ಕಲಬುರಗಿ:ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜಗತ್ತಿನ ಸೃಷ್ಟಿಕರ್ತ ಶ್ರೀ ವಿಶ್ವಕರ್ಮರ ಜಯಂತೋತ್ಸವವನ್ನು ಆಚರಿಸಲಾಯಿತು.
ಕಲಬುರಗಿ ನಗರದಲ್ಲಿನ ಶ್ರೀ ಎಸ್ ಎಮ್ ಪಂಡಿತ ರಂಗ ಮಂದಿರದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಯಂತೋತ್ಸವದಲ್ಲಿ ವೇದಿಕೆ ಮೇಲಿರುವ ಅತಿಥಿ ಗಣ್ಯರು ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಇದೇ ವೇಳೆ ದಿವ್ಯ ಸಾನಿಧ್ಯ ವಹಿಸಿದಂತಹ ಪರಮಪೂಜ್ಯ ಶ್ರೀ ದೊಡ್ಡೇಂದ್ರ ಮಹಾಸ್ವಾಮೀಜಿಗಳು ವಿಶ್ವಕರ್ಮರ ಏಕದಂಡಗಿ ಮಠ ಸುಲೇಪೇಠ ಅವರು ಮಾತನಾಡಿ ವಿಶ್ವ ಎಂದರೆ ಜಗತ್ತು,ಕರ್ಮ ಎಂದರೆ ಕೆಲಸ ಜಗತ್ತಿನಲ್ಲಿ ಎಲ್ಲಾ ಕೆಲಸಗಳು ಮಾಡಿಕೊಂಡು ಬಂದಿರುವವರು ಈ ಸಮಾಜದವರು ವಿಶ್ವಕರ್ಮ ಎಂದ ಕೂಡಲೇ ಬಡಿಗ,ಕಂಬಾರ,ಅಕ್ಕಸಾಲಿಗ,ಕಂಚುಗಾರ,ಶಿಲ್ಪಿ ಈ ಪಂಚವೃತ್ತಿ ಕೆಲಸ ಮಾಡುವವರೇ ದೇವರು ಎಂದು ಸಾಮಾನ್ಯವಾಗಿ ಎಲ್ಲರಿಗೂ ಅನ್ನಿಸುತ್ತದೆ,ಆದರೆ ವಿಶ್ವಕರ್ಮನನ್ನು ದೇವರ ಸೃಷ್ಟಿಕರ್ತ ಎಂದು ಕರೆಯುತ್ತೇವೆ ವಿಶ್ವದಲ್ಲಿರುವ ಎಲ್ಲಾ ದೇವಾದಿ ದೇವತೆಗಳಿಂದ ತಂದೆ ಎಂದು ಕರೆಸಿಕೊಳ್ಳುತ್ತಾನೆ ವಿಶ್ವಕರ್ಮ ಎಂದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಮೂರುಜಾವದೇಶ್ವರ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಮಹಾಸ್ವಾಮೀಜಿಗಳು,ಶ್ರೀ ಶ್ರೀ ಶ್ರೀ ಪ್ರಣವ ನಿರಂಜನ ಮಹಾಸ್ವಾಮೀಜಿ,ಶ್ರೀ ವೀರಣ್ಣ ಮುತ್ಯ, ಮೌನೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಶಿವರಾಜ ಶಾಸ್ತ್ರೀ,ಕಲಬುರಗಿಯ ಶ್ರೀ ವಿಶ್ವಕರ್ಮ ಸಮಿತಿಯ ಅಧ್ಯಕ್ಷ ವೀರೇಶ ಬಡಿಗೇರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ವರದಿ:ಅಪ್ಪಾರಾಯ ಬಡಿಗೇರ
