ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನೀರಾವರಿ ಇಲಾಖೆಯ ಹತ್ತಿರವಿರುವ ತಾಯಿ ಮಕ್ಕಳ ಆಸ್ಪತ್ರೆಯ ಕಟ್ಟಡದ ಮುಂಭಾಗದಲ್ಲಿ ಚಿಕ್ಕ ಕುದುರೆ ಮರಿಯೊಂದು ಗಾಯಗೊಂಡು ನರಳಾಡುತ್ತಿರುವುದನ್ನು
ನೋಡಿದ ಸ್ಥಳೀಯರಾದ ಸೈಯದ್ ಆದಿಲ್ ಜಾಗೀರದಾರ ಅವರು ನಮ್ಮ ವನಸಿರಿ ಫೌಂಡೇಶನ್ ಗೆ ಕರೆ ಮಾಡಿ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ವನಸಿರಿ ತಂಡ ಪಶುವೈದ್ಯ ಅಧಿಕಾರಿಗಳಾದ ಡಾ.ಶರಣೇಗೌಡ ಪಾಟೀಲ ಅವರಿಗೆ ಕರೆಮಾಡಿ ತಿಳಿಸಿದಾಗ ತಕ್ಷಣ ಪಶು ಆಸ್ಪತ್ರೆ ಸಿಬ್ಬಂದಿಗಳು ಆಗಮಿಸಿ ಕುದುರೆ ಮರಿಗೆ ಚಿಕಿತ್ಸೆ ನೀಡಿದರು.
ಚಿಕಿತ್ಸೆ ಕೊಡಿಸಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ವನಸಿರಿ ಫೌಂಡೇಶನ್ ತಂಡ ಪರಿಸರ ಜಾಗೃತಿ ಜೊತೆಗೆ ಪರಿಸರದಲ್ಲಿ ಇರುವ ಪ್ರಾಣಿ ಪಕ್ಷಿಗಳನ್ನು ಕಾಪಾಡುವುದೇ ವನಸಿರಿ ತಂಡದ ಗುರಿಯಾಗಿದೆ ಇದರಂತೆ ಈಗಾಗಲೇ ಬಹಳಷ್ಟು ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ.ಪ್ರತಿಯೊಬ್ಬರಿಗೂ ಮೂಕ ಪ್ರಾಣಗಳ ಮೇಲೆ ದಯವಿರಲಿ ಮೂಕ ಪ್ರಾಣಿಗಳಿಗೆ ಯಾರೂ ಕೂಡ ಕಲ್ಲಿನಿಂದ ಹೊಡೆಯುವುದು,ವಾಹನಗಳಿಂದ ಹೊಡೆಯುವುದು ಮಾಡಬೇಡಿ,ಮೂಕಪ್ರಾಣಿಗಳನ್ನು ಉಳಿಸೋಣ ಪರಿಸರವನ್ನು ಬೆಳಸೋಣ ಎಂದು ಮನವಿ ಮಾಡಿದರು ಹಾಗೂ ನಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಕುದುರೆ ಮರಿಗೆ ಚಿಕಿತ್ಸೆ ನೀಡಿದ ಪಶು ವೈದ್ಯರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪುರ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್ ಹಾಗೂ ಸ್ಥಳೀಯ ಯುವಕರು ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.