ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರೈತ ಮಹಿಳೆಯರ ಯಶಸ್ಸು ಬಯಸುವ ಹಾಲಕೆರೆ ಮಠ

ಗದಗ:ಈಸಬೇಕು ಇದ್ದು ಜಯಿಸಬೇಕು ಎನ್ನುವ ಮಾರ್ಗ ತೋರಿಸಿಕೊಟ್ಟ ಸಾಧರು ಸಂತರು ಶರಣರು ದಾರ್ಶನಿಕರು ಸತ್ಪುರುಷರು ಮನೋ ಜ್ಞಾನಿಗಳು ಹೀಗೆ ಅನೇಕ ಜ್ಞಾನಿಗಳ ನಾಡು ಸಾಧು ಸಂತರ ಬೀಡು ಶರಣರ ನಾಡು ನಮ್ಮ ಈ ಕನ್ನಡ ನಾಡು ಇಂತಹ ನಾಡಿನ ಗದಗ ಜಿಲ್ಲೆಯ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಮಠವು ಜಗತ್ಪ್ರಸಿದ್ದಿಯೊಂದಿಗೆ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ 600 ವರ್ಷಗಳ ಇತಿಹಾಸವಿದೆ ಈ ಮಠದ ಪರಂಪರೆಯಲ್ಲಿ ಎಲ್ಲ ಪೂಜ್ಯರು ಅನ್ನದಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಜ್ಞಾನದಾನ ಮಾಡಿ ಭಕ್ತರನ್ನು ಧರ್ಮ ನಿಷ್ಠುರರನ್ನಾಗಿಸಲು ತಮ್ಮ ಪೂಜಾ ಶಕ್ತಿ ತಪಶಕ್ತಿಗಳನ್ನು ದಾರಿ ಎರೆದರು ಸ್ವತಂತ್ರ ಪೂರ್ವದಲ್ಲಿಯೇ ಕಿತ್ತೂರು ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಎಂಬುದು ಮರೀಚಿಕೆಯಾಗಿ ಶಿಕ್ಷಣ ಎಲ್ಲರಿಗೂ ದುಸ್ತರವಾದ ಸಂದರ್ಭದಲ್ಲಿ 1913 ರಲ್ಲಿ ಲಿಂಗೈಕ ಗುರು ಅನ್ನದಾನ ಶ್ರೀಗಳು ಧರ್ಮ ಪ್ರಚಾರದೊಂದಿಗೆ ಸಮಾಜದ ಸಾರ್ವಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯನ್ನು ಪ್ರಾರಂಭಿಸಿದರು ವಿದ್ಯೆಯ ಜೊತೆಗೆ ಅನ್ನ ಆಶ್ರಯಗಳನ್ನು ಜಾತಿ ಮತ ಪಂಥ ಎಣಿಸದೆ ಸರ್ವ ಜನಾಂಗದ ಏಳಿಗೆಗಾಗಿ ಉಚಿತವಾಗಿ ನೀಡುವ ಮೂಲಕ ಈ ಭಾಗದ ಶೈಕ್ಷಣಿಕ ರಂಗದ ಅನ್ನದಾನೇಶ್ವರ ಸಂಸ್ಥಾನ ಮಠವು ಈ ಭಾಗದ ಹೆಬ್ಬಾಗಿಲು ಎನಿಸಿಕೊಂಡಿದೆ ಲಿಂಗೈಕ ಡಾಕ್ಟರ ಅಭಿನವ ಅನ್ನದಾನ ಸ್ವಾಮೀಜಿಗಳು ಅಕ್ಷರ ಕಲಿಕೆಯ ವ್ಯವಸ್ಥೆಯನ್ನು ಗುಣಾತ್ಮಕ ಶಿಕ್ಷಣವನ್ನಾಗಿಸಿದರು ಧರ್ಮ ಶಿಕ್ಷಣ ಸಮಾಜ ಪ್ರಕೃತಿ ಸಂರಕ್ಷಣೆ ಈ ನಾಲ್ಕು ಕ್ಷೇತ್ರಗಳಲ್ಲಿ ಸುಧಾರಣೆ ಬದಲಾವಣೆ ತರುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ನೂರಾರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯುತ್ತಿದ್ದು ಜಾತ್ರೆಯೆಂದರೆ ಕೇವಲ ಡೊಳ್ಳು ಕುಣಿತ ಮೋಜು ಮೊದಲಿಗೆ ಸೀಮಿತಗೊಳಿಸದೆ ಜಾತ್ರೆಯನ್ನು ಜಾಗೃತಿ ಉತ್ಸವ ಗಳನ್ನಾಗಿಸಿದ ಶ್ರೇಯಸ್ಸು ಲಿಂಗೈಕ ಅಭಿನವ ಅನ್ನದಾನ ಶ್ರೀಗಳಿಗೆ ಸಲ್ಲುತ್ತದೆ ಸುಸ್ಥಿರ ಸಮೃದ್ಧ ಭಾರತ ಸ್ವಚ್ಛ ಭಾರತ ಆರೋಗ್ಯ ಭಾರತ ಸಾವಲಂಬಿ ಭಾರತದ ಪರಿಕಲ್ಪನೆಯನ್ನು ಈ ಅಕ್ಷರ ಜಾತ್ರೆ ಒಳಗೊಂಡಿದೆ 173ನೇ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜನವರಿ 13 14 ರಂದು ಜರುಗುವ ಅಜ್ಜನ ಅಕ್ಷರ ಜಾತ್ರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಮಾಜದ ಹಿತಚಿಂತಕರು ಬುದ್ಧಿಜೀವಿಗಳು ಮಾರ್ಗದರ್ಶನ ಮಾಡಲಿದ್ದಾರೆ ಈ ಜಾತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ಭಕ್ತರು ಭಾಗಿಯಾಗಬೇಕು ಎನ್ನುವ ಮುಂದಾಲೋಚನೆಯೊಂದಿಗೆ ಮುಪ್ಪಿನ ಬಸವಲಿಂಗ ಶ್ರೀಗಳು ಈ ಬಾರಿ ಹಾಲಕೆರೆ ಜಾತ್ರೆಯಲ್ಲಿ ವಿಶೇಷ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಅಭಿನವ ಅನ್ನದಾನ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ಅಕ್ಷರ ಅನ್ನ ದಾಸೋಹದೊಂದಿಗೆ ಅನೇಕ ರೈತರ ಮಹಿಳೆಯರ ಅಂಗವಿಕಲರ ಅಂಧರ ಅನಾಥರ ನಾಡಿನ ಪ್ರತಿಯೊಬ್ಬರ ಹಿತೈಷಿ ಬಯಸುವ ಚಿಂತನೆಗಳ ಮಠವಾಗಿ ಹೊರಹಮ್ಮಿದೆ ರೈತರ ಕಲ್ಯಾಣಕ್ಕಾಗಿ ಅಭಿನವ ಅನ್ನದಾನ ಶ್ರೀಗಳು ಶ್ರಮಿಸಿದ ಕಾರ್ಯ ಅಸ್ಮರಣೀಯ ಅಲ್ಲಮ ಪ್ರಭುವಿನ ಮಾರ್ಗದರ್ಶನದ ಮೂಲಕ ನಿರ್ಮಿತವಾದ ಈ ಮಠ ಸುಮಾರು ವರ್ಷಗಳ ಇತಿಹಾಸವನ್ನು ಹೊಂದಿದೆ ಅಲ್ಲಮಪ್ರಭುವಿನ ಕಾಲದಲ್ಲಿ ಈ ನಾಡಿಗೆ ತಮ್ಮ ಶಿಷ್ಯರನ್ನು ದಾರಿ ಎರಿಯಬೇಕೆಂದು ಭಕ್ತರು ಮನವಿ ಮಾಡಿಕೊಂಡಾಗ ಅಲ್ಲಮ ಪ್ರಭು ತನ್ನ ಮೂರು ಶಿಷ್ಯರನ್ನು ಈ ನಾಡಿಗೆ ಒಂದೊಂದು ಮಠಕ್ಕೆ ಒಬ್ಬೊಬ್ಬರಂತೆ ಮೂವರನ್ನು ಶ್ರೀಗಳು ಆಗುವಂತೆ ಸೂಚಿಸಿ ಕಳುಹಿಸುತ್ತಾರೆ ಆಗ ನಮ್ಮ ನಾಡಿನಲ್ಲಿ ಉದಯಿಸಿದ ಮೂರು ಮಠಗಳಂದರೆ ಚಿತ್ತರಗಿ ಶ್ರೀ ವಿಜಯಮಾಂತೇಶ್ವರ ಮಠ ಹಾಲಕೆರೆ ಅನ್ನದಾನೇಶ್ವರ ಮಠ ಕೊಟ್ಟೂರು ಶ್ರೀ ಸಂಗನಬಸವೇಶ್ವರ ಮಠಗಳು ಹೀಗೆ ಮೂರು ಮಠಗಳ ಪೀಠಾಧಿಪತಿಗಳನ್ನು ನೇಮಕ ಮಾಡಿ ಸಮಾಜ ಉದ್ಧಾರಕ್ಕಾಗಿ ಅಲ್ಲಮ ಪ್ರಭುಗಳು ಕಳುಹಿಸಿದ ಫಲವಾಗಿ ಇವತ್ತು ಈ ಮೂರು ಮಠಗಳ ಮೂಲಕ ಈ ನಾಡಿನಲ್ಲಿ ಅನೇಕ ಸಂಘ ಸಂಸ್ಥೆಗಳು ಹುಟ್ಟಿಕೊಂಡು ಅಕ್ಷರ ಶಿಕ್ಷಣ ದಾಸೋಹವನ್ನು ಧಾರೆ ಎರೆಯುತ್ತಾ ಬಂದಿವೆ ಇಂತಹ ಮಠಗಳಲ್ಲಿ ಹಾಲಕೆರೆಯ ಅನ್ನದಾನೇಶ್ವರ ಮಠವು ಜಗತ್ಪ್ರಸಿದ್ಧಿ ಪಡೆಯುತ್ತಿದೆ ಶಿಕ್ಷಣ ಅನ್ನದಾಸೋಹದ ಮೂಲಕ ನಾಡಿನ ಅನೇಕ ಭಕ್ತರ ಅಚ್ಚುಮೆಚ್ಚಿನ ಮಠವಾಗಿ ದಾಸೋಹದ ಮೂಲಕ ತನ್ನ ಪ್ರಖ್ಯಾತಿಯನ್ನು ಇಮ್ಮಡಿಗೊಳಿಸುತ್ತಾ ಬರುತ್ತಿದೆ ಕಲ್ಲು ಮಠದ ಅಜ್ಜ ನವರು ಕಟ್ಟಿಗೆ ಮಠದ ಶ್ರೀ ಅನ್ನದಾನೇಶ್ವರರು ನಂತರ ಬಂದವರೇ ಶ್ರೀ ಅಭಿನವ ಅನ್ನದಾನ ಸಂಗನಬಸವ ಶ್ರೀಗಳು ಬಂದ ನಂತರ ಹಾಲಕೆರೆ ಮಠ ಹಾಗೂ ಕೊಟ್ಟೂರು ಸ್ವಾಮಿಯ ಮಠಗಳು ಅಭಿವೃದ್ಧಿ ಪರ್ವವನ್ನೇ ನಿರ್ಮಾಣ ಮಾಡಿದವು ಮಠದ ಸಂಸ್ಥೆಯನ್ನು ಉನ್ನತವಾಗಿ ಬೆಳೆಸುವಲ್ಲಿ ಹಾಗೂ ಉಚಿತ ಶಿಕ್ಷಣ ಉಚಿತ ಪ್ರಸಾದ ನಿಲಯದ ಮೂಲಕ ಸಾಕಷ್ಟು ಬಡವರ ದೀನ ದಲಿತರ ಅಂಗವಿಕಲರ ಚಿಂತನೆಗಳನ್ನು ಮಾಡುತ್ತಾ ಅವಿರತವಾಗಿ ಶ್ರಮಿಸುತ್ತಾ ಬಂದಿದ್ದರ ಪರವಾಗಿ ಇವತ್ತು ರಾಜ್ಯದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾಗಿ ವಿಜಯ ವಿದ್ಯಾರಕ ಅನ್ನದಾನ ಸಮಿತಿ ನರೇಗಲ್ಲದಲ್ಲಿ ಬೆಳೆದು ನಿಂತಿವೆ ಸಂಗನಬಸವ ಶ್ರೀಗಳು ಹಾಲಕೆರೆಯ ಅಭಿನವ ಶ್ರೀ ಅನ್ನದಾನ ಶ್ರೀಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಮಠಗಳ ಅಧೀನದಲ್ಲಿರುವ 28 ಶಾಖಾ ಮಠಗಳ ಅಭಿವೃದ್ಧಿ ಪರ್ವದೊಂದಿಗೆ 28 ಶಾಖಾ ಮಠಗಳ ಭಕ್ತರನ್ನು ತಮ್ಮತ್ತ ಸೆಳೆಯುವಂತೆ ಮಾಡುವುದರ ಜೊತೆಗೆ ರೈತರ ಸ್ವಾಮೀಜಿಯಾಗಿ ಮಹಿಳೆಯರ ಸ್ವಾಮೀಜಿಯಾಗಿ ಸಮಾಜ ಸುಧಾರಣೆ ಕೆಲಸ ಮಾಡುತ್ತಾ ಅನೇಕ ಸಾಮಾಜಿಕ ಉನ್ನತಿಗಾಗಿ ತಮ್ಮ ಜೀವನ ಮುಡುಪಿಟ್ಟು ಶ್ರಮಿಸಿದ ಶ್ರೀಗಳು ಹಾಲಕೆರೆ ಮಠವನ್ನು ಉತ್ತುಂಗಕ್ಕೆ ಏರಿಸಿದರು ಶ್ರೀ ಮಠವು ಕನ್ನಡ ನಾಡಿನಲ್ಲಿಯೇ ರೈತರ ಮಠ ಎನ್ನುವ ಮಾದರಿಯಲ್ಲಿ ಬಿಂಬಿಸುವಂತೆ ಪ್ರತಿ ಜಾತ್ರೆ ಸಭೆ ಸಮಾರಂಭಗಳಲ್ಲಿ ರೈತ ಚಿಂತನ ಘೋಷ್ಠಿಗಳನ್ನು ಆಗಾಗ ಏರ್ಪಡಿಸುತ್ತಾ ರೈತರಿಗಾಗಿ ಜೀವನ ದುದ್ದಕ್ಕೂ ಶ್ರಮಿಸಿದ ಅಭಿನವ ಅನ್ನದಾನ ಶ್ರೀಗಳು ರೈತ ಜಾಗೃತಿಗಾಗಿ ಅನೇಕ ಶ್ರಮಿಕ ರೈತರನ್ನು ಗುರುತಿಸಿ ಗೌರವಿಸಿ ಸತ್ಕರಿಸಿ ರೈತರ ಸೇವೆಯನ್ನು ಸಮಾಜಕ್ಕೆ ತೋರಿಸಿ ಕೊಡುವಲ್ಲಿ ಶ್ರೀಗಳು ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ರೈತರಿಗಾಗಿ ರೈತರ ಜಾಗೃತಿ ಮೂಡಿಸಲು ಹಾಲಕೆರೆಯಿಂದ ಉಳಿವಿ ಚೆನ್ನ ಬಸವಣ್ಣನ ದೇವಸ್ಥಾನಕ್ಕೆ 108 ಚಕ್ಕಡಿಗಳನ್ನು ಕಟ್ಟಿಕೊಂಡು ದಾರಿ ಮಧ್ಯದಲ್ಲಿ ಬರುವ ಹಳ್ಳಿಗಳಲ್ಲಿ ರೈತ ಜಾಗೃತಿಗಳನ್ನು ಏರ್ಪಡಿಸುತ್ತಾ ರೈತರಿಗಾಗಿ ಶ್ರಮಿಸಿದ ಅಭಿನವ ಅನ್ನದಾನ ಶ್ರೀಗಳು ಸೇವೆಯಂತೂ ಈ ನಾಡಿನ ರೈತರು ಮರಿಯುವಂತಿಲ್ಲ ರೈತರ ಸ್ವಾಮೀಜಿ ಅಷ್ಟೇ ಅಲ್ಲದೆ ಸಮಾಜದಲ್ಲಿ ಆಗಿನ ಕಾಲದಲ್ಲಿ ನಿರ್ಲಕ್ಷಗೊಳಗಾಗಿದ್ದ ನಾಲ್ಕು ಗೋಡೆಗಳ ಮಧ್ಯೆ ಇರುವ ಮಹಿಳೆಯರು ಸಮಾಜದಲ್ಲಿ ಗುರುತಿಸುವ ಕಾರ್ಯವನ್ನು ಮಾಡಬೇಕು ಎನ್ನುವ ದೃಷ್ಟಿಯಿಂದ ಮಹಿಳೆಯರಿಗಾಗಿಯೇ ಬೆಳ್ಳಿರಥವನ್ನು ಮಾಡಿಸಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಹಾಲಕೆರೆಯಲ್ಲಿ ಬೆಳ್ಳಿರಥವನ್ನು ಮಹಿಳೆಯರೇ ಎಳೆಯುವಂತೆ ಮಾಡಿದರು ಹಾಗೂ ಮಹಿಳೆಯರನ್ನು ಸಮಾಜದ ಮುನ್ನಲೆಗೆ ತರಬೇಕು ಎನ್ನುವ ವಿಚಾರದಿಂದಾಗಿ 5001 ಮುತ್ತೈದೆಯರನ್ನು ಉಡಿ ತುಂಬಿ ಸಮಾಜದ ಮುನ್ನೆಲೆಗೆ ಬರುವಂತೆ ಮಹಿಳೆಯರಿಗಾಗಿ ಶ್ರಮಿಸಿದ ಸ್ವಾಮೀಜಿ ಎಂದರೆ ತಪ್ಪಾಗಲಿಕ್ಕಿಲ್ಲ ಇಷ್ಟೇ ಅಲ್ಲದೆ ಶಿವಯೋಗ ಮಂದಿರದ ಅಧ್ಯಕ್ಷರಾದ ನಂತರ ಹಾನಗಲ್ ಕುಮಾರ ಶ್ರೀಗಳವರಿಂದ ನಿರ್ಮಾಣವಾಗಿದ್ದ ಶಿವಯೋಗ ಮಂದಿರವನ್ನು ಅಭಿವೃದ್ಧಿಯ ಪರ್ವದಡೆಗೆ ಕೊಂಡಯುವಲ್ಲಿ ಪ್ರಮುಖ ಪಾತ್ರವಹಿಸಿ ಸ್ವಾಮೀಜಿಗಳನ್ನು ನಿರ್ಮಾಣ ಮಾಡುವ ಕೇಂದ್ರ ಶಿವಯೋಗ ಮಂದಿರವನ್ನು ಸಾಕಷ್ಟು ಅಭಿವೃದ್ಧಿ ಪಡಿಸುವುದರ ಮೂಲಕ ಅಲ್ಲಿನ ವಟು ದೇವರುಗಳಿಗೆ ದೇವರಾಗಿ ಸಲ್ಲಿಸಿದ ಸೇವೆ ಅಮೂಲ್ಯವಾದದ್ದು ಶಿವಯೋಗ ಮಂದಿರದ ಮೇಲಿನ ಪ್ರೀತಿ ಮಮತೆ ಕಾಳಜಿಯಿಂದಾಗಿ ಹೊಸಪೇಟೆ ಮಠದ ಜಮೀನು ಮಾರಿ ವಿಶ್ವದಲ್ಲಿಯೇ ಎರಡನೆಯ ಎತ್ತರದ ತೆರನ್ನು ಮಾಡಿಸಿ ದೇಶದಲ್ಲಿಯೇ ಶಿವಯೋಗ ಮಂದಿರವನ್ನು ಗುರುತಿಸಿದಂತಹ ಸ್ವಾಮೀಜಿ ಯಾರಾದರೂ ಇದ್ದರೆ ಅದು ಅಭಿನವ ಅನ್ನದಾನ ಶ್ರೀಗಳು ಅಂದರೆ ತಪ್ಪಾಗಲಿಕ್ಕಿಲ್ಲ ಹೀಗೆ ಅನೇಕ ಸಮಾಜ ಕಾರ್ಯಗಳ ಜೊತೆಗೆ ಮಠಗಳ ಅಭಿವೃದ್ಧಿ ಹೊಸಪೇಟೆ ಮಠದ ಶಾಖಾ ಮಠಗಳು ಕೊಟ್ಟೂರು ಮಠದ ಶಾಖ ಮಠಗಳ ಅಭಿವೃದ್ಧಿಗಾಗಿ ಇಡೀ ತಮ್ಮ ಜೀವನವನ್ನೇ ಮುಡುಪಿಟ್ಟು ಮಠಗಳ ಉದ್ಧಾರದ ಸಲುವಾಗಿ ಮೂಲಮಠದ ಆಸ್ತಿಗಳನ್ನು ಮಾರಿಯಾದರೂ ಅಭಿವೃದ್ಧಿಯನ್ನು ಮಾಡಬೇಕೆಂಬ ಅಚಲತೆಯಿಂದ ಇವತ್ತು ಹಾಲಕೆರೆ ಹೊಸಪೇಟೆ ಮತ್ತು ಕೊಟ್ಟೂರಿನ ಶಾಖ ಮಠಗಳು ರಾಜ್ಯದಲ್ಲಿ ಭಕ್ತಿಯ ಶ್ರದ್ಧಾ ಕೇಂದ್ರಗಳಾಗಿ ಕಂಗೊಳಿಸುತ್ತಿವೆ ಈ ರೀತಿಯಾಗಿ ವಿಶಿಷ್ಟ ವಿಭಿನ್ನ ಅಭಿಯಾನದ ಮೂಲಕ ಭಕ್ತರಲ್ಲಿ ಭಕ್ತಿಯ ಭಾವನೆಗಳನ್ನು ಬೇರೂರುವಂತೆ ಮಾಡುತ್ತಾ ರೈತರ ಸ್ವಾಮೀಜಿಯಾಗಿ ಮಹಿಳೆಯರ ಪಾಲಿನ ದೇವರಾಗಿ ಅನೇಕ ರೈತ ಪರ ಹೋರಾಟಗಳನ್ನು ಮಾಡುತ್ತಾ ವೀರಶೈವ ಲಿಂಗಾಯಿತ ಒಂದೇ ಎಂದು ಇಡೀ ನಾಡಿಗೆ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಭಿನವಶ್ರೀ ಅನ್ನದಾನ ಶ್ರೀಗಳು ಈ ರೀತಿ ಸಾಮಾಜಿಕ ಕಾರ್ಯದಿಂದ ಹಿಡಿದು ಶೈಕ್ಷಣಿಕ ಕ್ರಾಂತಿ ಮಾಡುವುದರ ಜೊತೆಗೆ ತಾವು ನಿರ್ವಹಿಸುವ ಪ್ರತಿ ಮಠಗಳಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡುವುದರ ಜೊತೆಗೆ ಹೆಸರಿಗೆ ತಕ್ಕಂತೆ ಅನ್ನದಾನ ಶ್ರೀಗಳು ಅನ್ನದಾನೇಶ್ವರನ ನಾಮದಿಂದ ನಡೆಯುವ ಯಾವ ಮಟ್ಟದಲ್ಲಿಯೂ ಪ್ರಸಾದ ಕೊರತೆ ಯಾವತ್ತೂ ಆಗಬಾರದು ಎನ್ನುವ ಒಂದು ಉದ್ದೇಶದಿಂದಾಗಿ ಅನೇಕ ಮಠಗಳಲ್ಲಿ ದಾಸೋಹ ಸೇವೆಯನ್ನು ನಿರಂತರವಾಗಿ ಮಾಡುತ್ತಾ ದಾಸೋಹದ ಸ್ವಾಮೀಜಿಯಾಗುವುದರ ಜೊತೆಗೆ ಬಡ ಮಕ್ಕಳ ದೀನ ದಲಿತರ ಮಕ್ಕಳನ್ನು ಗುರುತಿಸಿ ಅಂಧ ಮಕ್ಕಳನ್ನು ಗುರುತಿಸಿ ಅವರುಗಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಂತ ಸ್ವಾಮೀಜಿ ಅಭಿನವ ಅನ್ನದಾನೇಶ್ವರ ಶ್ರೀಗಳು ಹೀಗೆ ಅನೇಕ ಸತ್ಕಾರ್ಯಗಳನ್ನು ಮಾಡುತ್ತಾ ತಮಗೆ ತಕ್ಕ ಹಾಗೆ ಮರಿ ಶಿಷ್ಯನನ್ನು ಹುಡುಕಿ ನೇಮಿಸಿ ಅಭಿನವ ಅನ್ನದಾನ ಶ್ರೀಗಳು ಲಿಂಗೈಕರಾದ ನಂತರ ಕರುಣೆಯ ಕಂದರಾದ ಮುಪ್ಪಿನ ಬಸವಲಿಂಗ ಶ್ರೀಗಳವರ ಅವತಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅನೇಕ ಮಠಗಳಲ್ಲಿ ಗುರುಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುಪ್ಪಿನ ಬಸವಲಿಂಗ ಸ್ವಾಮಿಗಳು ಪ್ರತಿಯೊಂದು ಶಾಖ ಮಠಗಳ ಲಾಲನೆ ಪೋಷಣೆ ಪಾಲನೆ ಮಾಡುತ್ತಾ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಅಭಿವೃದ್ಧಿಯ ಪರ್ವವನ್ನು ಸಮಾಜದಲ್ಲಿ ಸೃಷ್ಟಿಸಿ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ತಮ್ಮ ಎಲ್ಲಾ ಕೆಲಸ ಕಾರ್ಯಗಳು ಪೂಜಾ ಕೈಂಕರ್ಯಗಳ ಕಾರ್ಯಗಳನ್ನು ಮುಂದುವರಿಸಿಕೊಂಡು ನಡೆಯುತ್ತಿದ್ದಾರೆ.
ಅಭಿನವ ಅನ್ನದಾನ ಶ್ರೀಗಳು ತಾವುಗಳು ಲಿಂಗೈಕರಾಗುತ್ತೇವೆ ಎಂದು ಮೊದಲೇ ಅನಿಸಿತ್ತೇನೋ ಅನ್ನುವ ಹಾಗೆ ದಿಡೀರನೆ ತಾವು ಮೊದಲೇ ನಿಗದಿಗೊಳಿಸಿದ್ದ ಮುಪ್ಪಿನ ಬಸವಲಿಂಗ ಶ್ರೀಗಳವರ ಪಟ್ಟಾಭಿಷೇಕ ಕಾರ್ಯಕ್ರಮ ಏರ್ಪಡಿಸಿ ತಮ್ಮ ಪರಮ ಶಿಷ್ಯನಿಗೆ ಪಟ್ಟಾಭಿಷೇಕ ಮಾಡಿ ಶ್ರೀ ಮುಪ್ಪಿನ ಬಸವಲಿಂಗ ಎಂದು ನಾಮಕರಣಗೊಳಿಸಿ,ಮಠದ ಎಲ್ಲಾ ಹಾಗೂ ಹೋಗುಗಳನ್ನು ಇನ್ನು ಮುಂದೆ ನನ್ನ ರೂಪದಲ್ಲಿ ನಿಮ್ಮ ಮುಪ್ಪಿನ ಬಸವಲಿಂಗ ಶ್ರೀಗಳು ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದು ಭಕ್ತರಿಗೆ ಘೋಷಣೆ ಮಾಡಿದಾಗ ಪಟ್ಟಾಭಿಷೇಕಕ್ಕೆ ಕಾರ್ಯಕ್ರಮಕ್ಕೆ ಸೇರಿದ್ದ ಪ್ರತಿಯೊಬ್ಬ ಭಕ್ತರಲ್ಲಿ ಹಾಗೆ ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ಬಂದು ಹೋಯಿತು ಸೇರಿದ್ದ ಭಕ್ತರೆಲ್ಲಾ ದಿಗ್ರಾಂತಮರಾಗಿ ಏಕಾಏಕಿಯಾಗಿ ನಮ್ಮ ಶ್ರೀಗಳು ಹೀಗೇಕೆ ಮಾತನಾಡುತ್ತಿದ್ದಾರೆ ಎಂದು ಗಾಬರಿಗೊಂಡರು.
ತಾವು ಲಿಂಗೈಕ್ಯರಾಗುವ ಸೂಚನೆ ಮೊದಲೇ ಗೊತ್ತಿತ್ತು ಏನೋ ಎನ್ನುವ ಹಾಗೆ ಮಾತನಾಡಿದ ಶ್ರೀಗಳು ಪಟ್ಟಾಭಿಷೇಕ ನಂತರದ ಕೆಲವೇ ಕೆಲವು ದಿನಗಳಲ್ಲಿ ಲಿಂಗೈಕರಾದರು ಭಕ್ತರಿಗೆ ಸೂಚಿಸಿ ಲಿಂಗೈಕ್ಯ ಆದರೂ ಎನ್ನುವ ಹಾಗೆ ಭಕ್ತರಿಗೆ ದಿಬ್ರಮೆ ಆಯಿತು ಶ್ರೀಗಳು ಲಿಂಗೈಕರಾದಾಗ ಮುಪ್ಪಿನ ಬಸವಲಿಂಗ ಶ್ರೀಗಳು ಸ್ವತ ತಮ್ಮ ತಾಯಿಯನ್ನೇ ಕಳೆದುಕೊಂಡಿದ್ದೇನೆ ಎನ್ನುವ ಭಾವದೊಂದಿಗೆ ಗಳಗಳನೆ ಅತ್ತಿದ್ದು ಹಾಲಕೆರೆ ಹೊಸಪೇಟಿ ಕೊಟ್ಟೂರು ಮಠದ ಭಕ್ತರಲ್ಲಿ ಹಚ್ಚಳಿಯದ ಹಾಗೆ ಉಳಿದುಬಿಟ್ಟಿತು ಅಭಿನವ ಅನ್ನದಾನ ಶ್ರೀಗಳು ತೋರಿಕೊಟ್ಟ ಮಾರ್ಗದಲ್ಲಿಯೇ ಮುನ್ನಡಿಸಿಕೊಂಡು ಸಾಗಿ ಕೆಲವೇ ದಿನಗಳಲ್ಲಿ ಮೂರು ಮಠಗಳ ಮತ್ತು ಶಾಖ ಮಠಗಳ ಭಕ್ತರ ಮನಸ್ಸನ್ನು ಗೆಲ್ಲುವಲ್ಲಿ ಮುಪ್ಪಿನ ಬಸವಲಿಂಗ ಶ್ರೀಗಳು ಯಶಸ್ವಿ ಆಗಿದ್ದರ ಫಲವಾಗಿ ಅಭಿನವ ಅನ್ನದಾನ ಶ್ರೀಗಳನ್ನು ನಾವು ಮುಪ್ಪಿನ ಬಸವಲಿಂಗ ಶ್ರೀಗಳ ಮೂಲಕ ಕಾಣುತ್ತಿದ್ದೇವೆ ಎಂದು ಮೂರು ಮಠಗಳ ಹಾಗೂ ಶಾಖ ಮಠಗಳ ಭಕ್ತರುಗಳು ಹೇಳುತ್ತಿದ್ದಾರೆ.
ಅಭಿನವ ಅನ್ನದಾನ ಶ್ರೀಗಳ ಲಿಂಗೈಕ್ಯರಾದ ನಂತರ ಅವರು ಹಾಕಿಕೊಟ್ಟ ಪರಂಪರೆಯ ಮಾರ್ಗದರ್ಶನಗಳನ್ನು ಪಾಲಿಸುತ್ತಾ ಹಾಲಕೆರೆ ಹೊಸಪೇಟೆ ಕೊಟ್ಟೂರು ಮಠಗಳ ಶಾಖಾಮಠಗಳ ಕಾರ್ಯಕ್ರಮಗಳನ್ನು ಹಾಗೂ ಶ್ರೀಗಳು ಅನುಸರಿಸಿಕೊಂಡು ಬಂದಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಚಾಚು ತಪ್ಪದೇ ಪಾಲಿಸುತ್ತಾ ಮುನ್ನಡೆಸಿಕೊಂಡು ನಡೆದಿರುತ್ತಾರೆ ಹೀಗೆ ಈ ವರ್ಷ ಇದೇ ದಿನಾಂಕ 13-14ರಂದು ಹಾಲಕೆರೆಯ ಜಾತ್ರಾ ಮಹೋತ್ಸವ ಏರ್ಪಡುತ್ತಿದ್ದು ಅಕ್ಷರ ಜಾತ್ರೆ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಜಾತ್ರೆಗೆ ಚಾಲನೆ ನೀಡುತ್ತಿದ್ದು ನಾಡಿನ ಹರಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಅದ್ದೂರಿ ಜಾತ್ರೋತ್ಸವವನ್ನು ಮಾಡುತ್ತಿದ್ದಾರೆ ಸಮಾಜದಲ್ಲಿ ವಿದ್ಯಾರ್ಥಿಗಳಲ್ಲಿ ಅಕ್ಷರ ಜಾಗೃತಿಗಾಗಿ ಅಕ್ಷರ ಜಾತ್ರಾ ಮಹೋತ್ಸವವನ್ನು ಮಾಡುತ್ತಿದ್ದು ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಯ ಮುನ್ನಲೆಗಾಗಿ ಮುಪ್ಪಿನ ಬಸವಲಿಂಗ ಶ್ರೀಗಳು ವಿಶೇಷ ಅಭಿಯಾನದ ಮೂಲಕ ಅಕ್ಷರ ಜಾತ್ರೋತ್ಸವವನ್ನು ನೆರವೇರಿಸುತ್ತಿದ್ದಾರೆ.

-ಜಗದೀಶ.ಎಸ್.ಗಿರಡ್ಡಿ,ಲೇಖಕರು.ಗೊರಬಾಳ
9902470856

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ