ವಡಗೇರಾ:ಆಧ್ಯಾತ್ಮ ಹಾಗೂ ಧರ್ಮ ನಮ್ಮ ಭಾರತ ದೇಶದ ಪರಂಪರೆ ಹಾಗೂ ಸಂಕೇತವಾಗಿದೆ.
ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಸಹ ಅಧ್ಯಾತ್ಮ ಎಂಬುದು ಜೀವಂತವಾಗಿದೆ ಎಂದರೆ ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಂತಹ ಗ್ರಾಮದ ಗ್ರಾಮಸ್ಥರು ಸೇರಿ ಹಣ ಸಂಗ್ರಹ ಮಾಡಿ ಅಂದಾಜು 75 ಲಕ್ಷ ವೆಚ್ಚದ ದೇವಸ್ಥಾನ ನಿರ್ಮಿಸಲಿದ್ದಾರೆ ಎಂದರೆ ನಿಜಕ್ಕೂ ಅಭಿಮಾನದ ಸಂಗತಿಯೇ ಸರಿ ಅಂತಹ ಸಾಲಿಗೆ ಸಮೀಪದ ವಡಗೇರಾ ಗ್ರಾಮ ಸೇರಿದೆ.
ಗ್ರಾಮದ ಹಿರಿಯರೆಲ್ಲರೂ ಜಾತಿ,ಭೇದ ಮರೆತು ಅಂಭಾ ಭವಾನಿ ನೂತನ ದೇವಸ್ಥಾನ ನಿರ್ಮಿಸಲು ಯೋಜಿಸಿದ್ದು ಇನ್ನು ದೇವಸ್ಥಾನ ನಿರ್ಮಾಣಕ್ಕೆ ಹಣ ಸಂಗ್ರಹಿಸುವುದು ಹೇಗೆ ಎಂದು ಯೋಚಿಸುತ್ತಿದ್ದಂತೆ ಅಷ್ಟರಲ್ಲಿ ಹಿರಿಯರು ಪ್ರತಿ ಮನೆಯಿಂದ ಹಣ ಸಂಗ್ರಹ ಮಾಡೋಣ ಎಂದು ನಿರ್ಧರಿಸಿದ್ದಾರೆ ಸುಮಾರು ನಾಲ್ಕು ಸಾವಿರ ಹತ್ತಿರ ಮನೆಗಳನ್ನು ಹೊಂದಿರುವ ವಡಗೇರಾ ಗ್ರಾಮಸ್ಥರು ಪ್ರತಿ ಮನೆಗೆ 5 ಸಾವಿರ ಹಣ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.
ಇದೆ ಸಂದರ್ಭದಲ್ಲಿ ಸಿಂಗಾಪೂರನಲ್ಲಿ ಕಾರ್ಯನಿರ್ವಹಿಸುವ ಬನುರಾಜ ಔಕಿಮಠ ವೈಸ್ ಪ್ರೆಸಿಡೆಂಟ್ (ಜೆ ಪಿ ಎಮ್ ಸಿ) ಅವರು ಗ್ರಾಮಕ್ಕೆ ಆಗಮಿಸಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದು ಐವತ್ತು ಸಾವಿರದ ಓಂದು ರೂಪಾಯಿ ದೇಣಿಗೆಯಾಗಿ ನೀಡಿದರು ಅವರ ಜೊತೆಯಾಗಿ ಲಿಂಗಣ್ಣ ವಿಶ್ವಕರ್ಮ ಸಿನೀಯರ್ ಮ್ಯಾನೇಜರ್ (ಏ ಏನ್ ಜ್ಹಡ್) ಬೇಂಗಳೂರು ಅವರು ಐವತ್ತೋಂದು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದರು,ಈ ನೂತನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕಾಗಿ ಕಮೀಟಿಯ ಹಿರಿಯರು ಹಾಗೂ ಯುವಕರು ತಮ್ಮ ಮನೆಗೆಲಸ ಕೂಡಾ ಲೆಕ್ಕಿಸದೇ ದೇವಸ್ಥಾನ ನಿರ್ಮಿಸುವ ಜಾಗದಲ್ಲಿಯೇ ಬೀಡು ಬಿಟ್ಟಿದ್ದು ವಿಶೇಷ. ಕೆಲವರು ಹಣ ಸಂಗ್ರಹ ಮಾಡಲು ಹೋಗುತ್ತಿದ್ದಾರೆ,ಜನರು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.
ವರದಿ:ಶಿವರಾಜ ಸಾಹುಕಾರ್,ವಡಗೇರಾ