ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರ್ಕಾರಕ್ಕೆ ಅತಿಥಿ ಉಪನ್ಯಾಸಕರ ಪ್ರಶ್ನೆಗಳ ಸರಮಾಲೆಉತ್ತರ ಸಿಗುವುದು ಯಾವಾಗ?

ಶಿಕ್ಷಕರು ವಿದ್ಯಾರ್ಥಿ ಬಾಳಿನ ರಕ್ಷಕರು ರಾಜ್ಯದಲ್ಲಿ430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಉನ್ನತ ಶಿಕ್ಷಣ ಇಲಾಖೆ ಕಂಡುಕೊಂಡ ಸುಲಭವಾದ ಮಾರ್ಗ ಈ ‘ಅತಿಥಿ ಉಪನ್ಯಾಸಕ’ಈ ವೃತ್ತಿಯ ಇತಿಹಾಸವನ್ನು ಸ್ವಲ್ಪ ಕೆದಕಿ ನೋಡಿದಾಗ ಸು 1970-72ರ ಅಸು ಪಾಸಿನಲ್ಲಿ ಇಲಾಖೆಯು ಪದವಿ ಕಾಲೇಜುಗಳಲ್ಲಿ ʼಲೋಕಲ್‌ ಕ್ಯಾಂಡಿಡೆಟ್‌ʼ ಎನ್ನುವ ಹುದ್ದೆಯನ್ನು ತಾತ್ಕಲಿಕವಾಗಿ ಸೃಜಿಸಿ ರಾಜ್ಯದಾದ್ಯಂತ ಪದವಿ ಕಾಲೇಜುಗಳಲ್ಲಿ ನೇಮಕ ಮಾಡಿತ್ತು ಸುಮಾರು ವರ್ಷ ದುಡಿದ ಲೋಕಲ್‌ ಕ್ಯಾಂಡಿಡೆಟ್‌ ಉಪನ್ಯಾಸಕರುಗಳ ಪ್ರತಿಭಟನೆ ಹೋರಾಟದ ಪ್ರತಿಫಲದಿಂದ ಅಂದಿನ ಸರಕಾರ ಅವರನ್ನು ಖಾಯಂಗೊಳಿಸಿತ್ತು ನಂತರ ಇಲಾಖೆಯು ‘ಕಾಂಟ್ರಾಕ್ಟ ಬೇಸಿಸ್‌ʼ ಮೇಲೆ ರಾಜ್ಯದಲ್ಲಿ ಉಪನ್ಯಾಸಕರನ್ನು ತಾತ್ಕಾಲಿಕ ವ್ಯವಸ್ಥೆಯಡಿಯಲ್ಲಿ ಪದವಿ ಕಾಲೇಜುಗಳಲ್ಲಿ ನೇಮಕ ಮಾಡಲಾಯಿತು ಮುಂದೆ ಇವರ ಹೋರಾಟ,ಪ್ರತಿಭಟನೆ ಮಾಡಿ ಅಂದಿನ ಸರಕಾರಕ್ಕೆ ಮನವೊಲಿಸಿದ ಹೋರಾಟದ ಪ್ರತಿಫಲವಾಗಿ ಅಂದಿನ ಸರಕಾರ ಅವರನ್ನು ಸಹ ಖಾಯಂಗೊಳಿಸಿತು ತದನಂತರ ‘ಅರೆಕಾಲಿಕʼ ಉಪನ್ಯಾಸಕರು ಎಂದು ಹೆಸರು ಬದಲಿಸಿ ಪುನಃ ರಾಜ್ಯದ ಪದವಿ ಕಾಲೇಜುಗಳಲ್ಲಿ ನೇಮಿಸಿ ಹತ್ತು ಹದಿನೈದು ವರ್ಷಗಳ ಕಾಲ ಪ್ರತಿಭಟನೆ ಹೋರಾಟ ಮಾಡಿ ಸರಕಾರದ ಎಷ್ಟೇ ಮನವೊಲಿಸುವ ಪ್ರಯತ್ನ ಮಾಡಿದರೂ ಸರಕಾರ ಕಿವಿಗೊಡಲಿಲ್ಲ ಹೈಕೋರ್ಟ್ ಮೊರೆ ಹೋದರು ಹೈಕೋರ್ಟ್ ಇವರನ್ನು ಒನ್‌ ಟೈಂ ಮೇಜರ್‌ ಎಂದು ಪರಿಗಣಿಸಿ ಮಾನವೀಯ ಆಧಾರದ ಮೂಲಕ ಖಾಯಂ ಮಾಡಲು ಆದೇಶವನ್ನು ಸರಕಾರಕ್ಕೆ ಆದೇಶ ಮಾಡಿತು. ಸರಕಾರ ಅವರನ್ನು ೨೦೦೩ ರಲ್ಲಿ ಖಾಯಂ ಮಾಡಿತ್ತು.
ಇವುಗಳೆಲ್ಲದರ ನಂತರ ಬಂದದ್ದೆ ʼಅತಿಥಿ ಉಪನ್ಯಾಸಕರುʼ 2004 ರಿಂದ ಈಚೆ ಸುಮಾರು 19-20 ವರ್ಷಗಳ ಕಾಲ ಆಧುನಿಕ ಜೀತದಾಳುಗಳಂತೆ ಸರಕಾರಗಳು ಅವರನ್ನು ದುಡಿಸಿಕೊಂಡು ಬಂದರೂ ಇವರಿಗೆ ಖಾಯಂ ಭಾಗ್ಯ ಇಲ್ಲದಂತಾಗಿ ಅವರ ಪರಿಸ್ಥಿತಿಯು ಡೋಲಾಯಮಾನವಾಗಿದೆ ಕೆಲವರು ನಿವೃತ್ತಿ ಹೊಂದಿದ್ದಾರೆ ಇನ್ನೂ ಕೆಲವರು ವಯೋಮಾನ ಅಂಚಿನಲ್ಲಿ ತಲುಪಿ,ಬೇರೆ ದಾರಿಯೇ ಇಲ್ಲದಂತಾಗಿ ಮಾನಸಿಕವಾಗಿ ಅಸ್ವಸ್ಥರಾಗಿ ಎಷ್ಟೋ ಅತಿಥಿ ಉಪನ್ಯಾಸಕರು ಸಾವನ್ನಪ್ಪಿದ್ದಾರೆ ಕೆಲವರು ಈ ಆಧುನಿಕ ಭರಾಟೆಯಲ್ಲಿ ಬೆಲೆ ಏರಿಕೆಯಿಂದ ಕುಟುಂಬ ನಿರ್ವಹಣೆ ಮಾಡಲು ಪರ್ಯಾಯವಾಗಿ ಇದರ ಜೊತೆಗೆ ಬೇರೆ ಬೇರೆ ಕೆಲಸ ಮಾಡುತ್ತಿರುವುದು ಶೊಚನೀಯವಾಗಿದೆ ಈ ಹುದ್ದೆಯನ್ನೇ ಅವಲಂಬಿತರಾಗಿರುವ ಎಷ್ಟೋ ಕುಟುಂಬಗಳು ಮಕ್ಕಳ ಶಾಲೆ ಫೀಜ್,ಬಟ್ಟೆಬರೆ ಒಟ್ಟಿನಲ್ಲಿ ಕುಟುಂಬ ನಿರ್ವಹಿಸಲು ಪರದಾಡುವಂತಾಗಿದೆ.
ದೇಶದಲ್ಲೇ ಪ್ರಥಮವಾಗಿ ʼರಾಷ್ಟ್ರೀಯ ಶಿಕ್ಷಣ ನೀತಿʼ(NEP)ಯನ್ನು ಜಾರಿಗೊಳಿಸಲು ಆತುರ ತೋರುವ ಹಿಂದಿನ ಬಿಜೆಪಿ ಸರಕಾರವು ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಆಲಿಸದೆ ವಸ್ತುಶಃ ಮರೆತು ಬಿಟ್ಟಿತ್ತು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಮಾನ್ಯ ಸಭಾಪತಿಗಳು,ಉನ್ನತ ಶಿಕ್ಷಣ ಸಚಿವರು, ಶಾಸಕರ ಆದಿಯಾಗಿ ಹೊಸ ವಿಶ್ವವಿದ್ಯಾಲಯಗಳ ಬಗ್ಗೆ ವಿಶ್ವವಿದ್ಯಾಲಯಗಳ ಗುಣಮಟ್ಟದ ಬಗ್ಗೆ ಹೊಸ ಶಿಕ್ಷಣ ನೀತಿಯ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಮಾಡಿದರು ಆದರೆ ಉಪನ್ಯಾಸಕರುಗಳ ನೇಮಕಾತಿ ಬಗ್ಗೆ,ಕಳೆದ ಸುಮಾರು ಎರಡು ದಶಕಗಳಿಂದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶೇ.70-80 ರಷ್ಟು ಇರುವ ಅತಿಥಿ ಉಪನ್ಯಾಸಕರ ಬಗ್ಗೆ ಕಿಂಚಿತು ಚರ್ಚೆ ಮಾಡದಿರುವುದು ಖೇದಕರ ವಿಚಾರವಾಗಿದೆ.
ಅತಿಥಿ ಉಪನ್ಯಾಸಕರ ಸಮಸ್ಯೆಯ ಕುರಿತು ಅಂದಿನ ಸರಕಾರದ ಗಮನ ಸೆಳೆದಿದ್ದ ವಿರೋಧ ಪಕ್ಷದ ನಾಯಕರಾಗಿದ್ದ ಹಾಗೂ ಇಂದಿನ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರು ಕಳೆದ ಸರಕಾರದ ಅಧಿವೇಶನದಲ್ಲಿಅತಿಥಿ ಉಪನ್ಯಾಸಕರ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿ ಅವರಿಗೂ ಹತ್ತು ಹದಿನೈದು ವರ್ಷಗಳ ಅನುಭವವಿದೆ ಕಾಲೇಜುಗಳನ್ನು ಖಾಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಹೇಗಿದ್ದರೂ ಉಪನ್ಯಾಸಕರು ಬೇಕೆ ಬೇಕು,ಅವರಲ್ಲಿ ಡಬಲ್‌ ಡಿಗ್ರಿ,ಪಿಹೆಚ್‌.ಡಿ,ನೀಟ್ ಮಾಡಿಕೊಂಡಿದ್ದಾರೆ ಅವರ ಅನುಭವ ಮತ್ತು ಮಾನವೀಯ ಆಧಾರದ ಮೇಲೆ ಅವರನ್ನು ಖಾಯಂ ಮಾಡಿ ಎಂದು ಧ್ವನಿ ಎತ್ತಿ ಅಂದಿನ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆದಿದ್ದರು.ಪ್ರಸ್ತುತ ಅವರದೇ ಸರಕಾರ ಇದೆ ಯಾಕೆ ಇನ್ನೂ ಅತಿಥಿ ಉಪನ್ಯಾಸಕರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿರುವುದು ಎಷ್ಟು ಸರಿ?
ಎನ್ನುವುದು ಪ್ರಶ್ನೆಯಾಗಿದೆ.

ಸರಿಯಾಗಿ ಪಾಠ ಪ್ರವಚನ ಮಾಡೋದು ಇವರೇ
ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ 6 ಸಾವಿರ ಖಾಯಂ ಉಪನ್ಯಾಸಕರಿದ್ದಾರೆ ಆದರೆ ಇಷ್ಟೇ ಉಪನ್ಯಾಸಕರಿಂದ ಪಾಠ ಪ್ರವಚನ ಸಾಧ್ಯವಿಲ್ಲ ಹೀಗಾಗಿ ಹೆಚ್ಚುವರಿ ಕಾರ್ಯಭಾರಕ್ಕೆ 10 ಸಾವಿರಕ್ಕೂ ಆಧಿಕ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರನ್ನು ಕಾಲೇಜು ಶಿಕ್ಷಣ ಇಲಾಖೆಯಿಂದ ನೇಮಿಸಿಕೊಳ್ಳಲಾಗಿದೆ ನಿಜವಾದ ಪಾಠ ಪ್ರವಚನ ನಡೆಯುತ್ತಿರುವುದು ಈ ಅತಿಥಿ ಉಪನ್ಯಾಸಕರಿಂದಲೇ,ಇಂತಹ ಸಮೂಹಕ್ಕೆ ಸರಕಾರಗಳು ನಡೆಸುಕೊಳ್ಳುತ್ತಿರುವ ಪರಿ ಅಷ್ಟಿಷ್ಟಲ್ಲ,ಈ ಹುದ್ದೆ ಪ್ರಾರಂಭವಾದಾಗಿನಿಂದ ಇಂದಿನವರೆಗೂ ಶೋಷಣೆಗೆ ಒಳಗಾಗುತ್ತಿರುವುದು ನಮಗೆ ಜ್ವಲಂತ ನಿದರ್ಶನಗಳು ಕಾಣುತ್ತವೆ.
ಈಗ್ಗೆ ಸುಮಾರು ಮೂರು ನಾಲ್ಕು ವರುಷಗಳ ಹಿಂದೆ ಮಹಾಮಾರಿ ಕರೋನಾ ಸಂದರ್ಭದಲ್ಲಿ ಮಾರಕ ದಿನಗಳನ್ನು ನೆನಪಿಸಿಕೊಂಡರೆ ಈ ಹುದ್ದೇನೇ ಬೇಡ ಎನ್ನುವಷ್ಟರ ಮಟ್ಟಿಗೆ ಅವರ ಜೀವನ ಪಾತಾಳಕ್ಕೆ ಕೊಂಡೊಯ್ಯೂದಿತ್ತು ಆ ಸಮಯದಲ್ಲಿ ಕೆಲಸ ಕಳೆದುಕೊಂಡು ಹೊಟೇಲ್‌,ಬಾರ್‌,ರೆಸ್ಟೋರೆಂಟ್‌ ಗಳಲ್ಲಿ ಸರ್ವರ್‌ ಕೆಲಸಕ್ಕೆ ಕೈ ಚಾಚುವಂತಾಯಿತು. ಚಾಕ್ ಪೀಸ್‌ ಹಿಡಿದು ಪಾಠ ಪ್ರವಚನ ಮಾಡುವ ಕೈಯಲ್ಲಿ ಮದ್ಯ ಬಾಟಲಿ ಹಿಡಿದು ಸಪ್ಲೇಯರ್‌ ಆಗಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಅಮಾನವೀಯ ದೃಶ್ಯಗಳು ಎಲ್ಲಾ ಮೀಡಿಯಾಗಳಲ್ಲಿ ಹರಿದಾಡಿದವು ಆದರೂ ಸರಕಾರಕ್ಕೆ ಯಾವುದೂ ಕೇಳಿಸಲಿಲ್ಲ,ಕಾಣಿಸಲಿಲ್ಲ. ಹೋರಾಟ ಮನವಿ ನೀಡಿದಾಗ ಅಂದಿನ ಮುಖ್ಯಮಂತ್ರಿಯವರು ಮೂರು ತಿಂಗಳು ವೇತನ ನೀಡಿದರು.ಕರೋನ ಮಹಾಮಾರಿಗೆ ಸುಮಾರು ಅತಿಥಿ ಉಪನ್ಯಾಸಕರು ಸಾಲು ಸಾಲಾಗಿ ಈ ಮಹಾಮಾರಿಗೆ ತುತ್ತಾಗಿ ಆಸ್ಪತ್ರೆಗೆ ತೋರಿಸಿಕೊಳ್ಳಲು ಕಾಸಿಲ್ಲದೆ ಸಾವನ್ನಪ್ಪಿದರು. ಸರಕಾರಕ್ಕೆ ಸುದ್ದಿ ಗೊತ್ತಿದ್ದರೂ ಗೊತ್ತಿಲ್ಲದಂತೆ ಜಾಣ ಕುರುಡುತನದಿಂದ ವರ್ತಿಸಿ ಅತಿಥಿ ಉಪನ್ಯಾಸಕರ ಸಮೂಹಕ್ಕೆ ಅನ್ಯಾಯವೆಸಗಿದೆ ಇಂತಹ ಅಭದ್ರತೆಯ ಹುದ್ದೆ ಅತಿಥಿ ಉಪನ್ಯಾಸಕರ ಸಮೂಹಕ್ಕೆ ಇಂತಹ ಮಾನಸಿಕ ಕಿರುಕುಳ ಹುದ್ದೆಯಿಂದ ಜೀವನ ನಡೆಸಲು ಮಾರಕವಾಗಿದೆ ಎನ್ನುವುದು ಅತಿಥಿ ಉಪನ್ಯಾಸಕರ ಅಳಲು.
ಹಿಂದಿನ ಬಿಜೆಪಿ ಸರಕಾರವು ಅತಿಥಿ ಉಪನ್ಯಾಸಕರ ಪ್ರತಿಭಟನೆ,ಹೋರಾಟದ ಮನವಿಯನ್ನು ಸ್ವೀಕರಿಸಿ ತಕ್ಕಮಟ್ಟಿಗಾದರೂ ಸರಕಾರವು ಕೊಂಚ ಸ್ಪಂದಿಸಿ ಅವರ ವೇತನ ಹೆಚ್ಚಿಸಿ ನಿಟ್ಟುಸಿರು ಬೀಡುವಂತೆ ಸಡಿಲಗೊಳಿಸಿತ್ತು.ಪಾರ್ಟ್ ಟೈಂ ಇಂದ ಫುಲ್‌ ಟೈಂ ಅಂದರೆ 15,19 ಗಂಟೆ ಮಾಡಿ 32 ಸಾವಿರ 28 ಸಾವಿರ 26 ಸಾವಿರ ಮೂರು ಸ್ಲಾಬ್‌ ಗಳನ್ನು ಮಾಡಿ ವೇತನ ನೀಡಿ ಅವರ ಬಾಳಿಗೆ ನಾಂದಿ ಹಾಡಿದ್ದಾರೆ. ಎಂದು ಸ್ವಲ್ಪ ಮಟ್ಟಿಗಾದರೂ ಸಂತೋಷ ಪಡುವಂತೆ ಮಾಡಿದೆ ಎಂದು ಹೇಳುತ್ತಿದ್ದಾರೆ. ವೇತನ ಹೆಚ್ಚಿಸಿರುವುದು ಅತಿಥಿ ಉಪನ್ಯಾಸಕರ ಬಾಳಿಗೆ ಅಭಿಲಾಷೆ ಮೂಡಿಸಿದೆ ಈ ಹುದ್ದೆಯನ್ನೆಅವಲಂಬಿತ ಎಷ್ಟೋ ಉಪನ್ಯಾಸಕರು ಇನ್ನೂ ನಮ್ಮನ್ನು ಮುಂದಿನ ದಿನಮಾನದಲ್ಲಿ ಸರಕಾರವೂ ಖಾಯಂ,ಸೇವಾ ಸಕ್ರಮಾತಿ,ಭದ್ರತೆ ಕೊಡುತ್ತಾರೆ,ಮಾಡುತ್ತಾರೆ ಎನ್ನುವ ಆಕಾಂಕ್ಷೆ ಹೆಚ್ಚಿಸಿತು ಪಾಠ ಪ್ರವಚನ ಮಾಡಲು ಹುರಿದುಂಬಿಸುವಂತಾಯಿತು ಹೆಚ್ಚು ಹೆಚ್ಚು ಪ್ರಭಾವಿಯಾಗಿ ಕಾಲೇಜಿನ ಒಂದು ಭಾಗ ಎನ್ನುವಂತೆ ಬಾಡಿ ಹೋದ ಅವರ ಮನಸ್ಸು ಅರಳುವಂತೆ ಮಾಡಿತು ವಿದ್ಯಾರ್ಥಿಗಳ ಜೊತೆ ಇನ್ನೂ ಹೆಚ್ಚಿನ ಅನೋನ್ಯತೆಯಿಂದ ಇರುವಂತೆ ಮಾಡಿತು.
ರವಿಂದ್ರನಾಥ ಟ್ಯಾಗೋರ್‌ ರವರು ಹೇಳಿರುವಂತೆ “ಬೋಧನೆಯ ಮುಖ್ಯ ಉದ್ದೇಶವು ವಿವರಣೆ ನೀಡುವುದಲ್ಲ ವಿದ್ಯಾರ್ಥಿಗಳ ಮನಸ್ಸಿನ ಬಾಗಿಲುಗಳನ್ನು ತಟ್ಟುವುದು“ನಿಜವಾಗಿಯೂ ಪುಲ್‌ ಟೈಂ ಅತಿಥಿ ಉಪನ್ಯಾಸಕರು ವಿದ್ಯಾರ್ಥಿಗಳ ಮನಸ್ಸನ್ನು ತಟ್ಟಿ ಓದುವಿಕೆಯಲ್ಲಿ ಹೆಚ್ಚಿನ ಗಮನ ಹರಿಸುವಂತೆ ಪ್ರೇರೆಪಿಸಿ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರು,ಆದರೆ ಸರಕಾರಗಳು ನಮ್ಮ ಬೇಡಿಕೆ ಈಡೇರಿಸಲು ಯಶಸ್ವಿಯಾಗಲಿಲ್ಲ.
2022-23 ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯು ಕೌನ್ಸಿಲಿಂಗ್‌ ಮೂಲಕ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನಡುವೆಯೇ ಕೇವಲ ಏಳು ತಿಂಗಳು ಅವರ ಸೇವೆಯನ್ನು ಬಳಸಿಕೊಂಡು ಮತ್ತೆ ಈ ವರ್ಷ 2023-24ಶೈಕ್ಷಣಿಕ ಸಾಲಿನಲ್ಲಿ ಮತ್ತೆ ಹೊಸ ಅರ್ಜಿಯನ್ನು ಕರೆದು ಪ್ರಸ್ತುತ ವರ್ಷದಿಂದ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ನೀಡಿ ಕೌನ್ಸಿಲಿಂಗ್‌ ಮೂಲಕ ಆಯ್ಕೆ ಮಾಡಿಕೊಂಡಿದೆ. ಇದು ಯಾಕೆ ಎನ್ನುವುದು ಹಲವು ಅತಿಥಿ ಉಪನ್ಯಾಸಕರ ಪ್ರಶ್ನೆಯಾಗಿದೆ ಇಲಾಖೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಮೀಸಲಾತಿ ನೀಡಿರುವುದು ಶ್ಲಾಘನೀಯ ಆದರೆ ಈ ಮೀಸಲಾತಿಯು ಸರಿಯಾದ ಮಾನದಂಡಗಳನ್ನು ಪಾಲನೆ ಮಾಡಿಲ್ಲ ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿದೆ ಪ್ರಸ್ತುತ ಆಯ್ಕೆಯಾಗಿರುವ ಉಪನ್ಯಾಸಕರನ್ನು ಎಲ್ಲರನ್ನೂ ಕರ್ತವ್ಯಕ್ಕೆ ವರದಿ ಮಾಡಿಸಿಕೊಂಡು ಅವರನ್ನು ಬಳಸಿಕೊಳ್ಳದೇ ವಿಶ್ವವಿದ್ಯಾಲಯಗಳ ಕ್ಯಾಲೆಂಡರ್‌ ಆಫ್‌ ಇವೆಂಟ್‌ ನಲ್ಲಿ ಯಾವುದು ಮೊದಲೋ ಅಷ್ಟಕ್ಕೆ ಸೀಮಿತಗೊಳಿಸಿ ರಾಜ್ಯದ ಕೆಲವು ವಿ ವಿ ಯಲ್ಲಿ ಇನ್ನೂ ಸೆಮಿಸ್ಟರ್‌ ಪರೀಕ್ಷೆಗಳು ನಡಿಯುತ್ತಿದೆ,ಇನ್ನೂ ಈ ವರ್ಷ ಪ್ರವೇಶ ಪಡೆದಿರುವ ಪ್ರಥಮ ಸೆಮ್‌ ಬಿಎ ಬಿಕಾಂ ಬಿಎಸ್ಸಿ ಬಿಸಿಎ ತರಗತಿಗಳು ಮಾತ್ರ ನಡೆಯುತ್ತಿವೆ ಪ್ರಥಮ ಸೆಮ್‌ ಕಾರ್ಯಭಾರಕ್ಕೆ ಅನುಗುಣವಾಗಿ ಕೆಲವೇ ಕೆಲವು ಅತಿಥಿ ಉಪನ್ಯಾಸಕರನ್ನು ಕೆಲಸಕ್ಕೆ ತಗೊಂಡು ಉಳಿದ ಉಪನ್ಯಾಸಕರನ್ನು ಉಳಿದ ಸೆಮ್‌ ತರಗತಿ ಪ್ರಾರಂಭ ಆದಾಗ ನಿಮ್ಮನ್ನು ತಗೊಳ್ಳುತ್ತೇವೆ ಎಂದು ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಯಾಕೆ ಸರ್‌ ಹೀಗೆ ಎಂದು ಕೇಳಿದಾಗ ಇಲಾಖೆಯಿಂದ ನಮಗೆ ಮೌಖಿಕ ಆದೇಶ ಇದೆ ಎಂದು ಹೇಳುತ್ತಿದ್ದಾರೆ ಒಂದು ಕಡೆ ಸುಣ್ಣ ಒಂದು ಕಡೆ ತುಪ್ಪ ಈ ರೀತಿಯ ತಾರತಮ್ಯ ಮಾಡಿ ನಮ್ಮನ್ನು ಮುಜುಗರಕ್ಕೆ ಒಳಪಡಿಸಿದೆ ಎಂದು ಹಲವು ಉಪನ್ಯಾಸಕರು ನಮ್ಮನ್ನು ಇಲಾಖೆ ಬೀದಿಗೆ ತಳ್ಳಿದೆ ಎಂದು ಪುನಃ ಇಲಾಖೆಯ ವಿರುದ್ದ ಪ್ರತಿಭಟಿಸಿ ಆಗ್ರಹಿಸುತ್ತಿದ್ದಾರೆ ರಾಜ್ಯ ನಿಯೋಗವು ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಈ ಧೋರಣೆಯನ್ನು ತಕ್ಷಣದಿಂದಲೇ ಕೈ ಬಿಟ್ಟು ಸಮಸ್ಯೆಯನ್ನು ಬಗೆಹರಿಸಲು ಮನವಿ ಸಲ್ಲಿಸಿದ್ದಾರೆ.
ಪ್ರಸ್ತುತ ಕಾಂಗ್ರೆಸ್‌ ಸರಕಾರವು ತಮ್ಮ ಚುನಾವಣೆ ಪೂರ್ವ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವಂತೆ ರಾಜ್ಯದ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಯೋಜನೆ ರೊಪಿಸಲಾಗುವುದು ಎಂದು ಪ್ರಕಟಿಸಿದೆ ಈ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಾಮಾಜಿಕ ನ್ಯಾಯ ಒದಗಿಸುವಲ್ಲಿ ನುಡಿದಂತೆ ನಡೆಯುವ ಸರಕಾರ ನಮ್ಮನ್ನು ಇಂದಲ್ಲಾ ನಾಳೆ ಯಶಸ್ವಿಯಾಗಿ ಖಾಯಂ ಮಾಡೇ ಮಾಡುತ್ತಾರೆ ಎನ್ನುವ ಆಶಾಭಾವನೆಯನ್ನು ಹಾಗೂ ಭರವಸೆಯನ್ನು ಇಟ್ಟುಕೊಂಡಿದ್ದೇವೆ ಎಂದು ಅತಿಥಿ ಉಪನ್ಯಾಸಕರುಗಳು ಹೇಳುತ್ತಿದ್ದಾರೆ.
ಲೇಖಕರು-ಶ್ರೀ ಶಿವಕುಮಾರ್ ಎಲ್
ಉಪನ್ಯಾಸಕರು
ಹಗರಿಬೊಮ್ಮನಹಳ್ಳಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ