ಸೊರಬ:ದೈಹಿಕ ಸದೃಡತೆಯು ಜೀವನದ ಒಂದು ಮಾರ್ಗವಾಗಿದೆ.ಕ್ರೀಡೆಗಳಲ್ಲಿ ತೊಡಗುವುದರಿಂದ ದೈಹಿಕ ಸದೃತೆ ಮಾತ್ರವಲ್ಲದೇ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ,ಸಮಾಜ ಸೇವಕ ಶಂಕರ್ ಶೇಟ್ ಅಭಿಪ್ರಾಯಪಟ್ಟರು.
ಸೊರಬ ಪಟ್ಟಣದ ಜ್ಯೂನಿಯರ್ ಕಾಲೇಜು ಆವರಣದಲ್ಲಿ ಬಿಸಿಸಿ ಕಾನುಕೊಪ್ಪ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್ ನಗರ ಪ್ರೀಮಿಯರ್ ಲೀಗ್ 3ನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು,ಮನುಷ್ಯನು ತನ್ನ ಜೀವನದೊಂದಿಗೆ ಒಂದಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಸುಸ್ಥಿರ ಆರೊಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಮಾನವನ ಬದುಕು ಕೇವಲ ಓದು ಮತ್ತು ಅಂಕಪಟ್ಟಿಯ ಮೇಲೆ ನಿಂತಿಲ್ಲ,ನಾವು ಕ್ರೀಡೆಗಳಲ್ಲಿ ಭಾಗಿಸುವುದರ ಮೂಲಕ ನಮ್ಮ ಶಕ್ತಿ ಪ್ರದರ್ಶಿಸಬೇಕಾಗುತ್ತದೆ.ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಾತ್ಮಕ ಮನೋಭಾವನೆಯಿಂದ ಭಾಗವಹಿಸುವುದು ಮುಖ್ಯ ಸೋತರೆ ಸಲಹೆಗಾರ ಆಗುತ್ತಿವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಗೆದ್ದರೆ ನಾಯಕರಾಗುತ್ತೇವೆ,ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದರ ಜೊತೆಗೆ ವ್ಯಕ್ತಿತ್ವ ವಿಕಸನ ವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಪ್ರಾoಶುಪಾಲ ಸುರೇಶಪ್ಪ,ಕೃಷ್ಣಮೂರ್ತಿ,ನೆಹರು ಕೊಡಕಣಿ,ಮಲ್ಲಿಕಾರ್ಜುನ,ಹರ್ಷಲ್ ರಾಮ್, ನಾಗರಾಜಗೌಡ ಚಿಕ್ಕಾವಲಿ,ಅಜೀತ್ ಪ್ರಭು, ಹೋಂಗಾರ್ಡ ಕಮಾಡೆಂಟ್ ರೇವಣಪ್ಪ,ಪವನ್, ಮಹೇಶ ಕೆ, ಸಂತೋಷ,ಮಹೇಶ,ಪ್ರೀತಂ, ವಿನಾಯಕ,ಸುಮಂತ್,ಚಿನ್ನು ಸೇರಿದಂತೆ ಹಲವರಿದ್ದರು.
— ಸಂದೀಪ ಯು.ಎಲ್.