ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಿಕ್ಷಣವೇ ಶಕ್ತಿ

ಶಿಕ್ಷಣವು ಜಗತ್ತನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಶಿಕ್ಷಣದ ಶಕ್ತಿಯು ಆರ್ಥಿಕ,ಸಾಮಾಜಿಕ ಯಶಸ್ಸಿಗೆ ಅಗತ್ಯವಿರುವ ಮೂಲಭೂತ ಕೌಶಲ್ಯಗಳ ಅಭಿವೃದ್ಧಿಯನ್ನು ಮೀರಿ ವಿಸ್ತರಿಸುತ್ತದೆ.ರಾಷ್ಟ್ರ ನಿರ್ಮಾಣ ಮತ್ತು ಭಾವೈಕ್ಯತೆಯ ಸಮನ್ವಯಕ್ಕೆ ದೂಡ್ಡ ಕೊಡುಗೆ ನೀಡುತ್ತಿದೆ.ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ಸರ್ವ ಶಕ್ತಿಯಾಗಿದ್ದು,ಇದರಿಂದ ಉತ್ತಮ ನಾಗರಿಕರಾಗಿ ಬದುಕು ಕಟ್ಟಿಕೊಳ್ಳಬಹುದಾಗಿದೆ.
ಸಮಾಜದ ಪ್ರಗತಿಗೆ ಶಿಕ್ಷಣ ಬಹಳಷ್ಟು ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಶಕ್ತಿ ಕುರಿತು ಬರೆಯುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.

ಬಂಧುಗಳೇ,
ಸಮಾಜದಲ್ಲಿ ರಚನಾತ್ಮಕ ಬದಲಾವಣೆಗಳನ್ನು ಮಾಡಿ,ಹೊಸ ಚೈತನ್ಯವನ್ನು ನೀಡುವ ಅದ್ಬುತ ಶಕ್ತಿಯನ್ನು ಶಿಕ್ಷಣ ಹೊಂದಿದೆ.ಇದು ಶಕ್ತಿಯುತ ಮತ್ತು ಚಾಣಾಕ್ಷ ವ್ಯಕ್ತಿಗಳನ್ನು ತಯಾರಿಸುವ ಸಾಮರ್ಥ್ಯ ಸಹ ಹೊಂದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಶಿಕ್ಷಣವು ಸಮಾಜವನ್ನು ಖಂಡಿತವಾಗಿಯೂ ಒಂದುಗೂಡಿಸುತ್ತದೆ,ಹೊಸ ಕೆಲಸ ಮಾಡಲು ಮತ್ತು ಬದಲಾವಣೆಯನ್ನು ತರಲು ಪ್ರೇರೇಪಿಸುತ್ತದೆ. ಮಾನವರಿಗೆ ಅಪಾರ ಪ್ರಮಾಣದಲ್ಲಿ ಅವಕಾಶಗಳನ್ನು ನೀಡಿ,ಸುಂದರ ಜೀವನವನ್ನು ನಿರ್ಮಿಸಿಕೊಳ್ಳಲು ಆದಾರ ಸ್ತಂಭವಾಗುತ್ತದೆ ಅಲ್ಲದೆ ಶಿಕ್ಷಣದಿಂದ ಸುಸ್ಥಿರ ಮತ್ತು ಯಶಸ್ವಿ ಬದುಕಿನ ಭವಿಷ್ಯಕ್ಕಾಗಿ ಕನಸು ಕಾಣಬಹುದು ಏಕೆಂದರೆ ಶಿಕ್ಷಣದಿಂದ ಮಾನವರ ಜೀವನ ಸರ್ವ ರೀತಿಯಲ್ಲೂ ವಿಕಾಸ ಹೊಂದಲು ನೆರವಾಗುತ್ತದೆ ಶಿಕ್ಷಣದ ಶಕ್ತಿಯು ಮನುಷ್ಯರ ಜೀವನವನ್ನು ವಿವಿಧ ಧನಾತ್ಮಕ ರೀತಿಯಲ್ಲಿ ರೂಪಿಸಿ,
ಯಶಸ್ವಿ ಕಡೆ ಕೊಂಡೊಯುತ್ತದೆ.
ಇದಲ್ಲದೆ ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಪ್ರೋತ್ಸಾಹಿಸಲಾಗುತ್ತಿದೆ‌ ಹಾಗೆ ಆರ್ಥಿಕ ಸ್ವಾವಲಂಬನೆಗಾಗಿ ನಮ್ಮ ಸಮಾಜದಲ್ಲಿ ಸ್ತ್ರೀಯರ ಸ್ಥಾನವನ್ನು ಉನ್ನತೀಕರಿಸುವಲ್ಲಿ ಪ್ರಮುಖ ಪಾತ್ರ ಶಿಕ್ಷಣ ವಹಿಸುತ್ತಿರುವುದಂತು ರುಜುವಾತಾಗಿದೆ.
ಅದೇ ರೀತಿ ಮತ್ತೊಂದೆಡೆ ಶಿಕ್ಷಣವು
ವಿದ್ಯಾವಂತ ಸಮಾಜವು ತಮ್ಮ ಜೀವನ,ಅವರ ಕುಟುಂಬಗಳು,ಅವರ ಸಮುದಾಯ ಮತ್ತು ಅವರ ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಚಿಂತನಶೀಲ ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಗರಿಕರನ್ನು ರೂಪಿಸಿ,ಉತ್ತೇಜಿಸುತ್ತದೆ ಎಂಬುದು ಸಹ ಅಷ್ಟೇ ವಾಸ್ತವದಿಂದ ಕೂಡಿದೆ.
ಇಷ್ಟೇ ಅಲ್ಲ,ಶಿಕ್ಷಣವು ಶಾಂತಿ,ಸೌಹಾರ್ದತೆ, ಸಹೋದರತ್ವ ಸಹಬಾಳ್ವೆನ್ನು ಖಾತ್ರಿಗೊಳಿಸುತ್ತದೆ ಮತ್ತು ತಲೆಮಾರುಗಳ ಪ್ರತಿಭೆಯನ್ನು ವ್ಯರ್ಥವಾಗದಂತೆ ನೋಡಿಕೊಳ್ಳುತ್ತದೆ ಜಾಗತಿಕ ಮಟ್ಟದಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುತ್ತದೆ ಇದು ಸುಸ್ಥಿರ ಬೆಳವಣಿಗೆಯನ್ನು ಅನುಮತಿಸುತ್ತದೆ. ಹಾಗೆಯೇ ಶಿಕ್ಷಣದ ಉಪಸ್ಥಿತಿಯಿಲ್ಲದೆ ನಾವು ಉತ್ತಮ ಜಗತ್ತನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಏಕೆಂದರೆ ಶಿಕ್ಷಣವು ಮಾನವರ ಸ್ವಯಂ ಬೆಳವಣಿಗೆಗೆ ದೈತ್ಯ ಶಕ್ತಿಯಾಗಿದೆ ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗಲು ಸೂಕ್ತ ಹಾಗೂ ಸಮೃದ್ಧ ಸ್ಥಳವನ್ನಾಗಿ ಮಾಡುವ ಬದ್ಧತೆಗಳು ಮತ್ತು ಪ್ರಯತ್ನಗಳನ್ನು ಶಾಶ್ವತವಾಗಿ ಬಲಪಡಿಸುತ್ತದೆ. ಅಂದಹಾಗೆ ಶಿಕ್ಷಣವು ಶಕ್ತಿ ಎಂಬ ಪದಗುಚ್ಛವು ಜ್ಞಾನ ಮತ್ತು ಕೌಶಲ್ಯಗಳು ತಮ್ಮ ಜೀವನವನ್ನು ನಿಯಂತ್ರಿಸುವ ಮತ್ತು ಜಗತ್ತಿನಲ್ಲಿ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ನೀಡುತ್ತಿದೆ ಇದು ಶತಮಾನಗಳಿಂದಲೂ ಇರುವ ಪ್ರಬಲ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದ ವಾಸ್ತವ ನಿಜಾಂಶವಾಗಿದೆ.ಹೀಗೆ ಶಿಕ್ಷಣವು ಅನೇಕ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಿ,ಮಾನವರ ವಿಕಾಸಕ್ಕೆ ನಾಂದಿಯಾಗಿದೆ.

ಶಿಕ್ಷಣ ನಿಂತ ನೀರಾಗಬಾರದು:
ಶಿಕ್ಷಣ ಅನ್ನುವುದು ಈಗಿನ ಕಾಲದಲ್ಲಿ ಕಣ್ಣು ಒರೆಸುವ ತಂತ್ರವಾಗಿ,ನಾಮಕಾವಸ್ತೆ ತೋರಿಕೆಯ ವಸ್ತುವಾಗಿ ಕಾಣುತ್ತಿದೆ ಅಲ್ಲದೆ ಅಡಂಬರತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಅಷ್ಟೇ ಅಲ್ಲದೆ ಶಿಕ್ಷಣದ ಹೆಸರಿನಲ್ಲಿ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುವಂತಹ ವ್ಯವಸ್ಥೆ ಸಹ ಅಲ್ಲಲ್ಲಿ ಕಾಣುತ್ತಿದ್ದೇವೆ ಉಳ್ಳವರ ಪಾಲಿಗೆ ಸ್ವರ್ಗವಾಗಿ,ಬಡವರ ಪಾಲಿಗೆ ನರಕವಾಗುತ್ತಿದೆ ಇದು ಎಲ್ಲೋ ಒಂದು ಕಡೆ ಬಡವರ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಮಾರಕವಾಗುತ್ತಿದೆ ಹೀಗೆ ಬಡವ ಶ್ರೀಮಂತ ಎನ್ನುವ ಭೇದ ಭಾವಗಳು ಮಾಡುವ ಮೂಲಕ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ತಾರತಮ್ಯ ನೀತಿಗಳನ್ನು ಕಾಣುತ್ತಿದ್ದೇವೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು ಅಂದಹಾಗೆ ಈ ತಾರತಮ್ಯ ನೀತಿಗಳು ಆದಷ್ಟು ಬೇಗ ಬಗೆಹರಿಸುವ ನಿಟ್ಟಿನಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ಇಲಾಖೆಗಳು ಮುಂದಾಗಬೇಕು ಅಂದಾಗಲೇ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಸಾಧ್ಯ ಜೊತೆಗೆ ಸಂವಿಧಾನದ ಆಶೆಗಳು ಈಡೇರಿಸಿದಂತಾಗುತ್ತದೆ.
ಅದಕ್ಕಾಗಿ ಈಗಲಾದರೂ ಕೆಲ ಶಿಕ್ಷಣ ನೀತಿಗಳು ಬದಲಾಗಬೇಕು.
ಇದಲ್ಲದೆ ಶಿಕ್ಷಣ ಎನ್ನುವುದು ನಮ್ಮ ಕಣ್ಣಿಗೆ ಕಟ್ಟಿರುವ ಕಪ್ಪು ಬಟ್ಟೆ ಖಂಡಿತವಾಗಿಯೂ ಆಗಬಾರದು.
ಈಗಿನ ಕಾಲದ ಶಿಕ್ಷಣದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದ,ಮಾನವೀಯತೆಯ ಮೌಲ್ಯಗಳು ಸೇರಿದಂತೆ ಮೌಲ್ಯಾಧಾರಿತ ವಿಷಯಗಳನ್ನು ಭೋದಿಸುವ ಕೆಲಸ ಆಗಬೇಕಾಗಿದೆ.
ಈ 21ನೇ ಶತಮಾನದ ಶಿಕ್ಷಣವು ಈ ಹಿಂದೆ ಆಳಿಹೋದ ರಾಜ್ಯರ ಆಳ್ವಿಕೆಗೆ ಮಾತ್ರ ಸೀಮಿತವಾಗಿರದೆ ಇಂದಿನ ಆಧುನಿಕ ಯುಗದ ಮಾಹಿತಿ ತಂತ್ರಜ್ಞಾನ,ಆರೋಗ್ಯದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕಾಗಿದೆ.
ಅಲ್ಲದೆ ವಿಶೇಷವಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಸುವಂತಹ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು.
ಈ ವಿಷಯದಲ್ಲಿ ಮಕ್ಕಳ ಪೋಷಕರು ಇಂಗ್ಲೀಷ್ ವ್ಯಾಮೋಹ
ಬಿಟ್ಟು,ಮಾತೃಭಾಷೆಯಲ್ಲಿ 10ನೇ ತರಗತಿಯವರೆಗೂ ಶಿಕ್ಷಣ ಕಲಿಸುವಂತಹ ಕೆಲಸ ಮಾಡಲೇಬೇಕು ಅಂದಾಗ ಮಾತ್ರ ಮಕ್ಕಳು ಶಿಕ್ಷಣದಲ್ಲಿ ಪರಿಪೂರ್ಣತೆ ಹೊಂದಲು ಭೌತಿಕವಾಗಿ ಹಾಗೂ ಮಾನಸಿಕ ಸಮತೋಲನದಿಂದ ಬೆಳೆಯಲು ಸಾಧ್ಯವಾಗುತ್ತದೆ. ‌ಹೀಗಾಗಿ ಶಿಕ್ಷಣ ನಿಂತ ನೀರಾಗದೆ ಹೊಸ ಹೊಸ ವಿಷಯಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಪರಿಗಣಿಸಿವ ಮೂಲಕ ಕನಿಷ್ಠ ಐದು ವರ್ಷಗಳಿಗೊಮ್ಮೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವಂತ ಕೆಲಸ ಮಾಡಬೇಕು ಹೀಗೆ ಮಾಡುವುದರಿಂದ ಶಿಕ್ಷಣದಲ್ಲಿ ಹೊಸ ವಿಷಯಗಳು ಮತ್ತು ಆಧುನಿಕ ಸಮಾಜದ ಹಲವು ವಿಚಾರಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಹಾಗೆಯೇ ಮಕ್ಕಳಿಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ ಇದರಿಂದ ಮಕ್ಕಳ ಕಲಿಕೆಗೆ ಹೆಚ್ಚು ವಿಪುಲ ಅವಕಾಶಗಳು ಸಿಗುವಂತ ಸಾಧ್ಯತೆ ಹೆಚ್ಚಾಗಿ,ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಈ ಮೂಲಕ ದೇಶವು ಸಮೃದ್ಧವಾಗಿ,ಸಮರ್ಥವಾಗಿ ಆರ್ಥಿಕ,ಶೈಕ್ಷಣಿಕ,ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಪಥದತ್ತ ಹೊಂದಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳಲ್ಲಿ ಓದಿನ ಹಸಿವಿರಬೇಕು:ಮಕ್ಕಳು ಗುರಿಯನ್ನಿಟ್ಟುಕೊಂಡು ವ್ಯಾಸಂಗ ಮಾಡಬೇಕು. ಇಂಗ್ಲಿಷ್ ಬರಲ್ಲವೆಂಬ ಕೀಳರಿಮೆ ಖಂಡಿತ ಬೇಡವೇ ಬೇಡ, ಮನಸ್ಸಿಟ್ಟು ಅಭ್ಯಾಸ ನಡೆಸಿದಲ್ಲಿ ಎಲ್ಲವೂ ಕರಗತವಾಗಲಿದೆ.ಓದಿನ ಜತೆಗೆ ಕ್ರೀಡೆ,ಸಾಂಸ್ಕೃತಿಕ, ಸೇವಾ ಚಟುವಟಿಕೆಗಳು ಬುದ್ದಿ ವಿಕಸನಕ್ಕೆ ಪೂರಕವಾಗಲಿದೆ .
ಯಾವಾಗಲೂ ಅದಷ್ಟದ ಮೇಲೆ ನಂಬಿಕೆ ಇಡಬೇಡಿ, ಮೌಢ್ಯಗಳಿಂದ ದೂರವಿರಬೇಕು.ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು,ಜಾತಿ ಮೀರಿ ಬದುಕು ಕಟ್ಟಿಕೊಳ್ಳಬೇಕು.ಕನಸಿನೊಳಗೆ ಕನಸು ಕಾಣಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು, ವಿಧ್ಯಾರ್ಥಿಗಳಲ್ಲಿ ತಿಳಿದುಕೊಳ್ಳುವ ಕುತೂಹಲದ ತುಡಿತವಿರಬೇಕು ಮಕ್ಕಳ ಸಾಧನೆ ಇತರರಿಗೆ ಸ್ಫೂರ್ತಿ ಯಾಗುವಂತಿರಬೇಕು.ಅಂದಾಗ ಮಾತ್ರ
ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜ್ಞಾವಂತ ಹೆಮ್ಮೆಯ ಪ್ರಜೆಗಳು ಆಗಲು ಸಾಧ್ಯ.

ಉತ್ತಮ ಜೀವನಮಟ್ಟ:ಶಿಕ್ಷಣವು ಉತ್ತಮ ಉದ್ಯೋಗಗಳನ್ನು ಪಡೆಯಲು ಅಗತ್ಯವಿರುವ ನೆರವು ನೀಡಿ,ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಅದ್ಬುತ ಕ್ತಿಯಾಗಿದೆ ಇದು ಹೆಚ್ಚಿನ ಸಂಬಳ,ಹೆಚ್ಚಿನ ಅವಕಾಶಗಳು ಮತ್ತು ಉತ್ತಮ ಸೌಕರ್ಯದ ಜೀವನಮಟ್ಟಕ್ಕೆ ಕಾರಣವಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಡವೇ ಬೇಡ. ಇದಲ್ಲದೆ ಜನರು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಜೀವನದ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು
ಶಿಕ್ಷಣವು ಯಾವಾಗಲೂ ಸಹಾಯ ಹಸ್ತ ಚಾಚುತ್ತದೆ. ಇದು ನಾಗರಿಕ ಜೀವನದಲ್ಲಿ ಹೆಚ್ಚಿನ ಭಾಗವಹಿಸುವಿಕೆ ಮತ್ತು ಹೆಚ್ಚು ನ್ಯಾಯಯುತ ಬದುಕಿಗೆ ಪೂರಕವಾಗಿ ಶ್ರಮಿಸಿ,ಆದರ್ಶ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿ ಕೊಡುತ್ತದೆ. ಅಲ್ಲದೆ ಇನ್ನಿತರ ಸಮಸ್ಯೆಗಳು ಸೇರಿದಂತೆ
ಆರೋಗ್ಯದ ಸಮಸ್ಯೆಗಳು ಬಗೆಹರಿಸಲು
ಶಿಕ್ಷಣದ ಅರಿವು ಬಹಳ ಮುಖ್ಯ ಮತ್ತು ತಮ್ಮನ್ನು ತಾವು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕಾರಿ ಆಗುತ್ತದೆ.ಇದು ಆರೋಗ್ಯಕರ ಜೀವನಶೈಲಿ ಮತ್ತು ದೀರ್ಘಾವಧಿಯ ಜೀವನಕ್ಕೆ ಪ್ರೇರಣೆಯಾಗಲಿದೆ.

ಶಿಕ್ಷಣದ ಪ್ರಯೋಜನಗಳು:ವಿಧ್ಯಾರ್ಥಿಗಳು ಸೇರಿದಂತೆ ಜನರು ತಮ್ಮ ಸೃಜನಶೀಲತೆ ಮತ್ತು ಸಮಸ್ಯೆಗಳ ಪರಿಹರಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಣವು ಸಂಪೂರ್ಣವಾಗಿ
ಸಹಾಯ ಮಾಡುತ್ತದೆ.ಇದು ಸಮಾಜಕ್ಕೆ ಪ್ರಯೋಜನಕಾರಿಯಾದ ಹೊಸ ಆಲೋಚನೆಗಳು ಮತ್ತು ಪರಿಹಾರಗಳಿಗೆ ರಾಮಬಾಣವಾಗಲಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢವಾಗಬಹುದು.ಸಮಾಜದಲ್ಲಿ ಗೌರವ ಸ್ಥಾನ ಪಡೆಯಬಹುದು.ಹೆಚ್ಚಿನ ಶಿಕ್ಷಣ ಹೊಂದಿರುವ ಕಾರಣದಿಂದ ಹೆಚ್ಚಿನ ಸಂಬಳವನ್ನು ಪಡೆಯಬಹುದು. ದೂರದೃಷ್ಟಿ ಮತ್ತು ವ್ಯಕ್ತಿತ್ವ ವಿಕಸನ ಹೊಂದಿ, ಸಮಾಜದ ಪ್ರಗತಿಗೆ ಪೂರಕವಾಗಬಹು ಅಲ್ಲದೆ ಶಿಕ್ಷಣವು ಜನರಿಗೆ ಹೆಚ್ಚು ತಿಳುವಳಿಕೆಯುಳ್ಳ ನಾಗರಿಕರಾಗಲು ಮತ್ತು ನಾಗರಿಕ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ಸಹಾಯ ಮಾಡುತ್ತದೆ.
ಹೆಚ್ಚು ಸೃಜನಶೀಲರಾಗಲು ಮತ್ತು ಸಮಾಜಕ್ಕೆ ಹೊಸ ಚಿಂತನೆಗಳೊಂದಿಗೆ ಅಭಿವೃದ್ಧಿ ಮಾಡಲು ಸಹಾಯ ಮಾಡುವುದಂತೂ ಗ್ಯಾರಂಟಿ.ಹೀಗೆ ಶಿಕ್ಷಣದಿಂದ ಸಾವಿರಾರು ಉಪಯೋಗಗಳು ಪಡೆದು ಆದರ್ಶ ನಾಗರಿಕರಾಗಿ ಬದುಕಬಹುದಾಗಿದೆ.

ಕೊನೆಯ ನುಡಿ:ಕೇವಲ ಅಂಕಗಳಿಗಾಗಿ ಅಥವಾ ಉದ್ಯೋಗ ಪಡೆಯುವುದಕ್ಕಾಗಿ ಶಿಕ್ಷಣ ಪಡೆಯುವುದು ಬೇಡವೇ ಬೇಡ.ಮಾನವೀಯ ಮೌಲ್ಯದಾರಿತ ಜೀವನಕ್ಕಾಗಿ,ಮಕ್ಕಳ ಭೌತಿಕ ಬೆಳವಣಿಗಾಗಿ ಹಾಗೂ ದೇಶದ ಅಭಿವೃದ್ಧಿಗಾಗಿ ಮಾತ್ರ ಶಿಕ್ಷಣ ಪಡೆಯುವಂತೆ ಇಂದಿನ ಶಿಕ್ಷಣ ವ್ಯವಸ್ಥೆಗಳು ಮಾರ್ಗದರ್ಶನ ಮಾಡಬೇಕಾಗಿದೆ.ಅಲ್ಲದೆ ದೈಹಿಕವಾಗಿ,ಮಾನಸಿಕವಾಗಿ,ಬೌದ್ಧಿಕವಾಗಿ, ಭಾವನಾತ್ಮಕವಾಗಿ,ನೈತಿಕವಾಗಿ ಸಮರ್ಥರನ್ನಾಗಿಸುವುದೇ ಶಿಕ್ಷಣ ಶಕ್ತಿಯ ಪ್ರಮುಖ ಗುರಿಯಾಗಿ ಕೆಲಸ ನಿರ್ವಹಿಸಬೇಕಾಗಿದೆ.ಹೀಗಾದರೆ ಮಾತ್ರ ಶಿಕ್ಷಣ ಪ್ರತಿ ಮಾನವನ ಪ್ರಗತಿಗೆ ಆಧಾರವಾಗುತ್ತದೆ.ಸಮಾಜದ ಹಾಗೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಲೇಖಕರು:ಸಂಗಮೇಶ ಎನ್ ಜವಾದಿ
ಬರಹಗಾರರು,ಪ್ರಗತಿಪರ ಚಿಂತಕರು.
9663809340.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ