ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ದಾರಿದೀಪವಾದ ಕರುಣಾಮಯಿ ಪ್ರೊಫೆಸರ್ ಶ್ರೀ ಆನಂದ್ ಲಗಳಿ ಅವರು ಸದಾಕಾಲ ಧರ್ಮ ಹಾಗೂ ಸಾಮಾಜಿಕ ಕಾರ್ಯಗಳ ಮುಖಾಂತರ ಒಂದಿಲ್ಲ ಒಂದು ರೀತಿಯಲ್ಲಿ ತಮ್ಮ ಸೇವಾ ಕಾರ್ಯ ಮಾಡುವುದರ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಇವತ್ತು ದಾರಿದೀಪವಾಗಿದ್ದಾರೆ.
ಪ್ರೋಫೆಸರ ಶ್ರೀ ಆನಂದ್ ಲಗಳಿ ಅವರು ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ದೃಷ್ಟಿಯಿಂದ ಅವರಿಗೆ ಹಾಗೂ ಸಂಸ್ಥೆಗೆ ಉಪಯೋಗ ಆಗಲೆಂದು ಶಿಕ್ಷಣ ಸಂಸ್ಥೆಗೆ 200 ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಸಂಸ್ಥೆಗೆ ಕೊಟ್ಟಿರುತ್ತಾರೆ,ಅವರ ಒಂದು ಸೇವೆ ನಿಜವಾಗಿಯೂ ಮೆಚ್ಚುವಂಥದ್ದು.
ಕೇವಲ ಒಂದು ವಾಟ್ಸಾಪ್ ಸ್ಟೇಟಸ್ ದಿಂದ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎನ್ನುವುದಕ್ಕೆ ಈ ಒಂದು ಸೇವೆಯೇ ಸಾಕ್ಷೀ ಇವತ್ತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತನಾಡಿ ವೈಯಕ್ತಿಕವಾಗಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ಪರವಾಗಿ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ:ವಿಶ್ವನಾಥ ಹರೋಲಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.