ಚಿಟಗುಪ್ಪ: ಶರಣ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದವನ್ನು ಸಂರಕ್ಷಿಸಲು, ಸಂಶೋಧನೆ ನಡೆಸಲು ಮತ್ತು ಪ್ರಸಾರ ಮಾಡುವ ಉದ್ದೇಶ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ ಎಂದು ಜಿಲ್ಲಾಧ್ಯಕ್ಷ .
ಶಂಭುಲಿಂಗ ಕಾಮಣ್ಣ ನುಡಿದರು.
ತಾಲೂಕಿನ ಉಡಬಾಳವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಬಸವಾದಿ ಶರಣರು 12ನೇ ಶತಮಾನದಲ್ಲಿ ರಚನೆ ಮಾಡಿರುವ ವಚನಗಳಲ್ಲಿ ಪ್ರಸ್ತುತ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದು, ಯುವ ಪೀಳಿಗೆ ವಚನಗಳನ್ನು ಆಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ನಿಕಟ ಪೂರ್ವ ಶಸಾಪ ಅಧ್ಯಕ್ಷ, ನೂತನ ಜಿಲ್ಲಾ ಗೌರವ ಕಾರ್ಯದರ್ಶಿ ಯಾಗಿ ಪದಗ್ರಹಣ ಜವಾಬ್ದಾರಿ ಪಡೆದುಕೊಂಡು ಮಾತನಾಡಿದ ಸಾಹಿತಿ ಸಂಗಮೇಶ ಎನ್ ಜವಾದಿ ಶರಣರ ವಿಚಾರಧಾರೆಗಳನ್ನು ನಾಡಿಗೆ ಪ್ರಚುರಪಡಿಸುವ ಉದ್ದೇಶದಿಂದ ಶ್ರೀ ರಾಜೇಂದ್ರಸ್ವಾಮಿಗಳಿಂದ ಸ್ಥಾಪಿತವಾಗಿರುವ ಶರಣ ಸಾಹಿತ್ಯ ಪರಿಷತ್ ವಚನಗಳ ಸಂರಕ್ಷಣೆ ಹಾಗೂ ಯುವ ಜನಾಂಗಕ್ಕೆ ವಚನಗಳ ಸಾರಗಳನ್ನು ತಿಳಿಸುವ ಕೆಲಸ ಚಾಚು ತಪ್ಪದೆ ಮಾಡಲಾಗುತ್ತಿದೆ. ಪತಿಯೊಬ್ಬ ಶರಣರ ಮೌಲ್ಯವನ್ನು ತಿಳಿಸಿ, ಶರಣ ವಿಚಾರಧಾರೆಗಳು ವಿಶ್ವ ವ್ಯಾಪಿಯಾಗುವಂತೆ ಅನುಷ್ಠಾನ ಗೈಯಲಾಗುತ್ತಿದೆ. ನನ್ನ ಅವಧಿಯಲ್ಲಿ ತಾಲೂಕಿನ ತುಂಬೆಲ್ಲ ಶರಣ ಸಾಹಿತ್ಯ ಪರಿಷತ್ತಿನ ವಿಚಾರಗಳು ತಿಳಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗಿದೆ. ಮುಂದೆಯೂ ನಿರಂತರವಾಗಿ ಮಾಡುತ್ತೇವೆ ಎಂದರು.
ನೂತನ ಶಸಾಪ ಅಧ್ಯಕ್ಷರಾಗಿ ಪದಗ್ರಹಣ ಜವಾಬ್ದಾರಿ ವಹಿಸಿಕೊಂಡು ಶರಣೆ
ಇಂದುಮತಿ ಗಾರಂಪಳ್ಳಿ ಅಕ್ಕ ಮಾತನಾಡಿ ಬಸವಾದಿ ಶರಣ ವಚನಗಳು ಅನುಭಾವದ ನುಡಿಗಳಾಗಿವೆ. ಸಮಾಜದಲ್ಲಿದ್ದ ಅಂಕುಡೋಕುಗಳನ್ನು ತಿದ್ದುವ ಸಲುವಾಗಿ ಶರಣ ಸಾಹಿತ್ಯ ಪರಿಷತ್ತು ಜನ್ಮ ತಾಳಿದೆ, ರಾಜ್ಯಾದ್ಯಂತ ಕೆಲಸ ಮಾಡುತ್ತಿದೆ. ಅದೇ ರೀತಿ ತಾಲೂಕಿನಲ್ಲಿ ಸಹ ಶರಣ ಸಾಹಿತ್ಯ ಪರಿಷತ್ತು ಬೆಳೆಸುವ , ಪ್ರಚಾರ ಮಾಡುವ ನಿಟ್ಟಿನಲ್ಲಿ ಹಗಲಿರುಳು ಕೆಲಸ ಮಾಡುತ್ತೇವೆ. ಶರಣರ ವಿಚಾರಧಾರೆಗಳು ಪ್ರತಿಯೊಬ್ಬರ ಮನಸ್ಸು ಮನೆಗಳಿಗೆ ಮುಟ್ಟಿಸುವಂತಹ ಕೆಲಸ ಚಾಚು ತಪ್ಪದೇ ಮಾಡುತ್ತೇವೆ
ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಶರಣೆ ಉಷಾ ಮಿರ್ಚೆ,
ಶಸಾಪ ಹುಮನಾಬಾದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಂಗಮಕರ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶರಣೆ ದೇವಕಿ ಮಾಲಿ ಪಾಟೀಲ್ ಸಮಾರಂಭದ ಮಾತನಾಡಿದರು.
ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಹಣಮಂತ ಭೋವಿ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶೆಟ್ಟಿಗಾರ್ ಸೇರಿದಂತೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳಾದ ಅನಿಲಕುಮಾರ ಸಿನಿಗಿರಿ,ರಾಜು ದೇವಣಿ, ಚಂದ್ರಶೇಖರ ತಂಗಾ, ಮನೋಹರ್ ಜಕ್ಕಾ, ಮಹಾರುದ್ರಪ್ಪ ಅಣದೂರ, ಶೌರ್ಯ ಜವಾದಿ, ಶಾಂತಪ್ಪ ದಡಿವಾಳ, ಶಾಂತಪ್ಪ ದುಬಲಗುಂಡಿ,
ಗಾಯತ್ರಿ ಬುದ್ಧಾ, ಭಾರತಿ ಪಾಟೀಲ, ಹೇಮಾ ಬಿಡಪ್ಪ, ಶೋಭಾವತಿ ಸೊಂತ, ಶೆಶಿಕಲಾ ಬಿಡಪ್ಪ, ವಿಜಯಲಕ್ಷ್ಮಿ ಮಾಲಿ ಪಾಟೀಲ್, ಸಿದ್ದಮ್ಮಾ ಮಠಪತಿ, ಶ್ರಾವ್ಯ ಜವಾದಿ ಉಪಸ್ಥಿತರಿದ್ದರು.