ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತುಳಸಿ ಮಾತೆಯ ವೈಶಿಷ್ಟ್ಯವೂ ಆಸ್ವಾದ

ತುಂಬಾ ಶ್ರದ್ದೆಯಿಂದ ಭಕ್ತಿಯಿಂದ ನಮಿಸುವ, ಮನಸ್ಸಿಗೆ ನೆಮ್ಮದಿ ದೊರಕುವ ಅಲ್ಲಿ ನಿಂತು ಧ್ಯಾನ ಮಾಡಿದ್ದೆ ಆದಲ್ಲಿ ತನುವಿಗೆ ಹಿತವೂ ಉಂಟು. ಮನೆಗೆ ಶೋಭೆಯನ್ನು ತಂದುಕೊಡುವ ಜ್ಯೋತಿ ಹಚ್ಚಿ ಕರ್ಪುರ ಬೆಳಗಿ ಪರಿಮಳ ಬೀರಿದಾಗ ಸುಗಂಧವು ಸೂಸಿ ನೆರೆಯವರನ್ನು, ಅಕ್ಕಪಕ್ಕದವರನ್ನು,ದಾರಿಹೋಕರನ್ನು ಸೆಳೆಯುವ ಶಕ್ತಿ ಜೊತೆಗೆ ಗೌರವ ನಮಿಸುವ ಸಂಪ್ರದಾಯವೂ ಯಥಾಪ್ರಕಾರ ಮುಂದುವರಿದರೆ ನಮ್ಮ ಧರ್ಮದ ಆಚರಣೆಗೆ ಕಳಶಪ್ರಾಯವೆಂದೇ ಹೇಳಬಹುದು.
ಬಹಳ ಶ್ರದ್ದೆಯಿಂದ ಆ ಕಟ್ಟೆಯ ಮುಂದೆ ನಿಲ್ಲಬೇಕು ಮಡಿಯಿಂದಲೇ ಸಮೀಪಕ್ಕೆ ಧಾವಿಸಬೇಕು. ಮುಟ್ಟಾದಾಗ ಸ್ತ್ರೀಯರು,ತರುಣಿಯರು ಹತ್ತಿರಕ್ಕೂ ಸುಳಿಯುವುದಿಲ್ಲ ಇದು ಅವರಿಗೆ ಭಯವು ಮತ್ತು ಕಟ್ಟಳೆಯು ಆಗಿರುವುದಲ್ಲಿ ಸಂಶಯವಿಲ್ಲ.
ಪುರಾತನ ಕಾಲದಲ್ಲಿ ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರ ನಿವಾಸಗಳಲ್ಲಿ ತುಳಸಿ ಗಿಡಗಳನ್ನು ಇಟ್ಟುಕೊಂಡಿರುವರು ಕಾರಣ ಇವರು ಸಾಕ್ಷಾತ್ ಲಕ್ಷ್ಮೀಯ ಪ್ರತಿರೂಪ ಭಗವಾನ್ ಶ್ರೀ ವಿಷ್ಣುವಿನ ಧರ್ಮಪತ್ನಿ ಲಕ್ಷ್ಮೀದೇವಿಯ ರೂಪವನ್ನು ಒಳಗೊಂಡ ದೇವತೆ ಅವರು ಗೃಹದಲ್ಲಿ ತುಳಸಿಯು ಇದ್ದರೆ ಹಣವೂ ಮನೆಯಲ್ಲಿರುತ್ತದೆ ಎಂಬ ನಂಬಿಕೆಯ ವಾಡಿಕೆಯು ಇರುವುದು.
ಪ್ರತಿನಿತ್ಯ ಪೂಜೆ ಮಾಡುತ್ತಾ ಬಂದಿದ್ದೆ ಆದಲ್ಲಿ ಹಿತವಾದ ವಾತಾವರಣವೂ ತಾಂಡವವಾಡುತ್ತಿರುತ್ತದೆ ಇದರಿಂದ ಸುಖ,ಸಂತೋಷ,ಸಮೃದ್ಧಿಯು ಅಭಿವೃದ್ಧಿ ಸಂಕೇತವಾಗಿ ನೆಲೆಸಿರುವಳು ಎಂಬುದು ಪದ್ಧತಿ. ಪುರಾಣದ ಪ್ರಕಾರ ಏಕಾದಶಿ ಮಾಸದಲ್ಲಿ ಹನ್ನೊಂದನೆಯ ದಿನದ ಶುಕ್ಲಪಕ್ಷದಂದು ತುಳಸಿಯೊಂದಿಗೆ ವೈಷ್ಣವನಾದ ನಾರಾಯಣನೊಂದಿಗೆ ಲಗ್ನವಾಗುತ್ತದೆ. ಸಾಲಿಗ್ರಾಮೆಯ ಅವತಾರದಲ್ಲಿ ವಿಷ್ಣು ರಮಣೀಯಾಗಿ ವಧುವಿನಂತೆ ತುಳಸಿ ಮಾತೆಯು ಇಬ್ಬರ ಆ ಮಿಲನವು ಪ್ರಕೃತಿಯ ಸೊಬಗೆಂದು ತಿಳಿಯಬಹುದು ಲಕ್ಷ್ಮೀಕಟಾಕ್ಷಕ್ಕೆ ಕೃಪೆಗೆ ಪಾತ್ರರಾಗುವ ನಾವುಗಳು ತುಳಸಿಯನ್ನು ಪೂಜ್ಯ ಭಾವನೆಯಿಂದ ದಿನಾಲೂ ಪೂಜೆ ಮಾಡಿದರೆ ಒಳಿತಿನ ಸಂಕೇತಗಳು ಯಥೇಚ್ಚವಾಗಿ ಕಾಣುವ ಸಂಭವವು ಇರುವುದು.ತುಳಸಿಯಲ್ಲಿ ಹಲವಾರು ವಿಧಗಳುಂಟು ಉದಾಹರಣೆಗೆ ರಾಮತುಳಸಿ, ಶ್ಯಾಮತುಳಸಿ,ಕರ್ಪೂರತುಳಸಿ ಹೀಗೆ ಮುಂತಾದವುಗಳು ಇದ್ದು,ತುಂಬಾ ಉಪಯುಕ್ತತೆಯನ್ನು ಕೊಡುವ ಲಕ್ಷಣವನ್ನು ಹೊಂದಿದ್ದು ನಾನಾ ರೀತಿಯಲ್ಲಿ ಅನುಕೂಲವಿರುವ ಈ ತುಳಜಾ ಭವಾನಿಯನ್ನು ನೆನಹುವರು ಹಾಗೆ ಕೃಷ್ಣಪ್ರಿಯೆ,ರಾಮಪ್ರಿಯೆ,ವಿಷ್ಣುಪ್ರಿಯೆಯಾಗಿ ಅವರ ಹೃದಯದ ಅರಮನೆಯಲ್ಲಿ ಸ್ಥಾನ ಗಿಟ್ಟಿಸಿರುವ ಮತ್ತು ಹಣ್ಣುಕಾಯಿಯ ಜೋಡಿ ತುಳಸಿಯು ಸಾಗುವರು ಇದರಿಂದ ಪರಮಾತ್ಮನಿಗೂ ಪ್ರೀತಿ ನಮಗೂ ನಮ್ಮ ಪರಿವಾರಕ್ಕೂ ಆಶೀರ್ವಾದ ನೀಡಿ ಕರುಣಿಸಲಿ ಎಂದ ಭಕ್ತ.
✍🏻ದೇವರಾಜು ಬಿ ಎಸ್ ಹೊಸಹೊಳಲು.
ಕಾವ್ಯನಾಮ:ಅರಸು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ