ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿಜಯ ವಿರಾಟ ಸೌಹಾರ್ದ ಸಹಕಾರಿ ನಿಯಮಿತ 6ನೇ ವಾರ್ಷಿಕ ಸಾಮಾನ್ಯ ಸಭೆ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸಂಗಮೇಶ್ವರ ಚಿತ್ರಮಂದಿರ ಹತ್ತಿರವಿರುವ ವಿಜಯ ವಿರಾಟ ಸೌಹಾರ್ದ ಸಹಕಾರಿ ಸಂಘದ ಕಛೇರಿಯ ಸಭಾಂಗಣದಲ್ಲಿ 6ನೇ ವಾರ್ಷಿಕ ಮಹಾಸಭೆ ನಡೆಯಿತು.
ವಿಜಯ ವಿರಾಟ ಸಹಕಾರಿ ಸಂಘ 8.31 ಲಕ್ಷ ನಿವ್ವಳ ಲಾಭ ಸದಸ್ಯರ ಪರಿಶ್ರಮದಿಂದ ವಿಜಯ ವಿರಾಟ ಸಹಕಾರಿಗೆ 6 ವರ್ಷಗಳ ಅವಧಿಯಲ್ಲಿ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭ ಪಡೆದಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷತೆಯನ್ನು ವಹಿಸಿದ್ದ ಟಿ.ಅಯ್ಯಪ್ಪ ಹೇಳಿದರು.
ಸಿಂಧನೂರು ಪಟ್ಟಣದ ವಿಜಯ ವಿರಾಟ ಸಹಕಾರಿ ಸಂಘದ ಕಛೇರಿಯ ಸಭಾಂಗಣದಲ್ಲಿ ಬುಧವಾರದಂದು ನಡೆದ 6ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಈ ಸಹಕಾರಿಯೂ ಒಟ್ಟು 1371 ಸದಸ್ಯರನ್ನು ಒಳಗೊಂಡಿದ್ದು ಹಾಗೂ 18.66 ಲಕ್ಷ ರೂ. ಬಂಡವಾಳ ಹೊಂದಿದ್ದು,3.17.ಕೋಟಿ ರೂ ಠೇವಣಿಗಳು,3.54 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು
ಹಾಗೂ ಸಾಲ ಮತ್ತು ಮುಂಗಡಗಳು 3.12 ಕೋಟಿ ರೂ ಸೇರಿದಂತೆ 8.31 ಲಕ್ಷ ರೂಪಾಯಿಗಳು ನಿವ್ವಳ ಲಾಭಗಳಿಸಿದ್ದು 98% ಸಾಲ ವಸೂಲತಿ ಮಾಡಿದೆ ಎಂದು ತಿಳಿಸಿದರು.ಸಹಕಾರಿಯ ಉಪಾಧ್ಯಕ್ಷರಾದ ಟಿ.ಅಯ್ಯಪ್ಪ ಇವರ ಅಧ್ಯಕ್ಷತೆಯನ್ನು ಮಾತನಾಡಿದರು.2017 ರಲ್ಲಿ ಪ್ರಾರಂಭಗೊಂಡ ನಮ್ಮ ಸಹಕಾರಿ ಸಂಘವು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ದುರ್ಬಲ ವರ್ಗಗಳಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ರೈತರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಆರ್ಥಿಕ ಪುನಶ್ಚೇತನ ಆದ್ಯತೆ ನೀಡಲಾಗಿದೆಯಂದರು,ವಿಜಯ ವಿರಾಟ ಸೌಹಾರ್ದ ಸಹಕಾರಿ ಸಂಘ ನಿ.,ಆಡಳಿತ ಸದಸ್ಯರ ಆಶಯದಂತೆ ಸಿಂಧನೂರು ಮತ್ತು ಕಾರಟಗಿ ನಗರದಲ್ಲಿ ಎರಡು ಶಾಖೆಗಳನ್ನಾಗಿ ವಿಸ್ತಾರಿಸಲಾಗಿದೆ.
ಸಹಕಾರಿಯ CEO ಮನೋಜ ಕುಮಾರ ಹಾಗೂ ವೀರೇಂದ್ರ ಬಡಿಗೇರ ವಾರ್ಷಿಕ ವರದಿಯನ್ನು ಮಂಡಿಸಿದರು.
ನಿರ್ದೇಶಕರಾದ ಬಿ.ಅಂಬಣ್ಣ ಗೊರೆಬಾಳ,ವೀರನಗೌಡ ನೆಲಗಲದಿನ್ನಿ,ಶೇಖರಪ್ಪ ತಾಳಿಕೋಟೆ, ಮೌನೇಶ ಲಿಂಗಸೂಗೂರು,ವೀರೇಶ ಗೊರೆಬಾಳ,ವಿನಯಕುಮಾರ ಬಡಿಗೇರ,ಪರಮೇಶಪ್ಪ ವಿ.ಬಿ,ಮೌನೇಶ ತಿಡಿಗೋಳ,ಬಸವರಾಜ ಅಲಬನೂರ,ಕಾನೂನು ಸಲಹೆಗಾರರಾದ ರವಿಕುಮಾರ ವಿ.ಹಂಚಿನಾಳ, ವೀರೇಶ ಕೋಟೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಇತರರು ಇದ್ದರು.ನೂತನ ನಿರ್ದೇಶಕರನ್ನಾಗಿ ವೀರೇಶ ಕುಮಾರ,ವಿರುಪಣ್ಣ ಹೊಸೂರ,ಶ್ರೀಮತಿ ಸೌಮ್ಯ,ದೇವರಾಜ ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ