ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಹೋಬಳಿಯ ಗೆಜ್ಜಲನಾಥ ಗ್ರಾಮದ ಡಾಕ್ಟರ್ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಂಬವ ಯುವಸೇನೆಯ ರಾಜ್ಯ ಅಧ್ಯಕ್ಷ ರಮೇಶ್ ಚಕ್ರವರ್ತಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಚಕ್ರವರ್ತಿ ಎಲ್ಲಿ ಮಾದಿಗ ಸಮಾಜದ ಜನಾಂಗದವರಿಗೆ ಹಾಗೂ ಮಾದಿಗ ಜನಾಂಗದ ಹೆಣ್ಣು ಮಕ್ಕಳಿಗೆ ತೊಂದರೆ ಆದರೆ ದೌರ್ಜನ್ಯಾದರೆ ಅಲ್ಲಿ ನಾನು ಇರುತ್ತೇನೆ ಯಾರ ಭಯದ ಅವಶ್ಯಕತೆಯು ಇಲ್ಲ ಆದಿ ಜಾಂಬವ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ದೊರೆಯುವ ಸವಲತ್ತುಗಳನ್ನು ಸಮುದಾಯದವರಿಗೆ ದೊರಕಿಸಿ ಕೊಡುವುದಕ್ಕೆ ನನ್ನ ಶಕ್ತಿ ಮೀರಿ ಕೆಲಸವನ್ನು ಮಾಡುತ್ತೇನೆ ಎಂದರು ಸಮುದಾಯದವರು ಒಗ್ಗಟ್ಟಾಗಿ ಇದ್ದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಸಮುದಾಯದ ತಂದೆ ತಾಯಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಶಿಕ್ಷಣದ ಮೂಲಕ ಆರ್ಥಿಕವಾಗಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಬೇಕಾದರೆ ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮದ ಮಾದಿಗ ಸಮುದಾಯದ ಮುಖಂಡರುಗಳಿಗೆ ಸನ್ಮಾನಿಸಲಾಯಿತು ಬೆಂಗಳೂರಿನ ಐಸಿಸಿಎಲ್ ಬ್ಯಾಂಕಿನ ಅಂಜನಪ್ಪ,ಸುನಿಲ್,ಜಾಂಬವ ಸಮುದಾಯದ ಯುವ ಸೇನೆಯ ಮುಖಂಡರಾದ ಗೋವಿಂದ ಮುರುಗೇಶ್,ಸಕ್ರದೇವ,ಗಣೇಶ್ ರಾಜಪ್ಪ ಚಿಕ್ಕಮರಿ ಬಾಲಯ್ಯ ಮಣಿ,ಹನುಮಂತ, ಮುರುಗೇಶ್,ನಟೇಶ್,ಶಿವಣ್ಣ,ಸಂಪತ್ತು, ದೊಡ್ಡಾಲತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರೇಮ,ಗೌರಿಶಂಕರ್,ರಾಮಸ್ವಾಮಿ,ಜೈ ಕುಮಾರ್ ಹಾಜರಿದ್ದರು.
ವರದಿ ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.