ಸೊರಬ:ತಾಲೂಕಿನ ಜಡೆ ಹೋಬಳಿ ಶಕುನವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಂಕ್ರಿಕೊಪ್ಪ ಗ್ರಾಮದ ಕಾಶಿಬಾಯಿ ಕೃಷ್ಣಮೂರ್ತಿ ನಾಡಿಗೇರ್ ಎನ್ನುವ ರೈತರ ವಿರುದ್ಧವಾಗಿ ಪಹಣಿ ಕಾಲಂ ನಂ.6 ರಲ್ಲಿರುವ ಮೂಲ ಮಾಲೀಕರ ಹೆಸರು ತಿದ್ದಿಸಲು ಹೋರಾಟ ಮಾಡಿದ ಮಹೇಶ್ ಶಕುನವಳ್ಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಹೆಚ್.ಬಸವರಾಜ್ ಹಶ್ವಿ ಒತ್ತಾಯಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ನಂತರ ತಹಸೀಲ್ದಾರ್ ಹುಸೇನ್ ಸರಾಕವಸ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಈ ನಾಡಿನ ಶೋಷಿತ ಸಮುದಾಯದ ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತುತ್ತಾ ಬಂದಿರುತ್ತದೆ. 1974-75ನೇ ಸಾಲಿನಲ್ಲಿ ಸ್ಥಾಪಿತವಾಗಿ ಈ ಸಂಘಟನೆ ಇದೇ ಜನವರಿ 24 ಕ್ಕೆ 50 ವರ್ಷಗಳು ತುಂಬುತ್ತವೆ. ಇಂತಹ ಜನ ಮೆಚ್ಚುಗೆಯ ಸಂಘಟನೆಯ ಹೆಸರನ್ನು ಹೇಳಿಕೊಂಡ ಕೆಲವರು ಜಮೀನಿನ ಮೂಲ ಮಾಲೀಕರ ಹೆಸರನ್ನು ತಿದ್ದುಪಡಿ ಮಾಡಿಸಲು ಹೋರಾಟ ನಡೆಸಿದ್ದಾರೆ. ಇವರಿಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಗೂ ಯಾವುದೇ ಸಂಬಂಧವಿಲ್ಲ ಇಂತವರ‍್ಯಾರು ನಮ್ಮ ಸಂಘಟನೆಯವರಲ್ಲ.
ಮೂಲ ಮಾಲೀಕರಲ್ಲದ ಅಕ್ರಮವಾಗಿ ನಮೂದಾದ ಪಹಣಿ ಕಾಲಂ 12 ರಲ್ಲಿರುವ ನಕಲಿ ಗೇಣಿದಾರರು ಹಾಗೂ ಮೂಲ ಮಾಲೀಕರಿಗೆ ಗೇಣಿ ಕಂದಾಯ ಸಂದಾಯ ಮಾಡದಂತಹವರ ಹೆಸರನ್ನು ವಜಾಗೊಳಿಸಬೇಕು. ಜಮೀನಿನ ಮೂಲ ಮಾಲೀಕರಿಗೆ 1958 ರಲ್ಲಿ ಪಹಣಿಯಲ್ಲಿ ಹೆಸರು ನಮೂದಾದ ದಾಖಲೆ ಇದ್ದು, ಆದರೂ ಜಡೆ ನಾಡ ಕಛೇರಿಯವರು ಪಹಣಿ ಕಾಲಂ ನಂ.6 ಮತ್ತು 9 ನ್ನು ತಿದ್ದುಪಡಿ ಮಾಡಬಹುದೆಂದು ವರದಿ ಕೊಟ್ಟಿರುವುದು ಅನುಮಾನಾಸ್ಪದವಾಗಿದೆ.
ಶಕುನವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಂಕ್ರಿಕೊಪ್ಪ ಗ್ರಾಮದಲ್ಲಿರುವ ಸರ್ವೆ ನಂ.3, 4, 5, 6, 24, 29, 30, 47 ರಲ್ಲಿ ಮೂಲ ಮಾಲೀಕರಲ್ಲದ ಅಕ್ರಮವಾಗಿ ನಮೂದಾದ ಪಹಣಿಯ ಕಾಲಂ ನಂ.12 ರಲ್ಲಿರುವ ನಕಲಿ ಗೇಣಿದಾರರೆಂದು ಯಾವುದೇ ಮೂಲ ಮಾಲೀಕರಿಗೆ ಗೇಣಿ ಕಂದಾಯ ಸಂದಾಯ ಮಾಡದಂತಹವರ ಹೆಸರನ್ನು ವಜಾಗೊಳಿಸಬೇಕು.
ಈ ಪ್ರಕರಣವನ್ನು ಕೂಲಂಕುಷವಾಗಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಪಹಣಿ ಕಾಲಂ 12 ರಲ್ಲಿರುವ ಮೂಲ ಮಾಲೀಕರಲ್ಲದವರ ಹೆಸರನ್ನು ತೆಗೆದು ತಿದ್ದುಪಡಿ ಮಾಡಬೇಕು. ಇಲ್ಲದಿದ್ದರೆ ತಾಲೂಕು ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಮೇಶ ಕೃಷ್ಣಮೂರ್ತಿ ನಾಡಿಗೇರ್, ಪ್ರವೀಣ್ ಜೆ.ಎಂ, ಯಲ್ಲಪ್ಪ ಕೋರೇರ, ಅಶೋಕ, ವಿನಾಯಕ, ಮಂಜುನಾಥ, ಅಜ್ಜಯ್ಯ, ಮಂಜಪ್ಪ, ಭರಮಣ್ಣ, ನಿಂಗಪ್ಪ, ಗುಡ್ಡಪ್ಪ, ಸದಾನಂದ ಸೇರಿದಂತೆ ಹಲವರು ಇದ್ದರು.
-ಸಂದೀಪ ಯು.ಎಲ್