ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಶ್ರೀ ಗಜಾನನ ಶಿಕ್ಷಕರ ಪತ್ತಿನ ಸಹಕಾರ ಸಂಘ ಅನವಟ್ಟಿ ಸೊರಬ ತಾಲೂಕು ಈ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ದಿನಾಂಕ 24.09.2023ನೇ ಭಾನುವಾರ ಬೆಳಗ್ಗೆ ಗುರುಭವನ ಆನವಟ್ಟಿಯಲ್ಲಿ ನಡೆಯದಿದೆ.ಸುಮಾರು 82 ವರ್ಷಗಳ ಇತಿಹಾಸವಿರುವ ಈ ಪತ್ತಿನ ಸಹಕಾರ ಸಂಘವು ಶಿಕ್ಷಕರ ಅಗತ್ಯಕ್ಕೆ ಅನುಗುಣವಾಗಿ ಸುಮಾರು 6 ಲಕ್ಷ ರೂಗಳ ವೇತನ ಆಧಾರಿತ ಸಾಲವನ್ನು ನೀಡುತ್ತಿದ್ದು ಹಲವಾರು ಶಿಕ್ಷಕರಿಗೆ ಪ್ರಯೋಜನಕಾರಿಯಾಗಿದೆ.
ಆನವಟ್ಟಿ ಜಡೆ ಕುಪ್ಪಗಡ್ಡೆ ಭಾಗದ ಹಲವಾರು ಶಿಕ್ಷಕರು ಈ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಶಿಕ್ಷಕರಿಗೆ ಈ ಪ್ರಮಾಣದಷ್ಟು ಸಾಲವನ್ನು ಸೊರಬ ತಾಲೂಕಿನಲ್ಲಿ ನೀಡುವ ಏಕೈಕ ಸಂಸ್ಥೆಯಾಗಿದೆ. ಹಿರಿಯರ ಸಹಕಾರದಿಂದ ಪ್ರತಿ ವರ್ಷವೂ ಲಾಭದ ಪ್ರಮಾಣ ಹೆಚ್ಚುತ್ತಾ ಷೇರುದಾರರಿಗೆ ಲಾಭದ ಹಂಚಿಕೆಯನ್ನು ಮಾಡಲಾಗುತ್ತಿದೆ.
ಈ ವರ್ಷದಿಂದ 7 ಲಕ್ಷ ರೂಪಾಯಿಗಳ ಸಾಲವನ್ನು ನೀಡಲು ಆಡಳಿತ ಮಂಡಳಿಯವರು ತೀರ್ಮಾನಿಸಿರುತ್ತಾರೆ.
ಈ ಸಂಸ್ಥೆ ಈ ಉನ್ನತ ರೀತಿಯಲ್ಲಿ ಬೆಳೆಯಲು ಸಹಕರಿಸಿದ ಎಲ್ಲಾ ಷೇರುದಾರ ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರಿಗೂ ಆಡಳಿತ ಮಂಡಳಿಯವರು ಆಭಾರಿಗಳಾಗಿರುತ್ತಾರೆ.ಎಂದು ಸಂಘದ ಅಧ್ಯಕ್ಷರು ತಮ್ಮ ಭಾಷಣದಲ್ಲಿ ತಿಳಿಸುತ್ತಾರೆ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಸಂಘದ ಸರ್ವ ಸದಸ್ಯರು ಶಿಕ್ಷಕ ಮಿತ್ರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸುದ್ದಿ-ಶರತ್ ಗೌಡ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.