ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಭಾರತ-ಬಹ್ರೈನ್ ಸಂಬಧ ಒಂದು ಅವಲೋಕನ

ಇತ್ತೀಚೆಗೆ ಬಹ್ರೈನ್ ನಲ್ಲಿ ಕರ್ನಾಟಕದ ಮಂಗಳೂರು ಮೂಲದ ವೈದ್ಯರೊಬ್ಬರನ್ನು ಇಸ್ರೇಲಿನ ಭಯೋತ್ಪಾದಕ ಧಾಳಿಯನ್ನು ಖಂಡಿಸಿ ಪೋಸ್ಟ್ ಹಾಕಿದ್ದಕ್ಕೆ ಅಲ್ಲಿನ ಸರ್ಕಾರ ಸೇವೆಯಿಂದ ವಜಾಗೊಳಿಸಿ ಬಂಧಿಸಿದೆ.ಈ ವಿಚಾರದಲ್ಲಿ ನಮ್ಮ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರ ದೊಂದಿಗೆ ಮಾತನಾಡಬಹುದೇ?ನಮ್ಮ ದೇಶ ಮತ್ತು ಆ ದೇಶ ನಡುವಿನ ಸಂಬಂಧ ಎಂತದ್ದು,ಮೊದಲಿನಿಂದಲೂ ಆ ದೇಶ ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದೆಯಾ?ಈ ಬಗ್ಗೆ ಸ್ವಲ್ಪ ಚರ್ಚೆ ಮಾಡೋಣವೇ?ನಮ್ಮ ಮತ್ತು ಆ ದೇಶಗಳ ನಡುವೆ ರಾಜಕೀಯ,ಸಾಮಾಜಿಕ,ಆರ್ಥಿಕ,ಮಿಲಿಟರಿ ಸಂಬಂಧಗಳು ಅಸ್ತಿತ್ವದಲ್ಲಿ ಇದೆ.ಒಟ್ಟಿನಲ್ಲಿ ಎರಡು ದೇಶಗಳು ಬಹಳ ಆತ್ಮೀಯ ಮಿತ್ರರು ಎಂದೇ ಹೇಳಬಹುದು.ನಮ್ಮ ಅಧಿಕಾರಿಗಳ ಪ್ರಕಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸ್ಥಾನಕ್ಕೆ ಭಾರತದ ಉಮೇದುವಾರಿಕೆಗೆ ಆ ರಾಷ್ಟ್ರ ಕೂಡಾ ಬೆಂಬಲ ಕೊಟ್ಟಿದೆ ಮತ್ತು ಬಹ್ರೇನ್ ಅಧಿಕಾರಿಗಳು ಅಂತರ್ ರಾಷ್ಟ್ರೀಯ ವ್ಯವಹಾರಗಳಲ್ಲಿ ಭಾರತ ಸಕ್ರಿಯ ಪಾತ್ರ ವಹಿಸುವಂತೆ ಒತ್ತಾಯಿಸಿದ್ದಾರೆ ಉದಾಹರಣೆಗೆ ಇರಾನ್ ಪರಮಾಣು ಕಾರ್ಯಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಹ್ರೇನ್ ಕ್ರೌನ್ ಪ್ರಿನ್ಸ್ ಬಿಕ್ಕಟ್ಟು ಪರಿಹಾರಕ್ಕೆ ಭಾರತ ಮಧ್ಯಸ್ಥಿಕೆ ವಹಿಸಲು ವಿನಂತಿಸಿದ್ದರು.ಭಾರತದ ರಾಯಭಾರ ಕಛೇರಿ ಮನಾಮಾದಲ್ಲಿದೆ.ಅಲ್ಲಿಗೆ ಭಾರತದ ರಾಯಭಾರಿ ಪಿಯೂಷ್ ಶ್ರೀವಾಸ್ತವ್,ಬಹ್ರೇನ್ ರಾಯಭಾರಿ ಕಛೇರಿ ನವದೆಹಲಿ ಅಲ್ಲಿ ಇದೆ ರಾಯಭಾರಿ ಅಬ್ದುರ್ರಹ್ಮಾನ್ ಮೊಹಮ್ಮದ್ ಅಲ್ ಕ್ವೌದ್.
ಭಾರತ ಮತ್ತು ಬಹ್ರೇನ್ ನಡುವಿನ ಸಂಬಂಧ ತಲೆಮಾರುಗಳ ಹಿಂದಕ್ಕೆ ಹೋಗುತ್ತದೆ ಬಹ್ರೇನ್ ಅನೇಕ ಪ್ರಮುಖ ವ್ಯಕ್ತಿಗಳು ಭಾರತದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ.ಕವಿ ಇಬ್ರಾಹಿಂ ಅಲ್-ಅಕ್ರೀದ್ ಅವರು ಬಾಂಬೆಯಲ್ಲಿ ಬೆಳೆದವರು.17ನೇ ಶತಮಾನದಲ್ಲಿ ಬಹ್ರೇನ್ ದೇವತಾ ಶಾಸ್ತ್ರಜ್ಞರು ಆದ ಶೇಖ್ ಸಾಲಿಹ್ ಅಲ್-ಕರ್ಜಾಕಾನಿ ಮತ್ತು ಶೇಖ್ ಜಾಫರ್ ಬಿನ್ ಕಮಾಲಾಲಾ-ದಿನ್ ನಮ್ಮ ದೇಶದ ಗೋಲ್ಕೊಂಡ ಸಾಮ್ರಾಜ್ಯದಲ್ಲಿ ಪ್ರಭಾವ ಹೊಂದಿದ್ದರು.ಉಪಖಂಡದಲ್ಲಿ ಶಿಯಾ ಚಿಂತನೆಯ ಬೆಳವಣಿಗೆಗೆ ಕಾರಣರಾಗಿದ್ದರು.
2007ರಲ್ಲಿ ಅಲ್ಲಿನ ಸಂಸದೀಯ ಸ್ಪೀಕರ್ ಖಲೀಫಾ ಅಲ್ ದಹ್ರಾನಿ ಅವರು ನಮ್ಮ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮತ್ತು ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಭೇಟಿ ಮಾಡಲು ಸಂಸದರು ಮತ್ತು ವ್ಯಾಪಾರ ಮುಖಂಡರ ನಿಯೋಗ ಮುನ್ನೆಡೆಸಿದರು ಇದರ ಪರಿಣಾಮವಾಗಿ ಆ ದೇಶಕ್ಕೆ ಯು.ಎಸ್.ಅಥವಾ ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಭಾರತದಿಂದ ತರಬೇತಿ ಮತ್ತು ಸಲಹೆ ಪಡೆಯುವುದು ಸುಲಭ ಆಗಿದೆ.
ಡಿಸೆಂಬರ್ 2007ರಲ್ಲಿ ಎರಡು ದೇಶಗಳ ನಡುವಿನ ಬಾಂಧವ್ಯ ಉತ್ತೇಜಿಸಲು ಬಹ್ರೇನ್ ಇಂಡಿಯಾ ಸೊಸೈಟಿ ಅನ್ನು ಮನಾಮಾದಲ್ಲಿ ಆರಂಭ ಮಾಡಲಾಯಿತು.ಅಲ್ಲಿನ ಮಾಜಿ ಕಾರ್ಮಿಕ ಸಚಿವ ಅಬ್ದುಲ್ನಬಿ ಅಲ್-ಶೋಲಾ ನಾಯಕತ್ವದಲ್ಲಿ ಆದ ಈ ಸೊಸೈಟಿ ಮೂಲ ಉದ್ದೇಶ ಎರಡು ದೇಶಗಳ ನಡುವಿನ ಸಂಬಂಧ ವೃದ್ಧಿ,ಎರಡು ದೇಶಗಳ ನಾಗರಿಕ ಸಮಾಜಗಳ ಅಭಿವೃದ್ಧಿ ಲಾಭ,
ಬಹ್ರೇನ್ ಆಡಳಿತಗಾರ ಶೇಖ್ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರು ಭಾರತಕ್ಕೆ 2014ರ ಫೆಬ್ರವರಿ ತಿಂಗಳಲ್ಲಿ ಭೇಟಿ ನೀಡಿದರು.ಈ ಸಮಯದಲ್ಲಿ ಹಲವು MOUಗಳಿಗೆ ಸಹಿ ಹಾಕಿದವು.ನಮ್ಮ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು 24,25ಆಗಸ್ಟ್ 2019ರಂದು ಬಹ್ರೇನ್ ಗೆ ಭೇಟಿ ನೀಡಿದರು.ಇದು ನಮ್ಮ ದೇಶದ ಪ್ರಧಾನಿ ಅಲ್ಲಿಗೆ ಭೇಟಿ ನೀಡಿರುವುದು ಇತಿಹಾಸದಲ್ಲಿ ಪ್ರಥಮ ಅಲ್ಲಿ ನಮಗೂ ಅವರಿಗೂ ಬಾಹ್ಯಾಕಾಶ, ಸಂಸ್ಕೃತಿ,ಅಂತರ್ ರಾಷ್ಟ್ರೀಯ ಸೌರ ಒಕ್ಕೂಟ ಮತ್ತು ರೂಪೇ ಕಾರ್ಡ್ ನಲ್ಲಿ 3 ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು.ಅಲ್ಲಿನ ರಾಜ ಹಮದ್ ಬಿನ್ ಅಲ್ ಖಲೀಫಾ ಅವರು ದ್ವೀಪಕ್ಷೀಯ ಸಂಬಂಧ ಬಲಪಡಿಸುವ ಮೋದಿಯವರ ಪ್ರಯತ್ನ ಗುರುತಿಸಿ ಆ ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕಿಂಗ್ ಹಮೀದ್ ಆರ್ಡರ್ ಆಫ್ ದಿ ರೆನೈಸೆನ್ಸ್ ನಾ ಸದಸ್ಯ 1ನೇ ತರಗತಿಯನ್ನು ಮೋದಿ ಅವರಿಗೆ ನೀಡಿದರು.ಮೋದಿಯವರು 25 ಆಗಸ್ಟ್ 2019 ರಂದು ಮನಾಮದಲ್ಲಿರುವ ಶ್ರೀನಾಥ್ ಜಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಅಲ್ಲಿ ಭಾರತದ ನೆರವಿನಿಂದ ದೇವಸ್ಥಾನದ ಸಂಕೀರ್ಣ ಪುನರಾಭಿವೃದ್ಧಿ ಮಾಡಲು 4.2ಮಿಲಿಯನ್ ಯು.ಎಸ್.ಡಾಲರ್ ಯೋಜನೆ ಉದ್ಘಾಟನೆ ಮಾಡಿದರು.ಅದೇ ದಿನ ಬಹ್ರೇನ್ ತನ್ನ ಜೈಲಿನಲ್ಲಿ ಇರುವ 250ಭಾರತೀಯ ನಾಗರಿಕರಿಗೆ ಅಧಿಕೃತವಾಗಿ ಕ್ಷಮಾದಾನ ಘೋಷಣೆ ಮಾಡಿತು.ಇಷ್ಟೆಲ್ಲಾ ಉತ್ತಮ ಸಂಬಂಧ ಹೊಂದಿರುವುದರಿಂದ ಆ ದೇಶದೊಂದಿಗೆ ಈ ಬಗ್ಗೆ ಮಾತುಕತೆ ಮಾಡಿ ನಮ್ಮ ಸರ್ಕಾರ ಸುನಿಲ್ ರಾವ್ ಎಂಬ ವೈದ್ಯರನ್ನು ಬಿಡಿಸಿಕೊಂಡು ಬರಬಹುದು ಅಲ್ಲವೇ?
-ರಂಜಿತ,ಉಡುಪಿ ಜಿಲ್ಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ