ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮಹಾನ್ ಶಿಲ್ಪಿ ಜಕಣಾಚಾರಿ ಕೆತ್ತಿದ ಶಿಲ್ಪ ಬೇಲೂರಿನಲ್ಲಿ ಬೆರಗುಗೂಳಿಸುತ್ತವೆ-ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ನಗರ ಸಭೆ ಹಾಗೂ ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಯಾದಗಿರಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ನಗರದ ವಿದ್ಯಾಮಂಗಲ ಕಾರ್ಯಾಲಯ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಜನವರಿ 01ರ ಸೋಮವಾರ ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಯಾದಗಿರಿ ವಿಧಾನಸಭಾ ಶಾಸಕ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ,
ಇದಕ್ಕೂ ಮುಂಚೆ ಜಯಂತಿಯ ಮೆರವಣಿಗೆ ವಿಶ್ವಕರ್ಮ ವೃತ್ತದಿಂದ ತಹಸೀಲ್ದಾರರ ಕಛೇರಿಯ ಮಾರ್ಗವಾಗಿ ವಿದ್ಯಾಮಂಗಲ ಕಾರ್ಯಲಯದ ವರೆಗೆ ಅದ್ಧೂರಿಯಾಗಿ ಜರಗಿಸಲಾಯಿತು.
ಶ್ರೀ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ಬೇಲೂರಿನಲ್ಲಿ ಒಳ್ಳೆಯ ಮೂರ್ತಿಗಳ ಕೆತ್ತನೆಗಾಗಿ ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟರು,ಮಹಾನ್ ಶಿಲ್ಪಿ ಜಕಣಾಚಾರಿ ಅವರು ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಅವರು ಕಂಡರು ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಎಂಬ ಶಿಲ್ಪಿಗೆ ಮಾತನ್ನಿತ್ತರು, ಆ ಶಿಲ್ಪವನ್ನು ಪರೀಕ್ಷಿಸಿದ ನಂತರ,ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ಅವರಿಬ್ಬರೂ ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು. ಈ ಸಂಬಂಧವಾಗಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಶಿಲ್ಪಿಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಕಲೆಗಾರನಿಗೆ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಹಾಗೂ ಅಮರಶಿಲ್ಪಿ ಜಕಣಾಚಾರಿ ಅವರು ಹಲವಾರು ಸುಂದರವಾದ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಅವರು ಸಂಸ್ಮರಣಾ ದಿನಾಚರಣೆಯನ್ನು ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ.ಸುಭಾಶ್ಚಂದ್ರ ಕೌಲಗಿ ಅವರು ಮಾತನಾಡಿ, ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ಶಿಲ್ಪಕಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ವಿಷ್ಣುವರ್ಧನ ಅರಸನ ಕಾಲದಲ್ಲಿ ಶಿಲ್ಪಕಲೆಯು ಉತ್ತುಂಗ ಶಿಖರದಲ್ಲಿತ್ತು ಎಂದು ತಿಳಿಸಿದರು. ಆ ಕಾಲಘಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಬೇಲೂರು ಮತ್ತು ಹಳೆಬೀಡಿನ ದೇವಾಲಯದಲ್ಲಿ ಶಿಲ್ಪಿಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ ಅವರು ಇಡೀ ಜೀವನವನ್ನು ಶಿಲ್ಪ ಕಲೆಗೆ ಮೀಸಲಿಟ್ಟಿದ್ದರು. ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆ ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಅಜರಾಮರವಾಗಿ ಶಿಲ್ಪಕಲೆಯ ದೇವಾಲಯಗಳ ಕೆತ್ತನೆ ಕೊನೆಯವರೆಗೆ ಉಳಿಯುತ್ತೇವೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರು ಮಾತನಾಡಿ, ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ಶಿಲ್ಪಕಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಮತ್ತು ಎಲ್ಲರೊಂದಿಗೆ ಸೌಹಾರ್ದತೆಯಿಂದ ಹಾಗೂ ವಿಶ್ವಕರ್ಮ ಸಮುದಾಯವು ಪಂಚ ಕಸುಬು ಅವಲಂಬಿಸಿದ್ದು, ಇವುಗಳನ್ನು ಮುಂದುವರಿಸಿಕೊAಡು ಹೋಗಬೇಕು ಎಂದು ಸಲಹೆ ನೀಡಿದರು. ಯಾದಗಿರಿ ಏಕದಂಡಗಿ ಮಠ ಮಹಾಸ್ವಾಮಿಗಳಾದ ಶೀ ಕುಮಾರ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.
ಈ ಸಂದರ್ಭದಲ್ಲಿ ಯಾದಗಿರಿ ವಿಶ್ವ ಕರ್ಮ ಸಮಾಜದ ಮುಖಂಡರಾದ ಮಹೇಶ ತಡಿಬಿಡಿ, ವಸವರಾಜ ಎಮ್ ಸೈದಾಪೂರ, ಚಂದ್ರಶೇಖರ ಪತ್ತಾರ, ಮೌನೇಶ, ಬನ್ನಪ್ಪ ಕಾಳೆಬಳಗುಂದಿ, ಮೊನಪ್ಪ ವಿರ್ಶಕರ್ಮ, ರಾಜಶೇಖರ, ಶಿವಾನಂದ ದೇವಿಂದ್ರಪ್ಪ ಮತ್ತು ಎಲ್ಲಾ ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಉತ್ತರಾದೇವಿ ಎಮ್.ಮಠಪತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ :- ಶಿವರಾಜ್ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ