ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಎಲ್ಲ ರೈತರ ತಮ್ಮಲ್ಲಿ ಬೆಳೆಸಾಲ ತೆಗೆದುಕೊಂಡು ಕೆಲವೊಂದಿಷ್ಟು ರೈತರು ಸರಿಯಾಗಿ ಮಳೆಯಾಗದೇ ಬೆಳೆ ಬಾರದೆ ಇರುವುದರಿಂದ ಸಾಲವನ್ನು ಕಟ್ಟಲು ಆಗುತ್ತಿಲ್ಲಾ ಅವರಿಗೆ ಬ್ಯಾಂಕ್ ನಿಂದ ಬಂದಂತಹ ಸೌಲಭ್ಯವನ್ನು ತೊಂದರೆಯಾಗದಂತೆ ಅವರ ಖಾತೆಗೆ ಜಮೆ ಮಾಡುವುದಾಗಿ ಬ್ಯಾಂಕ್ ಗಳಿಗೆ ಮನವಿ.
ತಾಲೂಕಿನ ಎಲ್ಲ ರೈತರ ತಮ್ಮಲ್ಲಿ ಬೆಳೆಸಾಲ ತೆಗೆದುಕೊಂಡು ರೈತರು ಸರಿಯಾಗಿ ಮಳೆಯಾಗದೇ ಬೆಳೆ ಬಾರದೆ ಇರುವುದರಿಂದ ಸಾಲವನ್ನು ಕಟ್ಟಲು ಆಗುತ್ತಿಲ್ಲಾ ಈ ವರ್ಷ ಮಳೆ ಕೂಡಾ ಆಗದೇ ಬರಗಾಲ ಬಿದಿರುತ್ತದೆ ಹೀಗಾಗಿ ರೈತರಿಗೆ ಬರುವಂತಹ ಪಿ.ಎಮ್.ಕಿಸಾನ ಯೋಜನೆ,ಗೃಹ ಲಕ್ಷ್ಮೀ ಯೋಜನೆ ಇರಬಹುದು.ವೃದ್ರಾಪ್ಯ ವೇತನ,ಬೆಳೆ ಹಾನಿ,ವಿಧವಾ ವೇತನ ಹಾಗೂ ಸರಕಾರದಿಂದ ಬಂದಂತಹ ಯೋಜನೆಗಳ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಅವರಿಗೆ ಬಂದಂತಹ ಹಣವನ್ನು ಅವರ ಖಾತೆಗೆ ಜಮಾ ಮಾಡುವ ಕೆಲಸ ಬ್ಯಾಂಕ್ ನಿಂದ ಆಗಬೇಕು ಮತ್ತು ನೀವು ಅವರಿಗೆ ಪದೆ ಪದೆ ಸಾಲ ಕೇಳುತ್ತಿದ್ದರಿಂದ ಈಗಾಗಲೇ ತಾಲೂಕಿನಲ್ಲಿ 2 ಜನರು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ.
ಆದ್ದರಿಂದ ತಾವುಗಳು ಯಾವುದೇ ರೈತರಿಗೆ ತೊಂದರೆ ಮಾಡದಂತೆ ಅವರಿಗೆ ಬಂದಂತಹ ಪರಿಹಾರ ಹಣವನ್ನು ಅವರ ಖಾತೆಗೆ ಜಮೆ ಮಾಡಬೇಕು ಎಂದು ತಾಲೂಕಿನ ರೈತ ಸಂಘದಿಂದ ಬ್ಯಾಂಕ್ ಮ್ಯಾನೇಜರಲ್ಲಿ ಮನವಿ ನೀಡಿದರು.
ಅವರಿಗೆ ಬೆಳೆ ಬಾರದೇ ಕಾರಣ ಅವರಿಗೆ ಬೆಳೆ ಸಾಲವನ್ನು ಸಹ ನಿಡಬೇಕು ಅವರ ಮನೆಗೆ ಹೋಗಿ ತೊಂದರೆ ಕೊಡಬಾರದು ಅಂತಾ ತಮ್ಮಲ್ಲಿ ವಿನಂತಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ರೈತ ಸಂಘ ಅಧ್ಯಕ್ಷ ಆನಂದ ಕೆಲಗಿನಮನಿ ಉಪಾಧ್ಯಕ್ಷ ಶಂಕರಗೌಡ ಪಾಟೀಲ,ಗಿರಿಧರಗೌಡ ಪಾಟೀಲ,ಮಂಜುನಾಥ ಕಂಕಣವಾಡ,ಚಂದ್ರು ಬನ್ನಿಮಟ್ಟಿ,ಹರೀಶ ಮೇಟಿ,ದಯಾನಂದ ಮೇಣಸಿನಕಾಯಿ,ಅಶೋಕ ಮಡ್ಲಿ,ಗದಿಗೆಪ್ಪಗೌಡ ಪಾಟೀಲ,ನಿಂಗನಗೌಡ್ರ ಯಗನಗೌಡ್ರ,ಉಮೇಶ ಗಾಳಿಗೌಡ್ರ ಹಾಗೂ ತಾಲೂಕಿನ ರೈತ ಮುಖಂಡರು ಉಪಸ್ಥಿತರಿದ್ದರು.
ವರದಿ-ಮಂಜುನಾಥ ಪಾಟೀಲ,ಹಾವೇರಿ