ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಕೋಗಳಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ಮಕ್ಕಳಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗಿದೆ.
ಸರ್ಕಾರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಏನೆಲ್ಲಾ ಯೋಜನೆಗಳನ್ನು ಹಾಕಿಕೊಂಡರೂ ಪ್ರಯೋಜನಕ್ಕೆ ಬಾರದಾಗಿದೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಬಾಲಕ ಬಾಲಕಿಯರ ಕಷ್ಟಗಳು ಒಂದಲ್ಲ ಎರಡಲ್ಲ ಸುಮಾರು ಇವೆ ಆದರೆ ಹೇಳಲು ಭಯಪಡಿಸುವರಂತೆ ಇಲ್ಲಿನ ಶಿಕ್ಷಕರು ಒಬ್ಬ ವಿದ್ಯಾರ್ಥಿ ಊಟ ಸರಿ ಇಲ್ಲ ಅಂದರೆ ಆ ಬಾಲಕನನ್ನು ಹೊಡೆದರಂತೆ ಮತ್ತು ಇಡೀ 300 ವಿದ್ಯಾರ್ಥಿಗಳಿಗೆ ಕೇವಲ ಒಂದೇ ಕೊಳಾಯಿ ಇದೆ ಬಾಲಕಿಯರಿಗೆ ಮಾತ್ರ ಶೌಚಾಲಯ ಇದೆ ಅದರಲ್ಲೂ ಸಹ ನೀರು ಒಂದು ಸಲ ಬಂದರೆ ಒಂದು ಸಲ ಬರುವುದಿಲ್ಲವಂತೆ ಇನ್ನೂ ಬಾಲಕರ ಶೌಚಾಲಯವೇ ಇಲ್ಲವಂತೆ ಮಕ್ಕಳು ಶೌಚಾಲಯಕ್ಕಾಗಿ ಹೋದರೆ ಹೊರಗಡೆ ಹೋಗಬೇಕು ಲೇಟಾದರೆ ಮತ್ತೆ ನಮಗೆ ಹೊಡೆಯುತ್ತಾರೆ ಮತ್ತು ಮೆನು ಚಾಟ್ ಪ್ರಕಾರ ಅನ್ನ ಸಾಂಬಾರ್ ಗುರುವಾರ ದಿನ ಕೊಡಬೇಕಿತ್ತು,ಆದರೆ ಪಲಾವ್ ನೀಡಿದ್ದಾರೆ ಒಂದು ದಿನ ಸರಿ ಇದ್ದರೆ ಇನ್ನೊಂದು ದಿನ ಸರಿ ಇರುವುದಿಲ್ಲ ಮೊಟ್ಟೆ ಕೊಟ್ಟು ಎರಡು ಮೂರು ವಾರಗಳಾದವು ಬಾಳೆಹಣ್ಣು ಶೇಂಗಾಚಿಕ್ಕಿ ಅವರಿಗೆ ತಿಳಿದಾಗ ಕೊಡುವರಂತೆ ಸುದ್ದಿ ಮಾಧ್ಯಮದವರು ಬಂದಿರುವುದರಿಂದ ಊಟಕ್ಕೆ ಈ ದಿನ ನಮ್ಮನ್ನು ಕೂರಿಸಿ ಊಟ ಮಾಡಿಸುತ್ತಿದ್ದಾರೆ ಎಂದು ಹೀಗೆಲ್ಲಾ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.
ಇದಲ್ಲದೆ ಪಕ್ಕದಲ್ಲಿ ಕಾಲೇಜು ಮತ್ತು ಶಾಲಾ ಕಟ್ಟಡದ ಮೇಲೆ ಅನೇಕ ದುಶ್ಚಟಗಳು ನಡೆಯುತ್ತವೆ ಇದೆಲ್ಲಾ ನೋಡಿ ಮಕ್ಕಳ ಮೇಲೆ ಪರಿಣಾಮ ಉಂಟು ಆಗಬಹುದು ಎಂದು ಪೋಷಕರು ಆತಂಕದಲ್ಲಿ ಇದ್ದಾರೆ ಇದಕ್ಕೆ ಕಡಿವಾಣ ಯಾವಾಗ ಎಂಬುವುದು ಪ್ರಶ್ನೆಯಾಗಿ ಉಳಿದಿದೆ ಈ ಶಾಲೆಗೆ ಸರಿಯಾದ ರೀತಿಯ ಕಾಂಪೌಂಡ್ ಇಲ್ಲ ಹೀಗಾಗಿ ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿ ಇಂತಹ ಶಾಲೆಯ ಬಗ್ಗೆ ಗಮನಹರಿಸಿ ಇದಕ್ಕೆ ಪರಿಹಾರ ಮಾಡಿ ಮತ್ತು ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕು ಒಟ್ಟಿನಲ್ಲಿ ಶಾಲೆ ಎಂದರೆ ದೇವಾಲಯ ಎಂದು ಕೈ ಮುಗಿದು ಒಳಗೆ ಬಾ ಎಂದೆಲ್ಲಾ ಹೇಳುತ್ತಾರೆ ಆದರೆ ಇಲ್ಲಿ ಸ್ವಚ್ಛತೆ ಇಲ್ಲದೆ ಮಕ್ಕಳಿಗೆ ಕಲಿಯಲು ಬೇಸರವಾಗಿದೆಯಂತೆ ಎಂದು ಇಲ್ಲಿನ ಸಾರ್ವಜನಿಕರು ಗ್ರಾಮದ ಸಂಘಟನಾಕಾರರು ತಿಳಿಸಿದರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಿ ಸರ್ಕಾರಿ ಶಾಲೆಯನ್ನು ಉಳಿಸಿ ಎಂದು ಸರ್ಕಾರ ಹೇಳುತ್ತದೆ ಆದರೆ ಇಲ್ಲಿಯ ವಾತಾವರಣ ಮಾತ್ರ ಅದಕ್ಕೆ ತದ್ವಿರುದ್ಧವಾಗಿ ಇರುವುದೇ ವಿಪರ್ಯಾಸ.
ವರದಿ-ವೈ.ಮಹೇಶ ಕುಮಾರ