ಮಹಾರಾಷ್ಟ್ರ:ಸಾಂಗಲಿ ಜಿಲ್ಲೆ ಜತ್ತ ತಾಲೂಕಿನ ನಿವೃತ್ತ ಅಧ್ಯಾಪಕರು ಹಾಗೂ ಹಿರಿಯ ಸಾಹಿತಿಗಳಾದ ಗುರುಪಾದ ಎಸ್ ಕುಂಭಾರ ಯವರು ಕೆ.ಎಮ್.ಹೈಸ್ಕೂಲದಲ್ಲಿ ಇಂಗ್ಲೀಷ್ ಶಿಕ್ಷಕರಾಗಿದ್ದು ಕೂಡಾ ಕನ್ನಡ ಸಾಹಿತ್ಯ ಸಂಸ್ಕೃತಿ ಮೇಲೆ ಅಪಾರ ಪ್ರೀತಿ ಕನ್ನಡಕ್ಕೆ ಪೆಟ್ಟು ಬಿದ್ದಾಗ ಮನಸು ಮುದುಡುತ್ತದೆ ನರಳುತ್ತಿರುವುದನ್ನು ನೋಡಿದಾಗ ಮನ ಮರುಗುತ್ತದೆ ಕನ್ನಡ ಬಲ್ಲವರು ಕನ್ನಡಕ್ಕಾಗಿ ಪ್ರೀತಿ ತೋರದಿರುವುದು ವಿಷಾದ ಮೂಡಿಸಿದೆ ಆದರೆ ಕನ್ನಡ ಮರೆಯಬಾರದು ಕನ್ನಡ ಸೇವೆ ಮಾಡೋಣ ಕನ್ನಡದ ಹಿರಿಯ ವ್ಯಕ್ತಿಗಳು ಮಾರ್ಗದರ್ಶನ ಮಾಡುತ್ತಾರೆ ಎಂದು ಅಭಿಮಾನದಿಂದ ಹೇಳುತ್ತಾರೆ ಗಡಿನಾಡಿನಲ್ಲಿ ಕನ್ನಡದ ಮೆರುಗು ಮತ್ತೆ ಬರಬೇಕು ತಮ್ಮ ಅಂತರಾಳದ ಮಾತುಗಳು,
ತಮ್ಮ 83 ರ ವಯಸ್ಸಿನಲ್ಲಿ ಕೂಡ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡುತ್ತಿರುವ ಗುರು ಪಾದ ಕುಂಬಾರಯವರು ನೆಲಮುಗಿಲ ಪಯಣ ಕವನ ಸಂಕಲನ ನೂರಾ ಒಂದು ಚಿಂತನಗಳು ಹೊಸಹಳ್ಳಿ ದಾಳೇಗೌಡರ ಕೃಷ್ಣಜ್ಜ ಕಥೆ ಕನ್ನಡದಿಂದ ಮರಾಠಿಗೆ ಅನು ವಾದ ಮಾಡಿದ್ದಾರೆ ಹತ್ತು ಹಲವು ಭಾಷೆ ಕಲಿಯಬೇಕು ತಾಯಿ ಭಾಷೆ ಕನ್ನಡವನ್ನು ಮರೆಯಬಾರದು ಕುಂಭಾರ ಯವರು ಸುಮಾರು 30-35 ವರುಷಗಳಿಂದ ಕನ್ನಡಕ್ಕೆ
ಪ್ರತಿಕೂಲವೆನಿಸುವ ಅನ್ಯ ಭಾಷಿಕರ ಪರಿಸರದಲ್ಲಿ ಶಿಕ್ಷಕ ವೃತ್ತಿ ಜೀವನ ಮಾಡುತ್ತಾ ಕನ್ನಡ ಉಸಿರನ್ನು ಜೀವಂತ ಇರಲು ಕಂಕಣ ಬದ್ಧರಾದ ಕನ್ನಡಿಗರ ಪ್ರತಿನಿಧಿಯಾಗಿ ಕುಂಬಾರರವರು ಕಂಡು ಬರುತ್ತಾರೆ ಅನೇಕ ಜನ ಕನ್ನಡ ಹೋರಾಟಗಾರರು ಕನ್ನಡ ನಾಡಿಗೆ ಸೇರಬೇಕು ಅಲ್ಲಿ ಜೀವ ಬಿಡಬೇಕು ಇವರು ಕೂಡಾ ಒಬ್ಬರು ಕನ್ನಡ ನಾಡಿನಲ್ಲಿ ಇನ್ನೂ ಸಾಹಿತ್ಯ ಕೃಷಿ ಮಾಡಬಹುದಿತ್ತು ಎನ್ನುವುದು ಕುಂಬಾರರ ನೋವಿನ ಮಾತು
ಮಹಾರಾಷ್ಟ್ರದಲ್ಲಿ ಇದ್ದರೂ ಸಹ ಜತ್ತ ತಾಲೂಕಿನ ಕನ್ನಡಿಗರ ಸ್ವಾಭಿಮಾನ ಹಾಗೂ ಸಮಸ್ಯೆಗಳಿಂದ ಬಳಲುತ್ತಿದೆ ಕನ್ನಡಿಗರಿಗೆ ಸಲ್ಲಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡದಿರುವುದು ಕುಂಬಾರರಿಗೆ ನಿರಾಶೆಯಾಗಿದೆ ಮಹಾರಾಷ್ಟ್ರ ಸರ್ಕಾರದ ಮಲತಾಯಿ ಧೋರಣೆ ಕರ್ನಾಟಕ ಸರ್ಕಾರದ ಕಾಳಜಿ ಇಲ್ಲದಿರುವುದು ಕನ್ನಡಿಗರ ಕೂಗು ಕಿವುಡ ಸರ್ಕಾರಗಳಿಗೆ ಕಾಣದಿರುವುದು ವಿಷಾದನೀಯ ಕುಂಬಾರರು ನೊಂದು ಹೇಳಿದ ಮಾತು ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕ ಇವರ ಕನ್ನಡ ಸೇವೆಗಾಗಿ ಪ್ರಶಸ್ತಿ ನೀಡಿ ಗೌರವಿಸಿದೆ,
ಸಾಧನೆಗಳು
ಪುಣೆ ಬಾಲಭಾರತಿಯಲ್ಲಿ ಕನ್ನಡ ಕೆಲಸ,
ಎರಡು ಮೂರು ನಾಟಕ
ಶಿವಮೊಗ್ಗ ಜಿಲ್ಲೆಯ ಸಾಹಿತಿ ಕಲಾವಿದ ಹಾಗೂ ಪತ್ರಕರ್ತರಾದ ದಾಳೇಗೌಡರ ಸಂಪರ್ಕ ದೊರೆತು ಮರಾಠಿಯಿಂದ ಭಾಷಾಂತರಗೊಂಡ ನಾಟಕ ಚಾರುಲತೆ ಹೆಸರಲ್ಲಿ ಬಿಡುಗಡೆಗೊಂಡಿದೆ ಪತ್ರ ಸಂಸ್ಕತಿ ಸಂಘಟನೆಯ ಪಿಸುಮಾತು ಪತ್ರಿಕೆಯಲ್ಲಿ ಪ್ರಕಟವಾಗಿ ಓದುಗರ ಮನ ಗೆದ್ದಿದೆ ಖ್ಯಾತ ಸಾಹಿತಿಗಳಾದ ಕುಂ.ವೀರಭದ್ರಪ್ಪರವರು ಕನ್ನಡ ಪ್ರೇಮವನ್ನು ಕೊಂಡಾಡಿದರು
ಕುಂಭಾರರ ಇನ್ನೂಂದು ಕವನ ಸಂಕಲನ ಬೇಗ ಪ್ರಕಟಗೊಳ್ಳಲಿದೆ ಶ್ರೀ ದಯಾನಂದ ಪಾಟೀಲರು ನನ್ನ ಗೆಳೆಯರು ಸಾಹಿತಿ ಪತ್ರಕರ್ತರು ಇವರ ಸದಾ ಸಹಕಾರ ಬೆಂಬಲ ಸ್ಫೂರ್ತಿ ಯಿಂದ ಸಾಧ್ಯವಾಗಿದೆ. ಹೃದಯ ತುಂಬಿ ಹೇಳುತ್ತಾರೆ.
ಕನ್ನಡಕ್ಕಾಗಿ ಹೆಣಗಾಡುವ ಲವಲವಿಕೆ ಕಮ್ಮಿ ಆಗಿಲ್ಲ ನಾನು ಗಡಿನಾಡು ಕನ್ನಡಿಗ,ಕನ್ನಡಿಗರ ಪ್ರೋತ್ಸಾಹಿಸುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ ಎಂದು ಅಭಿಮಾನದಿಂದ ಹೇಳುತ್ತಾರೆ ಇವರ ಕನ್ನಡ ಕಳಕಳಿ ಪ್ರತಿಯೊಬ್ಬ ಕನ್ನಡಿಗ ಇವರನ್ನು ನೋಡಿ ಕಲಿಯಬೇಕು ಆದರ್ಶ ಕನ್ನಡ ಬಳಗ ಅಧ್ಯಕ್ಷರಾದ ಮಲಿಕ ಜಾನ್ ಶೇಖ ಗಿರೀಶ ಹವಾಲ್ದಾರ್ ಕಲಾವಿದ ಗಾಯಕ ಕಾಶಿನಾಥ ಮಣ್ಣುರೆ ಸಾಹಿತಿ ನಿಂಗಯ್ಯಾ ಸ್ವಾಮಿ ರಾಜೇಂದ್ರ ಹಿರೇಮಠ ಕಸಾಪ ಅಧ್ಯಕ್ಷ ಸೋಮಶೇಖರ ಜಮ ಶೆಟ್ಟಿ ರಾಜೇಂದ್ರ ಹಿರೇಮಠ,ಪರಮೇಶ್ವರ ಮಾಳಿಯವರು ಕನ್ನಡ ಸಾರಸ್ವತ ಲೋಕಕ್ಕೆ ಸೇವೆ ನಿರಂತರವಾಗಿ ನಡೆಯಲಿ ಎಂದು ಅಭಿನಂದನೆ ಸಲ್ಲಿಸಿದ್ದಾರೆ,
‘ಹಿರಿಯ ಸಾಹಿತಿಗಳಿಗೆ ಪುಟ್ಟ ಕವನ ಅರ್ಪಣೆ
ಕನಸುಗಾರ
ಜತ್ತ ತಾಲೂಕಿನ
ಧರೀ ಬಡಚಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದವರು ಗುರುಪಾದ ಕುಂಬಾರರು ಬಡತನದಲ್ಲಿ ಮಲಗಿದವರು ಬಡತನದಲ್ಲಿ ಎದ್ದವರು ಗುರುಪಾದ ಕುಂಬಾರರು
ಶಿಕ್ಷಕರಾಗಿ ನೂರಾರು ವಿಧ್ಯಾರ್ಥಿಗಳಿಗೆ ವಿದ್ಯೆ ನೀಡಿದ
ಭಗೀರಥ ಇವರು
ಸಾಹಿತ್ಯ ರಚನೆ ಮಾಡಿ ಸಾಹಿತ್ಯದ ಹೆಜ್ಜೆ ಮೂಡಿಸಿದವರು
ಮುಗ್ಧ ಮನಸಿನ
ದೊಡ್ಡ ಹೃದಯದ
ಸಿರಿವಂತ ಇವರು
ಮಣ್ಣಿನ ಮೂರ್ತಿಯಂತೆ ರೂಪ ಕೊಟ್ಟವರು
ನೋವಿನಲ್ಲಿ ನಗು ಕಂಡವರು
ನೋವಿನಲ್ಲಿ ಜೀವನ ಮಾಡಿದವರು
ಸಾಧನೆಗೆ ಸಾಟಿ ಇಲ್ಲ ಇವರ ಸಾಧನೆ
ಹೀಗೆ ಸಾಗಲಿ ಸಾಹಿತ್ಯ ಯಾತ್ರೆ.
-ಲೇಖಕರು ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ