ಕಲಬುರಗಿ:ಕರ್ನಾಟಕದಲ್ಲಿ ಪೆಬ್ರವರಿ 28 ರ ಒಳಗೆ ಎಲ್ಲಾ ವ್ಯಾಪಾರಿ ಉದ್ಯಮಿಗಳು ಮತ್ತು ಮಾಲ್ ಗಳ ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದ್ದು ಸ್ವಾಗತಾರ್ಹ ಎಂದು ಕರವೇ(ಕಾವಲುಪಡೆ) ರಾಜ್ಯ ವಕ್ತಾರರಾದ ಮಂಜುನಾಥ ನಾಲವಾರಕರ್ ಮನವಿ ಮಾಡಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇಮಕ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಕನ್ನಡ ಭಾಷೆಯನ್ನು ಉಳಿಸಲು,ಬೆಳೆಸಲು ಮತ್ತು ರಕ್ಷಿಸಲು ಪ್ರಾಧಿಕಾರದ ಜವಾಬ್ದಾರಿ ಹೆಚ್ಚಿದೆ.ಇಂತಹ ಸಂದರ್ಭದಲ್ಲಿ ಪ್ರಾಧಿಕಾರ ಅಧ್ಯಕ್ಷರ ನೇಮಕ ಮಾಡದೇ ವಿಳಂಬ ಮಾಡುತ್ತಿದ್ದು,ಕೂಡಲೇ ಪ್ರಾಧಿಕಾರ ಅಧ್ಯಕ್ಷರ ನೇಮಕ ಮಾಡುವ ಮೂಲಕ ಎಲ್ಲಾ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತವಾದ ನಿರ್ದೇಶನವನ್ನು ಕರ್ನಾಟಕದಲ್ಲಿ ಕನ್ನಡ ಕಡ್ಡಾಯವೆಂದು ನಿಯಮವನ್ನು ಜಾರಿಗೊಳಿಸಬೇಕು.ಅಲ್ಲದೇ ಎಲ್ಲಾ ಸರಕಾರಿ ಕಚೇರಿಗಳಲ್ಲಿ,ಪೋಲಿಸ್ ಠಾಣೆಗಳಲ್ಲಿ ಈಗಾಗಲೇ ಬಳಸುತ್ತಿರುವ ಸೀಲ್ ಗಳು ಆಂಗ್ಲ ಭಾಷೆಯಲ್ಲಿ ಬಳಕೆಯಾಗುತ್ತಿರುವುದು ಖಂಡನೀಯ.ಕೂಡಲೇ ಕನ್ನಡ ಭಾಷೆಯಲ್ಲಿ ಸೀಲ್ ಗಳ ಬಳಕೆಗೆ ಸೂಕ್ತ ಆದೇಶ ನೀಡುವ ಮೂಲಕ ಕರ್ನಾಟಕದಲ್ಲಿ ಕನ್ನಡ ಕಡ್ಡಾಯವಾಗಲು ಕರ್ನಾಟಕ 50 ರ ಸಂಭ್ರಮಾಚರಣೆ ಸಂದರ್ಭದಲ್ಲಿ ಕನ್ನಡ ಉಳಿಸಲು ಮತ್ತು ಕನ್ನಡ ರಕ್ಷಿಸಲು ಸರಕಾರ ಬದ್ದವಾಗಬೇಕು ಎಂದು ನಾಲವಾರಕರ್ ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರು ಕನ್ನಡ ಕಡ್ಡಾಯದ ಬಗ್ಗೆ ಹೋರಾಟ ಮಾಡುವ ಸಂದರ್ಭದಲ್ಲಿ ಅವರನ್ನು ರಾಜ್ಯ ಸರ್ಕಾರ ಬಂಧಿಸುವ ಕ್ರಮ ಸಮಮಂಜಸವಲ್ಲ.ಏಕೆಂದರೆ ರಾಜ್ಯ ಸರಕಾರವೇ ಫೆಬ್ರವರಿ 28ರ ಒಳಗೆ ಎಲ್ಲಾ ಕಡೆ ಕನ್ನಡ ನಾಮ ಫಲಕಗಳು ಅಳವಡಿಸಿಬೇಕೆಂದು ಆದೇಶ ನೀಡಿದ್ದು, ಅದರ ಪ್ರಯುಕ್ತ ನಾರಾಯಣ ಗೌಡರು ಹೋರಾಟ ಮಾಡುವುದು ತಪ್ಪಾ?ಎಂದು ಅವರು ಪ್ರಶ್ನಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.