ಚಿತ್ರದುರ್ಗ:ದೇವಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಂಕಟಾಪುರದ ರಸ್ತೆ ಹಂಚಿನ ಹಳೆಕೇರಿ ರಾಂಪುರ ಮಾರ್ಗವಾಗಿ ಹೋಗುವ ರಸ್ತೆ ಬದಿಯಲ್ಲಿ ಕಸದ ರಾಶಿ ಬಿದ್ದುಕೊಂಡಿದ್ದು ಕಳೆದ ಮೂರ್ನಾಲ್ಕು ತಿಂಗಳಿಂದ ಈ ಸಮಸ್ಯೆ ಇದೆ ಗ್ರಾಮ ಪಂಚಾಯತಿ ಈ ಸಮಸ್ಯೆಯನ್ನು ಯಾವುದೇ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದರೂ ಸಹ ಸ್ಪಂದನೆ ಇಲ್ಲ,ಕಸ ವಿಲೇವಾರಿ ಮಾಡಲು ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಇಂದು ನಾಗರಿಕರು ತೊಂದರೆಗೆ ಸಿಲುಕಿದ್ದು ಈ ಭಾಗದಲ್ಲಿ ಓಡಾಡುವುದೇ ಕಷ್ಟಕರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ ಅವಶ್ಯಕತೆ ಮೇರೆಗೆ ದೇವಸಮುದ್ರ ಗ್ರಾಮ ಪಂಚಾಯತಿ ವತಿಯಿಂದ ಕಸದ ತೊಟ್ಟಿಗಳನ್ನು ಅಗತ್ಯವಿದ್ದ ಮೂರು ಕಡೆಗಳಲ್ಲಿ ನಿರ್ಮಾಣ ಮಾಡಿ ಕಸವನ್ನು ಅದರಲ್ಲಿಯೇ ಹಾಕುವ ವ್ಯವಸ್ಥೆ ಮಾಡಿದ್ದರು ಸರಿಯಾದ ರೀತಿಯಲ್ಲಿ ಅದರಲ್ಲಿನ ಕಸವನ್ನು ವಿಲೇವಾರಿ ಮಾಡುವುದರಲ್ಲಿ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ ಈ ವಿಚಾರವಾಗಿ ಪಂಚಾಯಿತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಕೂಡಾ ಅಲ್ಲಿನ ಪಿಡಿಓ ಬಾಂಡ್ರವಪ್ಪನವರು ಹಾಗೂ ಬಿಲ್ ಕಲೆಕ್ಟರ್ ಭೀಮಪ್ಪ ಎಂ ಇವರಿಗೆ ಮನವಿ ಸಲ್ಲಿಸಿರುತ್ತಾರೆ ಆದರೂ ಕೂಡ ಅದರ ಬಗ್ಗೆ ಕಿವಿಗೊಡದೆ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ,ಇಲ್ಲಿನ ಗ್ರಾಮ ಪಂಚಾಯತಿ ವ್ಯವಸ್ಥೆಯು ಕೂಡಾ ಜಾತಿ ವ್ಯವಸ್ಥೆಯ ಮೇಲೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಏಕೆಂದರೆ ಇಲ್ಲಿನ ಅಧಿಕಾರಿಗಳು ಮೇಲ್ಜಾತಿಯವರು ಹೇಳಿದ ಮಾತನ್ನು ಚಾಚು ತಪ್ಪದೇ ಮಾಡುತ್ತಿದ್ದಾರೆ ಎಂದು ಕೂಡ ಆಕ್ರೋಶ ವ್ಯಕ್ತವಾಗಿದೆ ಈ ಗ್ರಾಮ ಪಂಚಾಯಿತಿಯ ವ್ಯವಸ್ಥೆಯು ಕೂಡಾ ಹೇಳಿದ ಮಾತುಗಳಿಗೆ ಕಿವಿಗೊಡದೆ ಅಧಿಕಾರಿಗಳು ಕೂಡಾ ದರ್ಪ ತೋರಿಸುತ್ತಿದ್ದಾರೆ ಎಂದು ಕೂಡಾ ಆಕ್ರೋಶ ವ್ಯಕ್ತವಾಗಿದೆ ಆದುದರಿಂದ ಮುಂಬರುವ ದಿನಗಳಲ್ಲಿ ಕೂಡಾ ಇದೇ ರೀತಿ ನಡೆಯಬಾರದೆಂದು ಸಾರ್ವಜನಿಕರು ತಮ್ಮ ಮೇಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.
ವರದಿ:ಸಿದ್ದೇಶ್ ಜಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.