ಕಾರವಾರ:ಕಾರವಾರದಿಂದ ಕೆರವಡಿ,ಮಲ್ಲಾಪುರ ಗ್ರಾಮಕ್ಕೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನ ಆಕ್ಸೆಲ್ ಬ್ಲೇಡ್ ತುಂಡಾಗಿ ಬಿದ್ದ ಘಟನೆ ಹಬ್ಬುವಾಡ ರಸ್ತೆಯಲ್ಲಿ ನಡೆದಿದೆ.ಸುಮಾರು 40 ಮಂದಿ ಪ್ರಯಾಣಿಕರು ಹೊತ್ತು ತೆರಳುತ್ತಿದ್ದ ಬಸ್ ನ ಹಿಂಬದಿ ಎಕ್ಸೆಲ್ ಬ್ಲೇಡ್ ಏಕಾ ಏಕಿ ತುಂಡಾಗಿ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪಿತು ಇದನ್ನು ಕಂಡ ಸಾರ್ವಜನಿಕರು ಉರುಳುತಿದ್ದ ಬಸ್ ನ್ನು ಹಿಡಿದು ನಿಲ್ಲಿಸಲು ಹರ ಸಾಹಸ ಪಟ್ಟಿದಾರೆ ಈ ಘಟನೆಯಿಂದಾಗಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.
