ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸರ್ವರೋಗಕ್ಕೂ ದುಡ್ಡೇ ಮದ್ದು

ದುಡ್ಡಿಗೆ ನಾನಾತರಹದ ಹೆಸರಿದೆ
ದೇವಸ್ಥಾನದ ಹುಂಡಿಯಲ್ಲಿ ಸಿಕ್ಕರೆ ಕಾಣಿಕೆ,ತಂದೆ ಕೊಟ್ಟರೆ ಪಾಕೆಟ್ ಮನಿ,ಮಂತ್ರಿಗಳ ಮನೆಯಲ್ಲಿ ಸಿಕ್ಕರೆ ಕಪ್ಪು ಹಣ,ವೃದ್ದಾಶ್ರಮಕ್ಕೆ ಕೊಟ್ಟರೆ ದಾನ, ಕಾರ್ಮಿಕನಿಗೆ ಕೊಟ್ಟರೆ ಕೂಲಿ.
ಈ ವಾಸ್ತವದಲ್ಲಿ ಹಣವೆಂಬುದು ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂದರೆ ನಿಜಕ್ಕೂ ತಪ್ಪಾಗದು.
ಹಣ ಜೀವನದಲ್ಲಿ ಮುಖ್ಯವಾದ ಒಂದು ಸಹಾಯಕ ಸಾಧನವಾಗಿದೆ.
ಈ ಹಿಂದೆ “ಧರ್ಮೋ ರಕ್ಷತಿ ರಕ್ಷಿತಃ” ಎಂಬ ಗಾದೆಯೊಂದಿತ್ತು ಅದು ಈಗಲೂ ಇದೆ ಆದರೆ ಈಗ “ಧನೋ ರಕ್ಷಿತಿ ರಕ್ಷಿತಃ” ಎಂಬ ಘೋಷವಾಕ್ಯವು ಬಲವಾಗುತ್ತಿದೆ ಮತ್ತು ಪ್ರಬಲವಾಗುತ್ತಿದೆ.

ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೆ, ತೊಟ್ಟಿಲಿನಿಂದ ಸ್ಮಶಾನದವರೆಗೆ,ಎಲ್ಲಿಗೆ ಹೋಗಬೇಕೆಂದರೂ,ಎಲ್ಲಿ ತಲುಪಬೇಕೆಂದರೂ, ಏನನ್ನು ನೋಡಬೇಕೆಂದರೂ ದುಡ್ಡು ಎಂಬ ಇಂಧನ ಬೇಕೇ ಬೇಕು.
ಒಂದು ಕಾಲದಲ್ಲಿ ನೀತಿಗೆ,ನಿಯತ್ತಿಗೆ, ಪ್ರಾಮಾಣಿಕತೆಗೆ,ಒಳ್ಳೆಯತನಕ್ಕೆ ಬೆಲೆ ಗೌರವಗಳು ಇದ್ದವು,ಮತ್ತೊಂದು ಕಾಲದಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿಗೆ,ಮಗದೊಂದು ಕಾಲದಲ್ಲಿ ಪ್ರತಿಭೆಗೆ,ಶಿಕ್ಷಣಕ್ಕೆ,ರೂಪಕ್ಕೆ ಗೌರವಾದರಗಳು ಇದ್ದವು ಇತ್ತೀಚಿನ ಕಾಲಮಾನದಲ್ಲಿ ಜೀವನದಲ್ಲಿ ದುಡ್ಡು ಎಂಬುದು ಬಹಳ ಮುಖ್ಯವಾದ ಸಂಗತಿಯಾಗಿಬಿಟ್ಟಿದೆ ಜೀವನದಲ್ಲಿ ಪ್ರತಿಯೊಂದು ವಸ್ತುವನ್ನು ಕೊಳ್ಳಲು,ಸುಖವನ್ನು ಅನುಭವಿಸಲು, ನೆಮ್ಮದಿಯನ್ನು ಪಡೆಯಲು ಆಹಾರ, ವಸತಿ,ಆರೋಗ್ಯ,ವಾಹನ,ಪ್ರಯಾಣ ಇತ್ಯಾದಿ ಪ್ರತಿಯೊಂದು ಸೇವೆ ಮತ್ತು ವಸ್ತುಗಳನ್ನು ಪಡೆಯಲು ಹಣ ಅತ್ಯಂತ ಅನಿವಾರ್ಯವಾದ ವಿಷಯವಾಗಿದೆ.

“ಧೈರ್ಯಂ ಸರ್ವರ್ಥ ಸಾಧನಂ” ಎಂಬುದು ಹೇಗೋ ಹಾಗೆಯೇ “ಧನಂ ಸರ್ವತ್ರ ಸಾಧನಂ” ಆಗುತ್ತಿದೆ. ಎಷ್ಟೋ ಸಾರಿ ಹಣವಿಲ್ಲದಿದ್ದರೆ ಎದೆಯಲ್ಲಿ ಧೈರ್ಯವೇ ಇರೋದಿಲ್ಲ,ಮನಸ್ಸಿನಲ್ಲಿ ನೆಮ್ಮದಿ ಕೂಡ ಇರೋದಿಲ್ಲ ಮತ್ತು ಮುಖದಲ್ಲಿ ನಗು ಅಂತೂ ಇರೋದೇ ಇಲ್ಲ.ಹಣವಿದ್ದರೆ ಎಂತಹ ಪರಿಸ್ಥಿತಿಯನ್ನು ಎದುರಿಸುತ್ತೇನೆ ಎಂಬ ಧೈರ್ಯ ಎದೆಯಲ್ಲಿ ಮನೆ ಮಾಡಿರುತ್ತದೆ ಅದು ಪೂರ್ಣ ಸತ್ಯವಿಲ್ಲದಿರಬಹುದು,ಆದರೂ ಸಹ ಅದೂ ಕೂಡಾ ನಿಜ.
ಇಂದಿನ ಆಧುನಿಕ ಜಗತ್ತಿನಲ್ಲಿ ಹಣದ ಮಹತ್ವವು ಹಿಂದೆಂದಿಗಿಂತಲೂ,ಎಂದೆಂದಿಗಿಂತಲೂ ಹೆಚ್ಚಾಗಿದೆ. “ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನನಂತೆ” ಎಂಬ ಮಾತಿದೆ “ದುಡ್ಡೇ ದೊಡ್ಡಪ್ಪ ” ಅನ್ನೋ ಗಾದೆ ಮಾತೂ ಇದೆ ಭೂಮಿ ಸೂರ್ಯನ ಸುತ್ತಲೂ ಸುತ್ತುತ್ತದೆ ಎಂಬುದು ಎಷ್ಟು ಸತ್ಯವೋ, ಭೂಮಿಯ ಮೇಲಿನ ಜನರು ಹಣದ ಸುತ್ತಲೂ ಸುತ್ತುತ್ತಾರೆ ಎಂಬುದೂ ಕೂಡಾ ಅಷ್ಟೇ ಸತ್ಯ.

ಒಂದು ವಿಷಯವನ್ನು ಗಮನಿಸಿ ನೋಡಿ, ಹಣವಿದ್ದವನಿಗೆ,ಶ್ರೀಮಂತನಿಗೆ ಜನ ವಿನಾಕಾರಣ ಗೌರವ ಕೊಡುತ್ತಾರೆ ಸದ್ಯಕ್ಕೆ ಈ ಜಗತ್ತಿನಲ್ಲಿ ಅವನೇ ದುಡ್ಡು ಮಾಡಿರುವವನೇ ಆದರ್ಶ ವ್ಯಕ್ತಿ ಹಣವನ್ನು ಅವನು ಯಾವ ಮಾರ್ಗದಿಂದಲಾದರೂ ಸಂಪಾದಿಸಿರಲಿ,ಮೋಸ,ವಂಚನೆ,ಕೊಲೆ,ಸುಲಿಗೆ, ಲಂಚ,ಅಪ್ರಾಮಾಣಿಕತೆ ಏನೇ ಮಾಡಿರಲಿ,ಅವನು ಜನರಿಗೆ ಹಣದ ಸಹಾಯ ಮಾಡಲಿ,ಬಿಡಲಿ ಸ್ವಾರ್ಥಿಯಾಗಲಿ,ಜಿಪುಣನಾಗಲಿ ಜುಗ್ಗನಾಗಲಿ, ಕ್ರೂರಿಯಾಗಲಿ,ಸ್ಫುರದೃಪಿಯಾಗಿರಲಿ, ಕುರೂಪಿಯಾಗಿರಲಿ ಈಗಿನ ಪೀಳಿಗೆಗೆ,ಈಗಿನ ಜನರಿಗೆ,ಈಗಿನ ಯುವಕರಿಗೆ ಅವನೇ ಆದರ್ಶ ಪುರುಷನಾಗುತ್ತಾನೆ.ಜನ ಅವನನ್ನೇ ಅನುಕರಿಸಲು, ಓಲೈಸಲು,ಪ್ರಯತ್ನಿಸುತ್ತಿರುತ್ತಾರೆ.
ಜಗತ್ತಿನ ಎಲ್ಲಾ ಸಣ್ಣ ಪುಟ್ಟ ಝರಿ,ತೊರೆಗಳು ಹೇಗೆ ದೊಡ್ಡ ನದಿಗಳನ್ನು ಸೇರುತ್ತವೆಯೋ,ಎಲ್ಲಾ ದೊಡ್ಡ ನದಿಗಳು ಸೇರಿ ಹೇಗೆ ಸಮುದ್ರವನ್ನು,ಸಾಗರವನ್ನು ಸೇರುತ್ತವೆಯೋ ಹಾಗೆಯೇ ಹಣವಿದ್ದ ಕಡೆಗೆ ಅಧಿಕಾರ,ಹಣವಿದ್ದ ಕಡೆಗೆ ಆನಂದ,ಹಣವಿದ್ದ ಕಡೆಗೆ ಸೌಂದರ್ಯ,ಹಣವಿದ್ದ ಕಡೆಗೆ ಸಕಲ ಸೌಭಾಗ್ಯಗಳು ಸಹ ಹರಿದು ಹೋಗಲು ಸದಾ ತವಕಿಸುತ್ತಿರುತ್ತವೆ.
ಹಾಗಾಗಿ ಯಾರು ಏನೇ ಹೇಳಲಿ,ದುಡ್ಡು ದುಡಿಯಬೇಕು ಬೇರೆಯವರಿಗೆ ತೊಂದರೆಯಾಗದ ಹಾಗೆ,ಮೋಸ ಮಾಡದ ಹಾಗೆ ದುಡಿಯಬೇಕು. ನಮಗಾಗಿ,ನಮ್ಮವರಿಗಾಗಿ,ನಮ್ಮತನವನ್ನು,ನಮ್ಮ ಆತ್ಮಾಭಿಮಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಗಳಿಸಬೇಕು ನಮ್ಮ ಶ್ರಮದಿಂದ,ನಮ್ಮ ಕೌಶಲ್ಯದಿಂದ ದುಡ್ಡು ಮಾಡಬೇಕು ನಾವು ದುಡಿಯುವ ದುಡ್ಡು ನಮ್ಮ ಬೆವರಿನಿಂದ ಬರಬೇಕೇ ಹೊರತು, ಬೇರೆಯವರ ಕಣ್ಣೀರಿನಿಂದ ಅಲ್ಲ. ದುಡಿಯುವುದು ಅಷ್ಟೇ ಅಲ್ಲ ಪ್ರತಿ ಪೈಸೆಯನ್ನು, ಪ್ರತಿ ರೂಪಾಯಿಯನ್ನು ಖರ್ಚು ಮಾಡುವಾಗಲೂ ಸಹ ಯೋಚಿಸಿ ವ್ಯವಸ್ಥಿತವಾಗಿ ಮತ್ತು ಜಾಣತನದಿಂದ ಖರ್ಚು ಮಾಡಬೇಕು. “ಉಳಿತಾಯ ಮಾಡುವುದು ಸಹ ಗಳಿಕೆಯ ಒಂದು ಭಾಗ”ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು ಇಲ್ಲದಿದ್ದರೆ ಜೀವನವಿಡಿ ದುಡಿದರೂ ಸಹ ಹಣಕ್ಕಾಗಿ ಪರದಾಟ ನಿಲ್ಲುವಂತದ್ದಲ್ಲ.
“ಜನರು ಹಣವನ್ನು ಮುಖ್ಯ ಅಲ್ಲ ಅಂತ ಹೇಳ್ತಾರೆ. ಆದರೆ ಅದು ಆಮ್ಲಜನಕದಷ್ಟೇ ಮಹತ್ವ ಪಡೆದಿದೆ”
-ಜೇಬ್ ಬ್ಲಾಂಟ್

ಹಣ ಆಮ್ಲಜನಕದಷ್ಟೇ ಮಹತ್ವ ಪಡೆದಿದೆ ಅಂತ ಅತಿ ದೊಡ್ಡ ಬರಹಗಾರರು ಹೇಳ್ತಾರೆ.
ಒಟ್ಟಿನಲ್ಲಿ,
ಹಣ ಕಂಡ್ರೆ ಹೆಣ ಕೂಡ ಬಾಯಿ ಬಿಡತ್ತೆ
ಅನ್ನೋದು ಗಾದೆ ಅಷ್ಟೇ ಅಲ್ಲ,ಅದು ಅನುಭವದ ಮಾತು.
-ರಕ್ಷಿತ್ ಆರ್. ಪಿ
ಎಂಜಿಮ್ ಕಾಲೇಜು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ