ಸಂಘಟನೆ ಆದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾದ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ವೀರೇಶ ಯಾದವ್ ಮಾತನಾಡಿ ಪ್ರಪಂಚದಲ್ಲೇ ಪಂಚಕುಲ ಕಸುಬುಗಳನ್ನು ಹೊಂದಿರುವ ಏಕೈಕ ಸಮಾಜ ವಿಶ್ವಕರ್ಮ ಸಮಾಜ.ಈ ಸಮಾಜ ಅನಾದಿಕಾಲದಿಂದಲೂ ಗುಡಿ ಗುಂಡಾರಗಳನ್ನು,ಮಹಲ್ ಗಳನ್ನು ನಿರ್ಮಿಸುತ್ತಿದ್ದಾರೆ ಇಂತಹುಗಳಿಂದಲೇ ಇಂದು ನಮ್ಮ ದೇಶದ ಸಂಸ್ಕೃತಿ ಉಳಿದುಕೊಂಡಿದೆ,ಜಗತ್ತಿಗೆ ಶಿಲ್ಪಕಲೆಗಳನ್ನು ನೀಡಿದ ಸಮಾಜವಾಗಿದೆ,ಸಂಸ್ಕೃತಿ,ಪರಂಪರೆಗಳನ್ನು ಉಳಿಸಿಕೊಂಟ್ಟಂತಹ ಯಾವುದಾದರೂ ಸಮಾಜ ಇದ್ದರೆ ಅದು ವಿಶ್ವಕರ್ಮ ಸಮಾಜ.ಸಮಾಜಕ್ಕೆ ಒಂದು ಗಟ್ಟಿಯಾದ ಧ್ವನಿ ಬರಬೇಕಾದರೆ ಮೊದಲು ಪ್ರತಿ ಕುಟುಂಬದ ಮಕ್ಕಳು ಶಿಕ್ಷಣವಂತರಾಗಬೇಕು ಆಗ ಸರ್ಕಾರದ ಸೌಲಭ್ಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸೋಮನಾಥ ಪತ್ತಾರ ಸುಕಲಪೇಟೆ ರಾಜ್ಯ ಕಾರ್ಯದರ್ಶಿಗಳು ಅ.ಕ.ವಿ.ಮ.ಬೆಂಗಳೂರು, ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಉಪಾಧ್ಯಕ್ಷರಾದ ತಿರುಮಲ ಆಚಾರಿ,ಅಂಬಣ್ಣ ಗೊರೆಬಾಳ,ಕಾರ್ಯದರ್ಶಿ ಧರ್ಮಣ್ಣ ಗುಂಜಳ್ಳಿ,ಸಂಗೊಳ್ಳಿ ರಾಯಣ್ಣ ತಾಲೂಕ ಅದ್ಯಕ್ಷ ಸುರೇಶ ಸಿದ್ದಾಪುರ,ತಿಮ್ಮಣ್ಣ ವಾಲೇಕಾಕಾರ,ವೆಂಕಟೇಶ ಬಾದರ್ಲಿ,ಮಾಜಿ ಸೈನಿಕರಾದ ವೀರೇಶ ಯಾದವ್,ಕರಿಯಪ್ಪ ಬೂದಿಹಾಳ,ಸಂಘಟನಾ ಕಾರ್ಯದರ್ಶಿ ಚನ್ನಪ್ಪ ಕೆ ಹೊಸಹಳ್ಳಿ,ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಷಣ್ಮುಖಪ್ಪ ಪತ್ತಾರ,ಸಂಘಟನಾ ಕಾರ್ಯದರ್ಶಿ ಮುತ್ತಣ್ಣ ಪತ್ತಾರ ಹಾಗೂ ವಿಶ್ವಕರ್ಮ ಸಮಾಜದ ತಾಲೂಕ ಪದಾಧಿಕಾರಿಗಳು,ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಎಲ್ಲಾ ಹೋಬಳಿ ಘಟಕಗಳ ಪದಾಧಿಕಾರಿಗಳು,ಸಮಾಜದ ಹಿರಿಯರು,ಯುವಕರು,ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ