ಪ್ರತಿಯೊಂದು ವಸ್ತುವಿಗೂ ಅದರದೇ ಆದ ಮೌಲ್ಯವಿರುತ್ತದೆ ಕೆಲವೊಂದು ಬಾರಿ ಅದು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಆದರೆ ಮಾರುಕಟ್ಟೆಯಲ್ಲಿ ಹೇಗೆ ಚಲಾವಣೆಯಲ್ಲಿರುವ ಹಣಕ್ಕೆ ಮಹತ್ವವಿರುತ್ತದೆಯೋ ಹಾಗೆಯೇ ಅತಿ
ವಿಶಿಷ್ಟವಾದ ಪ್ರತಿಭೆ ಅಥವಾ ಕೌಶಲ್ಯವಿದ್ದರೆ ಮಾತ್ರ ನಾವು ಚಲಾವಣೆಯಲ್ಲಿರುವ ಹಣದ೦ತೆ ಪರಿಗಣಿಸಲ್ಪಡುತ್ತೇವೆ ಆದ್ದರಿಂದ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದು ಅತಿ ಅವಶ್ಯಕ ಇಂಗ್ಲಿಷಿನಲ್ಲಿ ”Life is a racing track and it is not a parking stand””ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ನಾವು ಇತರ ರಿಗಿಂತ ಮುಂದಿರಬೇಕಾದರೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯ
ಕೆಲವರ ಮುಖ,ಪ್ರಭಾವ,ಅರ್ಹತೆಗಳು ಅವರ ಮೌಲ್ಯವನ್ನು ಹೆಚ್ಚಿಸುತ್ತವೆ ನಮ್ಮಲ್ಲಿ ದೈಹಿಕ ಸೌಂದರ್ಯಗಿಂತ ಅಪರೂಪವಾದ ಪ್ರತಿಭೆ ಇದ್ದರೆ ನಾವು ಪರಿಗಣಿಸಿಸಲ್ಪಡುತ್ತೇವೆ ಸತತ ಪ್ರಯತ್ನ, ವಿಚಾರಶೀಲತೆ,ಇಚ್ಚಾ ಶಕ್ತಿಯಿಂದ,ನಾವು ಇತರಿಗಿಂತ ಭಿನ್ನವಾಗಿ ಪರಿಗಣಿಸಲ್ಪಡಬಹುದು.
ಈ ದಿಕ್ಕಿನಲ್ಲಿ ಯೋಚಿಸೋಣವೆ?
-ಗಾಯತ್ರಿ ಸುಂಕದ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.