ಕಲಬುರಗಿ:ಟಿ ಎನ್ ನಾರಾಯಣ ಗೌಡ್ರು ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಕಲ್ಬುರ್ಗಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮುಖಾಂತರ ತಮಿಳುನಾಡಿಗೆ ನೀರು ಹರಿಸದಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷ ಪುನೀತರಾಜ ಸಿ ಕವಡೆ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯ ರಾಜ್ಯ ಪದಾಧಿಕಾರಿಗಳಾದ ಕಲ್ಯಾಣ್ ರಾವ್ ಪಾಟೀಲ್,ಮಹೇಶ್ ಕಾಶಿ,ವಿಠ್ಠಲ್ ಪೂಜಾರಿ,ಶಿವಲಿಂಗ ಗುತ್ತೇದಾರ್,ಈರಣ್ಣ ಆಳಂದ್,ಚಂದಕ್ ಚೌಹಾಣ್,ಸಚಿನ್ ಚಿಂಚೋಳಿ, ಯಲ್ಲಪ್ಪ ಬಂಕಲಗಿ,ದೇವೇಂದ್ರಪ್ಪ ಪಾಟೀಲ್, ಲಕ್ಷ್ಮಿಕಾಂತ್,ಧರ್ಮಸಿಂಗ್ ತಿವಾರಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಮನವಿ ಪತ್ರದ ಮೂಲಕ “ತಮಿಳುನಾಡಿಗೆ ಮತ್ತೆ 5000 ಕ್ಯೂಸೆಸ್ಕ್ ನೀರು ಬಿಡಬೇಕೆಂಬ ಆದೇಶವನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ರಾಜ್ಯದ ಎಲ್ಲಾ 28 ಜನ ಸಂಸದರು ಕಾಲ ಹರಣ ಮಾಡದೆ ಕೂಡಲೇ ಮಧ್ಯಸ್ತಿಕೆ ವಹಿಸಿ ನಮ್ಮ ರಾಜ್ಯದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿಕೊಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.