ವಡಗೇರಾ:ಗೊಂಡ,ಕುರುಬ,ಜೇನು ಕುರುಬ,ಕಾಡು ಕುರುಬ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಗೊಂಡ ಕುರುಬ ಸಂಘದ ವಡಗೇರಾ ತಾಲೂಕು ವತಿಯಿಂದ ಇಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಎಸ್.ಟಿ ಮೀಸಲಾತಿಗಾಗಿ ನಿರಂತರವಾಗಿ ಹೋರಾಟಗಳು ಸಮಾವೇಶಗಳು ನಡೆಸುವ ಮೂಲಕ ಸರಕಾರಕ್ಕೆ ಮನವಿ ಮಾಡಿದಾಗ ಕೇಂದ್ರ ಸರ್ಕಾರ ಎಸ್.ಟಿ ಮೀಸಲಾತಿಗಾಗಿ ಕುಲ ಶಾಸ್ತ್ರ ಅಧ್ಯಯನಕ್ಕೆ ಆದೇಶ ಮಾಡಿತ್ತು ಆದರೆ ಕೇಂದ್ರ ಸರ್ಕಾರ ಆದೇಶ ನೀಡುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಆರೋಪಿಸಿದರು ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪಟ್ಟಣದ ಹೊನ್ನಾಯ ತಾತ ದೇವಸ್ಥಾನದಿಂದ ಮೆರವಣಿಗೆ ಮೂಲಕ ತಹಸಿಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ತಹಶೀಲ್ದಾರರ ಕಚೇರಿ ಒಳಗೆ ಕುರಿಗಳನ್ನು ನುಗ್ಗಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೂ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದರು ತಿಂಥಣಿ ಬ್ರಿಜಿನ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಪೀಠದ ಕಿರಿಯ ಶ್ರೀಗಳಾದ ಲಿಂಗಬೀರ ದೇವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು ಯಾದಗಿರಿ ಬೀದರ್ ಕಲಬುರ್ಗಿ ಜಿಲ್ಲೆಗಳು ಕುರುಬರನ್ನು ಗೊಂಡ ಪರ್ಯಾಯವಾಗಿ ಪರಿಗಣಿಸಲು 1997 ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2014ರ ಸಿದ್ದರಾಮಯ್ಯನವರ ಸರ್ಕಾರ ಕುಲಶಾಸ್ತ್ರ ಅಧ್ಯಯನದ ವರದಿಯ ಪೂರಕ ದಾಖಲೆಗಳನ್ನು ಮೂರು ಬಾರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು ಎಂದರು. ಅಲೆಮಾರಿ ಸಂಚಾರಿಗಳಾಗಿ ಊರೂರು ಸುತ್ತುತ್ತಿದ್ದ ಗೊಂಡ ಕುರುಬರನ್ನು ಆಗಿನ ಬ್ರಿಟಿಷ್ ಕಾಲದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು ಅಲ್ಲದೆ ಡಾ.ಬಿ ಆರ್.ಅಂಬೇಡ್ಕರ್ ರವರು ಸಹ ಸಂವಿಧಾನದಲ್ಲಿ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು ಎಂದು ಹೇಳಿದರು ಕುರುಬ ಸಮಾಜದ ಹಿರಿಯ ಮುಖಂಡರಾದ ಸಿದ್ದಣ್ಣಗೌಡ ಕಾಡಂನೂರ ಮಾತನಾಡಿದರು ನಮ್ಮ ಸಮುದಾಯ ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದೆ ಆದರೆ ಎಲ್ಲಾ ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸುವಲ್ಲಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿವೆ ಎಂದರು ನಾವುಗಳು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ನಾವುಗಳು ಒಗ್ಗಟ್ಟಿನಿಂದ ಹೊರಟ ಮಾಡಿದಾಗ ಮಾತ್ರ ನಮಗೆ ಜಯ ಸಿಗುತ್ತೆ ಕೆಲವರು ನಾವುಗಳು ಸುಳ್ಳು ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಆದರೆ ಅದು ಶುದ್ಧ ಸುಳ್ಳು ನಾವು ನ್ಯಾಯಯುತವಾದ ಬೇಡಿಕೆಗೆ ಹೋರಾಟ ಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಕೂಡಾ ಪ್ರತಿಯೊಬ್ಬರೂ ಇದೇ ರೀತಿಯಾಗಿ ಬೆಂಬಲಿಸುವಂತೆ ಕರೆ ನೀಡಿದರು ಕುರುಬ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ವಿಶ್ವನಾಥ್ ನೀಲಹಳ್ಳಿ ಮಾತನಾಡಿದರು ನಾವುಗಳು ಅನೇಕ ಬಾರಿ ಸರಿಯಾದ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕೂಡ ಸ್ಪಂದಿಸಿಲ್ಲ ಲೋಕಸಭಾ ಸದಸ್ಯರು ಕೂಡ ಕೊಟ್ಟ ಮಾತಿಗೆ ತಪ್ಪಿದ್ದಾರೆ ಕೂಡಲೇ ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು ಈ ಪ್ರತಿಭಟನೆಯಲ್ಲಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ.ಮರಿಗೌಡ ಹುಲಕಲ.ತಾಲೂಕು ಅಧ್ಯಕ್ಷ ಸಾಯಬಣ್ಣ ವರಕೇರಿ.ಚಂದ್ರಶೇಖರ್ ವಾರದ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪಾರ್ವತಮ್ಮ ಕಾಡಂನೂರ.ಮರೇಪ್ಪ ಬಿಳಾರ. ಸಿದ್ದರಾಮಪ್ಪ ಅರಿಕೇರಾ. ಸಾಯಬಣ್ಣ ಕೆಂಗೂರಿ .ಸಿದ್ದಪ್ಪ ಸಂಕಿನ. ಹಣಮಂತರಾಯ ಗೌಡ ಪೊಲೀಸ್ ಪಾಟೀಲ್ ತೇಕರಾಳ .ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾಂತಮ್ಮ ಕರಿಕಳ್ಳಿ.ಪ್ರಭು ವಾರದ. ಮರೇಪ್ಪ ಜಡಿ. ಮಲ್ಲಯ್ಯ ಕಸಬಿ. ದೇವಿಂದ್ರಪ್ಪ ಕಡೇಚೂರ. ಮಲ್ಲಿಕಾರ್ಜುನ ಕರ್ಕಳ್ಳಿ. ಚನ್ನಕೇಶವ ಗೌಡ ಬಾಣತಿಹಾಳ. ಹೊನ್ನಪ್ಪ ಮುಸ್ಟೂರು.ಶಿವು ಪೂಜಾರಿ ಹೈಯಾಳ. ಭಾಗಣ್ಣ ತಡಿಬಿಡಿ. ಮರಿಲಿಂಗಪ್ಪ ಕುಮನೂರ. ಬೀರೇಶ್ ಚಿರೇತೆನೂರ. ಹಣಮಂತರಾಯ ಜಡಿ. ನಂದಪ್ಪ ಗೌಡ ಹೊರಟೂರ. ಹಣಮಂತ ಪೂಜಾರಿ ಕಂದಳ್ಳಿ. ಹೊನ್ನಪ್ಪ ಕಡೇಚೂರ. ಅನಿಲ್ ಗೌಡ ತೇಕರಾಳ .ಬೀರಲಿಂಗ ಮುಂಡರಗಿ. ವೆಂಕುಬ ತುರ್ಕನ ದೊಡ್ಡಿ. ಮಾಳಿಂಗರಾಯ ಕೊಂಕಲ. ಶರಣಗೌಡ ಕ್ಯಾತನಾಳ . ಲಚಮಣ್ಣ ನಸಲಾಯಿ.ಮಲ್ಲಿಕಾರ್ಜುನ್ ಜೋಳದಡಗಿ.ಅಪ್ಪಾಜಿ ಕಲ್ಲಪ್ಪನೂರ. ರೆಡ್ಡಪ್ಪ ಜಡಿ. ವಿಜಯ್ ಕ್ಯಾತನಾಳ. ಮೌನೇಶ್ ಪೂಜಾರಿ. ಶಿವಕುಮಾರ್ ಕೊಂಕಲ.ಮಲ್ಲಿಕಾರ್ಜುನ್ ಗೋಸಿ. ಗಡ್ಡೆಲಿಂಗ .ಎಸ್. ಬೆಂಡೆಬೆಂಬಳಿ. ಹೊನ್ನಪ್ಪ ಯಡ್ಡಳ್ಳಿ.ಮಾದೇವಪ್ಪ ಗೋನಾಲ. ಬಸವರಾಜ ಗೊಂದೇನೂರ. ಸಿದ್ದಪ್ಪ ತಮಣ್ಣೂರ. ತಾಲೂಕಿನ ಸಮಾಜದ ಬಂಧುಗಳು ಮಹಿಳೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ