ಹನೂರು:ನರೇಗಾ ಯೋಜನೆ ಗುತ್ತಿಗೆ ಆಧಾರಿತ ಕೆಲಸವಲ್ಲ. ಉದ್ಯೋಗ ಚೀಟಿ ಹೊಂದಿರುವ ಕೂಲಿ ಕಾಮಿ೯ಕರ ಕೂಲಿ ಆಧಾರಿತ ಕೆಲಸವಾಗಿದೆ ಎಂದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸುರೇಶ್ ಹೇಳಿದರು.
ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯ್ತಿ ಆವರಣ ಆಯೋಜಿಸಿದ್ದ ನರೇಗಾ ಯೋಜನೆಯ 2023-24ನೇ ಸಾಲಿನ ಸಾಮಾಜಿಕ ಪರಿಶೋಧನೆ ಮತ್ತು 14-15ನೇ ಹಣಕಾಸು ಯೋಜನೆಯ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು ನರೇಗಾ
ಕೆಲಸಕ್ಕೆ ನಿವ೯ಹಿಸುವ ಕಾಮಿ೯ಕರನ್ನು ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಜಿಪಿಎಸ್ ಮಾಡಿ ಆನ್ ಲೈನ್ ನಲ್ಲಿ ಅಫ್ ಲೋಡ್ ಮಾಡಿ ಸಕಾ೯ರದ ಮಾಗ೯ಸೂಚಿ ಮತ್ತು ನರೇಗಾ ಯೋಜನೆಯ ನಿಯಮದಂತೆ ಕ್ರಮ ವಹಿಸಲಾಗುತ್ತದೆ ಎಂದರು
ಜಾಬ್ ಕಾಡ್೯ ಹೊಂದಿರುವ ಕೂಲಿ ಕಾಮಿ೯ಕರು ನಮೂನೆ-06 ರಲ್ಲಿ ಅಜಿ೯ ನೀಡಿ ಕೆಲಸ ಕೇಳಿದರೆ ಅವರಿಗೆ ಉಧ್ಯೋಗ ನೀಡುತ್ತೇವೆ ಕೆಲಸ ನೀಡದಿದ್ದಾಗ ಮಾತ್ರ ಅವರಿಗೆ ನಿರುದ್ಯೋಗ ಭತ್ಯೆ ನೀಡ ಬೇಕಾಗುತ್ತದೆ ಆದರೆ ನಮ್ಮ ಪಂಚಾಯ್ತಿಯಲ್ಲಿ ನಿವ೯ಹಿಸಲು ಸಾಕಷ್ಟು ಕೆಲಸಗಳಿದ್ದು ಕೆಲಸ ಕೇಳಿದ ಎಲ್ಲರಿಗೂ ಉಧ್ಯೋಗ ಕಲ್ಪಿಸಲಾಗುತ್ತದೆ ಎಂದರು
ತಾಲ್ಲೂಕು ಸಂಯೋಜಕ ಸಿದ್ದಪ್ಪ ಮಾತನಾಡಿ ನರೇಗಾ ಯೋಜನೆಯಡಿ ಕಳೆದೊಂದು ವಷ೯ದ ಅವಧಿಯಲ್ಲಿ ಬಳಕೆ ಮಾಡಿಕೊಂಡಿರುವ ಅನುದಾನ ಸದುಪಯೋಗ ಆಗಿದೆಯೇ ಮತ್ತು ಕಾಮಿ೯ಕರಿಗೆ ಸಮಪ೯ಕ ಕೂಲಿ ಹಣ ಸಂದಾಯ ಆಗಿದೆಯೆ ಎಂಬುದರ ಬಗ್ಗೆ ಮಾಹಿತಿ ಪಡೆಯುವುದೆ ಸಭೆಯ ಉದ್ದೇಶವಾಗಿದೆ. ಎಂದರು
ಸೂಳೇರಿಪಾಳ್ಯ ಗ್ರಾ.ಪಂ.ಯಲ್ಲಿ ಶೈಕ್ಷಣಿಕ ವಷ೯ದಲ್ಲಿ 205 ಕಾಮಾಗಾರಿಗಳನ್ನು ಕೈಗೆತ್ತಿಕೊಂಡಿದೆ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆ 15 ಸೇರಿದಂತೆ ಒಟ್ಟು 220 ಕಾಮಾಗಾರಿಗಳು ನಡೆದಿದ್ದು
ಇದರಲ್ಲಿ ಕೂಲಿ ಬಾಬ್ತು 1,12,47,734/- ಕೋಟಿ ರೂ. ಸಾಮಾಗ್ರಿ ವೆಚ್ಚ 1,21,91,112/- ಕೋಟಿ ರೂ. ಒಟ್ಟು 2,34,39,112/- ಕೋಟಿ ರೂ. ಖಚಾ೯ಗಿದೆ. ಕಡತ ಮತ್ತು ಕಾಮಾಗಾರಿ ನಡೆದಿರುವ ಸ್ಥಳ ಪರಿಶೀಲನೆ ಮಾಡಲಾಗಿದೆ. ಕೂಲಿ ಕಾಮಿ೯ಕರ ಮನೆಗಳಿಗೆ ತೆರಳಿ ವಿಚಾರಣೆ ಮಾಡಿ ಹಣ ಬಂದಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಆಗಾಗಿ ಹಣ ಬಾರದಿರುವ ಬಗ್ಗೆಯಾಗಲಿ ಅಥವಾ ಕಾಮಾಗಾರಿಗಳ ಲೋಪ ದೋಷಗಳು ಇದ್ದಲಿ ಸಾವ೯ಜನಿಕರು ಆಕ್ಷೇಪಣೆ ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು ಎಂದರು.
ಈ ವೇಳೆ ನೋಡೆಲ್ ಆಧಿಕಾರಿ ಪಶು ಸಂಗೋಪನಾ ಇಲಾಖೆ ಸಹಾಯಕ ನಿದೇ೯ಶಕ ಮುತ್ತುರಾಜು ಪಿಡಿಓ ಸುರೇಶ್ ಕಾಯ೯ದಶಿ೯ ಪವನ್ ಕರ ವಸೂಲಿ ಮಾದೇವ ಕಂಫ್ಯೂಕರ್ ಆಫ್ ರೇಟರ್ ರಾಜಶೇಖರ್ ಗ್ರಾ.ಪಂ. ಅಧ್ಯಕ್ಷ ಮುತ್ತುರಾಜು ಉಪಾಧ್ಯಕ್ಷೆ ಬೇಬಿ ಪಂಚಾಯ್ತಿ ಸದಸ್ಯರು ಆಶಾ ಮತ್ತು ಅಂಗನವಾಡಿ ಕಾಯ೯ಕತ೯ರು ಮತ್ತು ಗ್ರಾಮಸ್ಥರು ಇದ್ದರು.
ವರದಿ: ಉಸ್ಮಾನ್ ಖಾನ್