ಕಲಬುರಗಿ; ಇಲ್ಲಿನ ಖಾಜಾ ಬಂದಾನವಾಜ್ ವಿಶ್ವ ವಿದ್ಯಾಲಯದ ವಿಜ್ಞಾನ ನಿಕಾಯದ ಜೈವಿಕ ತಂತ್ರಜ್ಞಾನ ವಿಭಾಗದ ವತಿಯಿಂದ ಬುಧವಾರ ಆಹಾರ ಸಂಸ್ಕರಣ ಕುರಿತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಪ್ರದರ್ಶನಕ್ಕೆ ವಿಜ್ಞಾನ ನಿಕಾಯದ ಡೀನ್ ಡಾ.ನಿಶಾತ ಅರೀಫ್ ಹುಸೇನಿ ಚಾಲನೆ ನೀಡಿದರು.
ವಿಭಾಗದ ಸಂಯೋಜಕಿ ಡಾ ಜಹನಾರಾ ಕುಡ್ಸಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ ಎ ಮುಜೀಬ್, ಡಾ.ನೀಲಂ ಮಿಶ್ರಾ ಮತ್ತು ಡಾ.ಬದರಿನಾಥ ಕುಲಕರ್ಣಿ ಇವರೆಲ್ಲರ ಮಾರ್ಗದರ್ಶನದಲ್ಲಿ ಜರುಗಿತು.
ಈ ಪ್ರದರ್ಶನದಲ್ಲಿ ಎಂ ಎಸ್ಸಿ 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪಾಶ್ಚರೀಕರಣ,
ಒಣಗಿಸುವುದು, ಉಪ್ಪು ಸೇರಿಸುವುದು, ಕ್ಯಾನಿಂಗ್ ಮತ್ತು ಬ್ಲಾಂಚಿಂಗ ತಂತ್ರಗಳನ್ನು ಉಪಯೋಗಿಸಿ ಆಹಾರ, ಹಾಲು ಮತ್ತು ತರಕಾರಿಗಳನ್ನು ದೀರ್ಘ ಕಾಲದವರೆಗೆ ಸಂರಕ್ಷಣೆ ಮಾಡುವುದರ ಮಾದರಿಗಳನ್ನು ಪ್ರದರ್ಶಿಸಿ ವಿವರಣೆಯನ್ನು ನೀಡಿದರು.
ವರದಿ; ಅಪ್ಪಾರಾಯ ಬಡಿಗೇರ