ಕಲ್ಬುರ್ಗಿ ಸುದ್ದಿ:ಡಿ.29 ರಂದು ಕನ್ನಡ ನಾಮಪಲಕ ಹೋರಾಟದಲ್ಲಿ ಬಂಧಿತರಾದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಯಡ್ರಾಮಿ ತಾಲೂಕ ಕಾರ್ಯಧ್ಯಕ್ಷರಾದ ಈರಣ್ಣ ಗೌಡ ಮಾಲಿ ಪಾಟೀಲ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಕನ್ನಡ ನಾಡು ನುಡಿ ಜಲಕ್ಕಾಗಿ ಹೋರಾಟ ಮಾಡುವ ಹೋರಾಟಗಾರರನ್ನು ಬಂಧಿಸಿರುವುದು ಸರ್ಕಾರದ ಈ ಸರ್ವಾಧಿಕಾರದ ಧೋರಣೆ ಸರಿಯಲ್ಲ ಈ ಕೂಡಲೇ ಕರ್ನಾಟಕದಲ್ಲಿ ಸರ್ಕಾರಕ್ಕೆ ಧಮ್ಮುಇದ್ದರೆ ಕನ್ನಡ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಆದೇಶ ನೀಡುವಂತೆ ಸರಕಾರಕ್ಕೆ ಸವಾಲು ಹಾಕಿದ್ದಾರೆ ಅದೇ ರೀತಿಯಾಗಿ ಕನ್ನಡಪರ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಕರ್ನಾಟಕಕ್ಕೆ ಆದ ಅನ್ಯಾಯವನ್ನು ಸರ್ಕಾರವೇ ಸರಿಪಡಿಸಬೇಕು. ಕನ್ನಡಿಗರಿಗಾಗಿ ವಿಶೇಷ ಉದ್ಯೋಗಗಳನ್ನು ಸೃಷ್ಟಿಸಬೇಕು ಅದು ಬಿಟ್ಟು ಹೋರಾಟಗಾರರನ್ನು ಹತ್ತಿಕುವಂತಹ ಕೆಲಸಗಳನ್ನು ಬಿಟ್ಟು ಕನ್ನಡಿಗರಿಗೆ ನ್ಯಾಯವನ್ನು ಒದಗಿಸಬೇಕು ಕನ್ನಡಿಗರಾಗಿ ನಾವು ನಮ್ಮ ಭಾಷೆಯನ್ನು ಆರಾಧಿಸುತ್ತೇವೆ ಬೇರೆ ಭಾಷೆಗಳಿಗೆ ನಾವು ಗೌರವಿಸುತ್ತೇವೆ ಕನ್ನಡ ಭಾಷೆಗೆ ನಾಡು ನುಡಿಗೆ ಧಕ್ಕೆ ಬಂದರೆ ನಾಡಿನ ಸಲುವಾಗಿ ನಮ್ಮ ರಕ್ತವನ್ನೆ ಸುರಿಸಲು ನಾವು ಸಿದ್ಧರಿದ್ದೇವೆ ಈ ಕೂಡಲೇ ಕನ್ನಡಪರ ಹೋರಾಟಗಾರ ಟಿ.ಎ ನಾರಾಯಣಗೌಡ ಅವರನ್ನು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಉಗ್ರವಾದಂತಹ ಹೋರಾಟವನ್ನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈರಣ್ಣ ಗೌಡ ಮಾಲಿ ಪಾಟೀಲ್ ಜಯ ಕರ್ನಾಟಕ ತಾಲೂಕ ಕಾರ್ಯಧ್ಯಕ್ಷರು ಯಡ್ರಾಮಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸರ್ಕಾರಕ್ಕೆ ಖಡಕ್ಕಾಗಿ ಎಚ್ಚರಿಕೆ ನೀಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.